Karnataka Congress : ನಾಳೆ ಕಾಂಗ್ರೆಸ್ ಮೊದಲ ಹಂತದ ಪಟ್ಟಿ ಬಿಡುಗಡೆ? ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!

ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಲಿದ್ದಾರೆ. ಅಲ್ಲದೆ, ನಾಲ್ಕೈದು ಹಾಲಿಗಳಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಇದೆ. ಆ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಿದೆ ಎಂದು ಹೇಳಲಾಗುತ್ತಿದೆ. 

Written by - Channabasava A Kashinakunti | Last Updated : Mar 16, 2023, 04:11 PM IST
  • ನಾಳೆ ಕಾಂಗ್ರೆಸ್ ಮೊದಲ ಹಂತದ ಪಟ್ಟಿ ಬಿಡುಗಡೆ
  • ಯಾವ್ಯಾವ ಕ್ಷೇತ್ರಕ್ಕೆ ಒಂದೇ ಹೆಸರು
  • ಒಂದು ಕ್ಷೇತ್ರಕ್ಕೆ ಎರಡು ಹೆಸರುಗಳು ಇರುವ ಪಟ್ಟಿ
Karnataka Congress : ನಾಳೆ ಕಾಂಗ್ರೆಸ್ ಮೊದಲ ಹಂತದ ಪಟ್ಟಿ ಬಿಡುಗಡೆ? ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ! title=

ನವದೆಹಲಿ : ನಾಳೆ ಕಾಂಗ್ರೆಸ್ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನಾಳೆ ದೆಹಲಿಯಲ್ಲಿ ಎಐಸಿಸಿ‌ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಪಟ್ಟಿ ಫೈನಲ್ ಮಾಡಿ ಘೋಷಣೆಯಾಗಲಿದೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಲಿದ್ದಾರೆ. ಅಲ್ಲದೆ, ನಾಲ್ಕೈದು ಹಾಲಿಗಳಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಇದೆ. ಆ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಿದೆ ಎಂದು ಹೇಳಲಾಗುತ್ತಿದೆ. 

ದೆಹಲಿಯಲ್ಲಿ ನಾಳೆ ಮಧ್ಯಾಹ್ನ 3 ಕ್ಕೆ ಚುನಾವಣಾ ಸಮಿತಿ ಸಭೆಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆಯಲ್ಲಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ. ಪರಮೇಶ್ವರ್ ಭಾಗಿಯಾಗಲಿದ್ದಾರೆ. ಮಾರ್ಚ್ 20 ರಂದು ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಈ ನಂತರ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : B Sriramulu : ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಶೇ.15 ರಷ್ಟು ವೇತನ ಹೆಚ್ಚಳ!

ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ 

ಯಾವ್ಯಾವ ಕ್ಷೇತ್ರಕ್ಕೆ ಒಂದೇ ಹೆಸರು

ಗೋಕಾಕ್ - ಅಶೋಕ್ ಪೂಜಾರಿ, ಹುನಗುಂದ - ವಿಜಯಾನಂದ ಕಾಶಪ್ಪನವರ್, ಮುದ್ದೇಬಿಹಾಳ - ಸಿ.ಎಸ್ ನಾಡಗೌಡ, ರಾಯಚೂರು - ಎನ್.ಎಸ್ ಬೋಸರಾಜ್, ಕನಕಗಿರಿ - ಶಿವರಾಜ್ ತಂಗಡಗಿ , ಯಲಬುರ್ಗಾ - ಬಸವರಾಜ್ ರಾಯರೆಡ್ಡಿ, ಕಾರವಾರ - ಸತೀಶ್ ಸೈಲ್, ಭಟ್ಕಳ - ಮಂಕಾಳ ವೈದ್ಯ, ಹಾನಗಲ್ - ಶ್ರೀನಿವಾಸ್ ಮಾನೆ, ಬೈಂದೂರು - ಗೋಪಾಲ್ ಪೂಜಾರಿ, ಕೋಲಾರ - ಸಿದ್ದರಾಮಯ್ಯ, ಕಾಪು - ವಿನಯ್ ಕುಮಾರ್ ಸೊರಕೆ, ಕಡೂರು - ವೈಎಸ್‌ವಿ ದತ್ತಾ.ಬಸವನಗುಡಿ - ಯುಬಿ ವೆಂಕಟೇಶ್, ರಾಜಾಜಿನಗರ - ಪುಟ್ಟಣ್ಣ, ಸೊರಬ - ಮಧು ಬಂಗಾರಪ್ಪ, ಚಿತ್ರದುರ್ಗ - ವೀರೇಂದ್ರ ಪಪ್ಪಿ, ಹಿರಿಯೂರು -ಸುಧಾಕರ್, ಹಿರೇಕೆರೂರು - ಯುಬಿ ಬಣಕಾರ್, ವಿರಾಜಪೇಟೆ - ಪೊನ್ನಣ್ಣ, ರಾಮನಗರ - ಇಕ್ಬಾಲ್ ಹುಸೇನ್, ಮಾಗಡಿ - ಬಾಲಕೃಷ್ಣ, ಹೊಸಕೋಟೆ - ಶರತ್ ಬಚ್ಚೇಗೌಡ, ಚಿಂತಾಮಣಿ - ಎಂಸಿ ಸುಧಾಕರ್, ಚಿಕ್ಕಬಳ್ಳಾಪುರ - ಕೊತ್ತೂರ್ ಮಂಜುನಾಥ್, ಟಿ. ನರಸಿಪುರ - ಸುನಿಲ್ ಬೋಸ್, ನಿಪ್ಪಾಣಿ - ಕಾಕಾಸಾಹೇಬ್ ಪಾಟೀಲ್, ಹುಕ್ಕೇರಿ - ಎ.ಬಿ ಪಾಟೀಲ್.

ಒಂದು ಕ್ಷೇತ್ರಕ್ಕೆ ಎರಡು ಹೆಸರುಗಳು ಇರುವ ಪಟ್ಟಿ

ಚಾಮುಂಡೇಶ್ವರಿ - ಮರಿಗೌಡ ಮತ್ತು ಚಂದ್ರಶೇಖರ್, ಮಂಗಳೂರು ದಕ್ಷಿಣ - ಐವಾನ್ ಡಿಸೋಜಾ ಮತ್ತು ಜೆ ಆರ್ ಲೋಬೋ, ಬೆಳ್ತಂಗಡಿ - ರಕ್ಷಿತ್ ಮತ್ತು ಶಿವರಾಂ, ಬೆಂಗಳೂರು ದಕ್ಷಿಣ - ಆರ್ ಕೆ ರಮೇಶ್ ಮತ್ತು ಸುಷ್ಮಾ ರಾಜಗೋಪಾಲ್, ದಾಸರಹಳ್ಳಿ- ಕೃಷ್ಣಮೂರ್ತಿ ಮತ್ತು ಸಿ.ಎಂ ಧನಂಜಯ, ಕಲಘಟಗಿ - ಸಂತೋಷ್ ಲಾಡ್ ಮತ್ತು ನಾಗರಾಜ್ ಚಬ್ಬಿ. ಹೊಳಲ್ಕೆರೆ - ಸವಿತಾ ರಘು ಮತ್ತು ಆಂಜನೇಯ, ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ್ ಮತ್ತು ಮಂಜುನಾಥ್ ಗೌಡ, ಬಳ್ಳಾರಿ ಸಿಟಿ - ಅಲ್ಲಂ ಪ್ರಶಾಂತ್ ಮತ್ತು ಅನಿಲ್ ಲಾಡ್, ಶಿಗ್ಗಾಂವಿ - ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ, ಗಂಗಾವತಿ - ಇಕ್ಬಾಲ್ ಅನ್ಸಾರಿ ಮತ್ತು ಎಚ್.ಆರ್ ಶ್ರೀನಾಥ್, ಕಲಬುರಗಿ ಗ್ರಾಮೀಣ - ರೇವುನಾಯಕ ಬೆಳಮಗಿ ಮತ್ತು ವಿಜಯಕುಮಾರ್, ತೇರದಾಳ್ - ಉಮಾಶ್ರೀ ಮತ್ತು ಮಲ್ಲೇಶಪ್ಪ, ಬಾಗಲಕೋಟ - ಎಚ್ ವೈ ಮೇಟಿ ಮತ್ತು ದೇವರಾಜ್ ಪಾಟೀಲ್, ಬೆಳಗಾವಿ ಉತ್ತರ - ಫೀರೋಜ್ ಸೇಠ್ ಮತ್ತು ಆಸೀಫ್ ಸೇಠ್, ಕುಡಚಿ - ಶ್ಯಾಮ್ ಭೀಮ್ ಘಾಟ್ಗೆ ಮತ್ತು ಮಹೇಂದ್ರ ತಮ್ಮಣ್ಣ, ಕಾಗವಾಡ - ರಾಜೂ ಕಾಗೆ ಮತ್ತು ದಿಗ್ವಿಜಯ್ ದೇಸಾಯಿ, ಅಥಣಿ - ಗಜಾನನ್ ಮಂಗಸೂಳಿ ಮತ್ತು ಶ್ರೀಕಾಂತ್ ಪೂಜಾರಿ, ನಂಜನಗೂಡು - ಮಹದೇವಪ್ಪ ಮತ್ತು ದ್ರುವನಾರಾಯಣ(ದರ್ಶನಗೆ ಫೈನಲ್​),

ಹಾಲಿ ಶಾಸಕರಿರುವ ಕ್ಷೇತ್ರಕ್ಕೂ ಎರಡೆರಡು ಹೆಸರು

ಪಾವಗಡ – ವೆಂಕಟರಮಣಪ್ಪ, ಶಾಸಕ ಎಚ್.ವಿ ವೆಂಕಟೇಶ್, ಲಿಂಗಸುಗೂರು – ಡಿ‌ಎಸ್ ಹೂಲಗೇರಿ, ರುದ್ರಯ್ಯ, ಕುಂದಗೋಳ – ಕುಸುಮಾ ಶಿವಳ್ಳಿ, ಶಾಸಕಿ ಚಂದ್ರಶೇಖರ್ ಜತ್ತಲ್, ದೊಡ್ಡಬಳ್ಳಾಪುರ – ವೆಂಕಟರಮಣಯ್ಯ, ಶಾಸಕ ಬಿಸಿ ಆನಂದ್.

ಇದನ್ನೂ ಓದಿ : Bizarre Names: ಗೂಗಲ್, ಬಸ್, ಟ್ರೈನ್, ಹೈ ಕೋರ್ಟ್, ಡಾಲರ್ ಇವು ಮನುಷ್ಯರ ಹೆಸರು ಅಂತ ಹೇಳಿದ್ರೆ ನೀವು ನಂಬ್ತೀರಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News