ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ 2023 ಕ್ಕೆ ಬಿಜೆಪಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಪ್ರಾರಂಭಿಸಿದ್ದಾರೆ. ಪಕ್ಷವು ಇನ್ನೂ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿಲ್ಲ. ಈ ಪೈಕಿ (ಹುಬ್ಬಳ್ಳಿ-ಧಾರವಾಡ ಕೇಂದ್ರ) ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ, ಲಿಂಗಾಯತ ಸಮುದಾಯದ ಪ್ರಮುಖ ಮುಖಂಡ ಜಗದೀಶ್ ಶೆಟ್ಟರ್ ಅವರಿಕೆ ಟಿಕೆಟ್‌ ಕೈ ತಪ್ಪಿದೆ. ಅಲ್ಲದೆ, ನಿನ್ನೆ ಶೆಟ್ಟರ್‌ ದೆಹಲಿಗೆ ತೆರಳಿ ಹೈಕಮಾಂಡ್‌ ಭೇಟಿಯಾಗಿದ್ದರು. ಇಂದು ಬಿಜೆಪಿ ಮೂರನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಶೆಟ್ಟರ್‌ ಹೆಸರು ಇರುತ್ತಾ ಎಂಬ ಕುತೂಹಲ ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಆರು ಬಾರಿ ಶಾಸಕರಾಗಿರುವ ಶೆಟ್ಟರ್ ಅವರ ಉಮೇದುವಾರಿಕೆ ಕುರಿತ ಸಸ್ಪೆನ್ಸ್ ಗುರುವಾರವೂ ಮುಂದುವರಿದಿದೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಸ್ಥಾನದಿಂದ ಸ್ಪರ್ಧಿಸುವವರ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಬಿಜೆಪಿ ಇದುವರೆಗೆ 212 ಅಭ್ಯರ್ಥಿಗಳ ಹೆಸರನ್ನು ಮಾತ್ರ ಬಿಡುಗಡೆ ಮಾಡಿದೆ. ಈಗಾಗಲೇ ಅತೃಪ್ತ ಅಭ್ಯರ್ಥಿಗಳು ಪಕ್ಷಾಂತರವಾಗುತ್ತಿದ್ದಾರೆ. ಇಂದು ಬಿಡುಗಡೆಯಾಗುವ ಪಟ್ಟಿ ಕೇಸರಿ ಪಕ್ಷದ ನಿರ್ಣಾಯಕ ಪಟ್ಟಿಯಾಗಲಿದೆ. ಟಿಕೆಟ್ ವಂಚಿತ ಹಿರಿಯ ನಾಯಕರಲ್ಲಿ ಎಂ.ಪಿ.ಕುಮಾರಸ್ವಾಮಿ, ಸಿ.ಎಂ.ನಿಂಬಣ್ಣನವರ್, ಮಾಡಾಳ್ ವಿರೂಪಾಕ್ಷಪ್ಪ, ಸುಕುಮಾರ್ ಶೆಟ್ಟಿ, ಎನ್.ಲಿಂಗಣ್ಣ, ಎಸ್.ಎ.ರವೀಂದ್ರನಾಥ್, ನೆಹರು ಓಲೇಕಾರ ಸೇರಿದ್ದಾರೆ.


ಇದನ್ನೂ ಓದಿ: Karnataka Assembly Election 2023: ಮೊದಲ ದಿನವೇ 221 ನಾಮಪತ್ರ ಸಲ್ಲಿಕೆ


ಶೆಟ್ಟರ್‌ಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತ ಎಂದು ಬಿಜೆಪಿ ಮುಖಂಡ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಆರು ಬಾರಿ ಶಾಸಕರಾಗಿರುವ ಶೆಟ್ಟರ್‌ಗೆ ಮತ್ತೊಂದು ಬಾರಿ ಶಾಸಕರಾಗಿ ಆಯ್ಕೆಯಾಗುವುದಿಲ್ಲ ಎಂದು ಬಿಜೆಪಿ ಹೇಳಿತ್ತು. ಬಿಜೆಪಿಯ ಘೋಷಣೆಗೆ ಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ನಿರ್ಧಾರ ತಮಗೆ ಸ್ವೀಕಾರಾರ್ಹವಲ್ಲ, ಏನೇ ಬಂದರೂ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದರು. ಅಲ್ಲದೆ ನಿನ್ನೆ ದೆಹಲಿಗೆ ತೆರಳಿ ಪಕ್ಷದ ಹಿರಿಯರ ಜೊತೆ ಮಾತನಾಡಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.