ಚುನಾವಣೆಗೋಸ್ಕರ ಕಾಂಗ್ರೆಸ್ನಿಂದ ದೇಶದ ಅಡಿಪಾಯ-ಅಸ್ಮಿತೆ ಅಲುಗಾಡಿಸುವ ಪ್ರಯತ್ನ: ಬಿಜೆಪಿ
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪಿಎಫ್ಐ-ಎಸ್ಡಿಪಿಐ ಗೂಂಡಾಗಳನ್ನು ಬಿಡುಗಡೆ ಮಾಡಿ ಕರ್ನಾಟಕದಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಬಿಜೆಪಿ ಕಿಡಿಕಾರಿದೆ.
ಬೆಂಗಳೂರು: ಕಾಂಗ್ರಸ್ ಬಾಹ್ಯವಾಗಿ ಉಗ್ರರನ್ನು ಬೆಂಬಲಿಸಿದರೆ, ಅಂತರಿಕವಾಗಿ ಎಸ್ಡಿಪಿಐ ಜೊತೆ ಮೈತ್ರಿ ಮಾಡಿಕೊಂಡಿದ್ದು ಬಹಿರಂಗವಾಗಿದೆ ಎಂದು ಬಿಜೆಪಿ ಆರೋಪಿಸಿದೆ. #CommunalCongress ಹ್ಯಾಶ್ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘2018ರ ವಿಧಾನಸಭಾ ಚುನಾವಣೆಯಲ್ಲಿ ಮಾಡಿಕೊಂಡಿದ್ದ ಒಳ ಒಪ್ಪಂದ ಇದೀಗ ಬಹಿರಂಗವಾಗಿದೆ. ಈಗ ಎದುರುಬದರು ನಿಂತಿರುವುದೂ ಅಂಥದ್ದೇ ನಾಟಕ. ಅವು ಸಮಾಜವಿರೋಧಿ ಶಕ್ತಿಗಳೇ ಆಗಿರಲಿ, ಅಧಿಕಾರಕ್ಕಾಗಿ ಯಾರೊಂದಿಗೂ ಕೈಜೋಡಿಸಲು ಕಾಂಗ್ರೆಸ್ ಹೇಸುವುದಿಲ್ಲ’ವೆಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: Chamarajanagar : ಮಾ.18ಕ್ಕೆ ಲೋಕಾರ್ಪಣೆಯಾಗಲಿದೆ 108 ಅಡಿ ಎತ್ತರದ ಮಲೆಮಹದೇಶ್ವರ ಪ್ರತಿಮೆ!
ಕರ್ನಾಟಕದಲ್ಲಿ ಕಾಂಗ್ರೆಸ್ ಹಡಗು ಮುಳಗಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಡಾ.ಜಿ.ಪರಮೇಶ್ವರ್ ಸೋಲುವ ಮೊದಲೇ ಬೇರೆಡೆ ಪಲಾಯನ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.