ಬೆಂಗಳೂರು : ಈ ಬಾರಿಯ ಚುನಾವಣಾ ಕಣ ರಂಗೇರಿದೆ. ಮತದಾನದ ಪ್ರಮಾಣವೂ ಹೆಚ್ಚು ಮಾಡಲು ಚುನಾವಣಾ ಆಯೋಗ ಸೆಲೆಬ್ರೆಟಿಸ್, ಸ್ಟಾರ್ ಐಕಾನ್ಸ್ ಮೂಲಕ ಮತದಾನದ ಜಾಗೃತಿ ಮೂಡಿಸುತ್ತಿದೆ. ಇದೀಗ ಮತದಾನ ಪ್ರಮಾಣ ಹೆಚ್ಚು ಮಾಡಲು ಹಾಗೂ ಮತದಾನದಿಂದ ವಂಚಿತರಾಗುತ್ತಿದ್ದ ಮಹಿಳೆಯರಿಗೆ ರಾಜ್ಯ ಮಹಿಳಾ ಆಯೋಗ ಆಸರೆಯಾಗಿದೆ.


COMMERCIAL BREAK
SCROLL TO CONTINUE READING

ಹೌದು.. ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಮತಗಟ್ಟೆ ಬಂದು ಘಂಟೆಗಟ್ಟಲೇ ಕ್ಯೂನಲ್ಲಿ ನಿಂತು ಮತದಾನ ಮಾಡಲು ಕಷ್ಟ ಆಗುತ್ತಿದೆ. ಇದ್ರಿಂದ ಮತದಾನ ಮಾಡಲು ಕೆಲವರು ಮನಸ್ಸು ಮಾಡಲ್ಲ. ಹೀಗಾಗಿ ಆದ್ಯತೆ ಮೇರೆಗೆ ಕ್ಯೂನಲ್ಲಿ ನಿಲ್ಲದೇ ನೇರ ಮತದಾನಕ್ಕೆ ಅವಕಾಶ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ, ಮಹಿಳಾ ಆಯೋಗ ಪತ್ರ ಬರೆದಿತ್ತು. ಈ ಪತ್ರಕ್ಕೆ ಇದೀಗಾ ಸ್ಪಂದನೆ ಸಿಕ್ಕಿದೆ.


ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮೇಲೆ ಜನರಿಗೆ ವಿಶ್ವಾಸವಿಲ್ಲ - ಸಿಎಂ ಬೊಮ್ಮಾಯಿ


ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ರಾಜ್ಯ ಸಂಚಾರ ಮಾಡುವಾಗ ಹಲವು ಜಿಲ್ಲೆಗಳಲ್ಲಿ ಮಹಿಳೆಯರು ಈ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಮತಗಟ್ಟೆಗೆ ಹೋಗಿ ಕ್ಯೂನಲ್ಲಿ ನಿಂತುಕೊಳ್ಳಲು ಆಗಲ್ಲ ಅನ್ನೋದನ್ನ ಪ್ರಮೀಳಾ ನಾಯ್ಡು ಗಮನಕ್ಕೆ ತಂದಿದ್ದರು. ಇದ್ರಿಂದ ಹಲವು ಮಹಿಳೆಯರು ಮತದಾನದಿಂದ ವಂಚಿತರಾಗುವ ಆತಂಕದಿಂದ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಒಂದು ವಾರದ ನಂತರ ಮಹಿಳಾ ಆಯೋಗಕ್ಕೆ ಮರು ಪತ್ರ ಬರೆದಿದ್ದು, ಆದ್ಯತೆ ಮೇರೆಗೆ ಅವಕಾಶ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Karnataka Election 2023: ಎಪ್ರಿಲ್ 29ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ!


ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಆದ್ಯತೆ ಮೇರೆಗೆ ಅಲ್ಲಿನ ಚುನಾವಣಾ ಸಿಬ್ಬಂದಿಗಳು ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ನೇರ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಎಲ್ಲಿಯೂ ಕ್ಯೂ ನಲ್ಲಿ ನಿಲ್ಲದಂತೆ, ಮತಗಟ್ಟೆಯ ಆವರಣಕ್ಕೆ ಬಂದ ಕೂಡಲೇ ಅವರನ್ನ ಆರೈಕೆ ಮಾಡಿ, ಹೊರ ಕಳಿಸುವ ತನಕ ಅವ್ರ ಮೇಲೆ ಅಲ್ಲಿನ‌ ಸಿಬ್ಬಂಧಿಗಳು ನಿಗಾ ವಹಿಸಲಿದ್ದಾರೆ. 


ಅದೇನೆ ಆಗ್ಲಿ ರಾಜ್ಯ ಮಹಿಳಾ ಆಯೋಗ ಬರೆದ ಪತ್ರ ರಾಜ್ಯದ ಅದೆಷ್ಟೋ ಮಹಿಳೆಯರಿಗೆ ನೆರವಾಗಿದೆ. ಬಿಸಿಲಿನಲ್ಲಿ ಕ್ಯೂನಲ್ಲಿ ನಿಂತು ಮತದಾನ ಮಾಡಲಾಗದೇ ಸುಮಾರು ಮಹಿಳೆಯರು ಮತದಾನದಿಂದ ವಂಚಿತರಾಗ್ತಿದ್ದರು.  ಇದಕ್ಕೆ ಬ್ರೇಕ್ ಹಾಕಲು ಮಹಿಳಾ ಆಯೋಗ ತೆಗೆದುಕೊಂಡ ದಿಟ್ಟ ಹೆಜ್ಜೆ ನಿಜಕ್ಕೂ ಪ್ರಶಂಸನೀಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.