ಮೈಸೂರು: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವು ಕನಿಷ್ಠ 130 150 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಮತಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ’ ವೆಂದು ಹೇಳಿದರು.


COMMERCIAL BREAK
SCROLL TO CONTINUE READING

ರಾಜ್ಯದ ಎಲ್ಲಾ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕು ಚಲಾಯಿಸಬೇಕು. ರಾಜ್ಯದ ಭವಿಷ್ಯವನ್ನು ಗಮನದಲ್ಲಿಟ್ಟಕೊಂಡು ಅಭ್ಯರ್ಥಿಗಳನ್ನು ಚುನಾಯಿಸಬೇಕು. ಯಾರು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ರಾಜ್ಯವನ್ನು ಅಭಿವೃದ್ಧಿ ಮಾಡುತ್ತಾರೋ ಅವರಿಗೆ ವೋಟು ಹಾಕಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.


ಇದನ್ನೂ ಓದಿ: Karnataka Election 2023: ತಮ್ಮ ಓಟನ್ನು ತಾವೇ ಹಾಕಿಕೊಳ್ಳದ ಅಭ್ಯರ್ಥಿಗಳು!


ಚುನಾವಣೆಯಲ್ಲಿ ಹಣ ರಾಜಕೀಯದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ‘ಚುನಾವಣಾ ಕಣದಲ್ಲಿ ಹಣಬಲದ ರಾಜಕೀಯ ಇರುತ್ತದೆ. ಬಿಜೆಪಿಯವರಿಗೆ ಹಣ ಬಿಟ್ಟು ಬೇರೆ ಏನಿದೆ? ಮತದಾರರ ಬಳಿ ಹೋಗಿ ಅವರು ಏನು ಹೇಳುತ್ತಾರೆ? ರಾಜ್ಯಕ್ಕೆ ಏನು ಮಾಡಿದ್ದೀವಿ ಅಂತಾ ಅವರು ಹೇಳುತ್ತಾರೆ? ಯಾವ ಅಭಿವೃದ್ಧಿ ಮಾಡದ್ದೀವಿ ಅಂತಾ ಹೇಳುತ್ತಾರೆ? ಇದುವರೆಗೆ ಅವರಿಗೆ ಒಂದು ಮನೆ ನೀಡಲು ಆಗಿಲ್ಲ. 7 ಕೆಜಿ ಅಕ್ಕಿಯನ್ನು 4 ಕೆಜಿ ಮಾಡಿದ್ದಾರೆ. ಯಾವುದೇ ನೀರಾವರಿ ಯೋಜನೆ ಮಾಡಿಲ್ಲ. ಮತದಾರರ ಹತ್ತಿರ ವೋಟು ಕೇಳಲು ಅವರು ಏನು ಮಾಡಿದ್ದೀವಿ ಎಂದು ಹೇಳುತ್ತಾರೆ?’ ಅಂತಾ ಪ್ರಶ್ನಿಸಿದರು.


4 ವರ್ಷದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ. ಹೀಗಾಗಿ ದುಡ್ಡಿನ ಮೂಲಕ ಚುನಾವಣೆ ಗೆಲ್ಲಬೇಕೆಂದು ಬಿಜೆಪಿಯವರು ಶತಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರು ಬೆಲೆ ಏರಿಕೆ, ಭ್ರಷ್ಟಾಚಾರ, 40% ಕಮಿಷನ್ ಬಗ್ಗೆ ಮಾತನಾಡಿದ್ದೀರಾ? ಹೀಗಾಗಿ ಜನರು ಅವರಿಗೆ ಯಾಕೆ ವೋಟು ಹಾಕುತ್ತಾರೆ? ಪ್ರಧಾನಿ ಮೋದಿ ಬಂದು ಹೇಳಿದ ತಕ್ಷಣ ಜನರು ಅವರಿಗೆ ಯಾಕೆ ವೋಟು ಹಾಕುತ್ತಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.


ಇದನ್ನೂ ಓದಿ: 1.50 ಲಕ್ಷ ರೂ. ಖರ್ಚು ಮಾಡಿ ಮತ ಹಾಕಲು ಬಂದ ವ್ಯಕ್ತಿಗೆ ನಿರಾಸೆ..! ವೋಟರ್‌ ಲಿಸ್ಟ್‌ನಿಂದ ಹೆಸರೆ ಡಿಲೀಟ್‌


ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಸಿಗಲಿದೆ. ಕಾಂಗ್ರೆಸ್‍ 130-150 ಸೀಟುಗಳನ್ನು ಗೆಲ್ಲಲಿದೆ. ರಾಜ್ಯದ ಮತದಾರರು ಬಿಜೆಪಿಯವರಿಗೆ ತಕ್ಕಪಾಠ ಕಲಿಸಲಿದ್ದಾರೆ. ಮೇ 13ರ ಫಲಿತಾಂಶ ಬರುವವರೆಗೂ ಕಾದು ನೋಡಿ ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದರು. ಈ ವೇಳೆ ಪುತ್ರ, ವರುಣ ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಜೊತೆಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.