ಬೆಂಗಳೂರು: "ನಂಬಿಸಿ ಕತ್ತು ಕುಯ್ಯುವುದು" ಎಂಬ ಮಾತಿಗೆ ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್! ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿದ್ದು, ಕಣ್ಣೀರು ಪರ್ವ, ಬಂಡಾಯ ಪರ್ವ, ನಿವೃತ್ತಿ ಪರ್ವ, ಆಕ್ರೋಶ ಪರ್ವ, ರಾಜೀನಾಮೆ ಪರ್ವ! ಹೀಗೆ ಬಿಜೆಪಿ ಈಗ ಏಕಕಾಲಕ್ಕೆ ಎಲ್ಲವನ್ನೂ ಎದುರಿಸುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.


COMMERCIAL BREAK
SCROLL TO CONTINUE READING

ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ #BJPvsBJP ಈ ಚುನಾವಣೆಯಲ್ಲಿ ಜ್ವಾಲಾಮುಖಿಯಾಗಿ ಸ್ಪೋಟಿಸುವುದು ನಿಶ್ಚಿತ ಅಂತಾ ಕಾಂಗ್ರೆಸ್ ಕುಟುಕಿದೆ. ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದಲ್ಲೇ ಗಡಿಪಾರು ಆಗಿದ್ದ, ಅನ್ನಭಾಗ್ಯದ ಅಕ್ಕಿ ಕಳ್ಳಸಾಗಣೆಯ ಆರೋಪಿ ರೌಡಿ ಶೀಟರ್‌ಗೆ ಟಿಕೆಟ್ ಕೊಡುವ ಮೂಲಕ #BJPRowdyMorchaಕ್ಕೂ ಮನ್ನಣೆ ನೀಡಿದೆ! ಬಿಜೆಪಿಯ ಟಿಕೆಟ್‌ಗೆ "ಗಡಿಪಾರು" ಆಗಿರುವುದೇ ಬಹುಮುಖ್ಯ ಮಾನದಂಡ ಎಂಬುದನ್ನು ದಿಲ್ಲಿಯಿಂದ ಇಲ್ಲಿಯವರೆಗೆ ನಿರೂಪಿಸಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.


ಇದನ್ನೂ ಓದಿ: ʼರೆಡ್ಡಿ ಪಕ್ಷʼಕ್ಕೆ ಬಿಜೆಪಿ ಅತೃಪ್ತ ನಾಯಕರ ಸಾಥ್‌..? : ʼಬಿಜೆಪಿʼ ಗೆಲ್ಲೋದು ಡೌಟ್‌


‘ಚುನಾವಣೆ ಬಂದಾಗ ವಾತಾವರಣದಲ್ಲಿ ವಿಶೇಷ ಬದಲಾವಣೆಯಾಗಿದೆ! ಹಿಜಾಬ್, ಹಲಾಲ್, ಆಜಾನ್ ಎಂದು ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಿದ್ದ ಬಿಜೆಪಿ ನಾಯಕರು ಮಸೀದಿಯ ಒಳಹೋಗುವ, ಹೊರಬರುವ ದೃಶ್ಯಗಳು ವಿಶೇಷವಾಗಿ ಕಾಣಸಿಗುತ್ತಿವೆ. ಇದಕ್ಕೆ ಏನೆಂದು ಹೆಸರಿಡುತ್ತೀರಿ ಬಿಜೆಪಿ? ತುಷ್ಟಿಕರಣ ರಾಜಕೀಯ, ಓಲೈಕೆ ರಾಜಕೀಯ ಅಥವಾ ಸೆಕ್ಯುಲರ್ ರಾಜಕೀಯ?’ ಅಂತಾ ಕಾಂಗ್ರೆಸ್ ಟೀಕಿಸಿದೆ.


‘ಬೆಲೆ ಏರಿಕೆಯ ಪರ್ವಕ್ಕೆ ಸಕ್ಕರೆಯೂ ಸೇರ್ಪಡೆಯಾಗಿದೆ. ಜನರ ಬದುಕಿಗೆ ಬೇಕಾದ ಎಲ್ಲಾ ಅತ್ಯಗತ್ಯ ವಸ್ತುಗಳ ಬೆಲೆಯನ್ನೂ ಏರಿಸಿ ಧೂರ್ತತನದ ಪರಮಾವಧಿಗೆ ತಲುಪಿದೆ ಬಿಜೆಪಿ. ಬೆಲೆ ಏರಿಕೆಗೆ "ಸಕ್ಕರೆ ತಿನ್ನಬೇಡಿ ಶುಗರ್ ಬರುತ್ತದೆ" ಎಂಬ ಬಿಟ್ಟಿ ಸಲಹೆ ಬಿಜೆಪಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಡೆಯಿಂದ ಬಂದರೂ ಆಶ್ಚರ್ಯವಿಲ್ಲ’ವೆಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.


ಇದನ್ನೂ ಓದಿ: ಸವದಿ, ಶೆಟ್ಟರ್, ಈಶ್ವರಪ್ಪ..! ಘಟಾನುಘಟಿ ನಾಯಕರ ಸಿಟ್ಟಿಗೆ ಬಲಿಯಾಗುತ್ತಾ ʼಬಿಜೆಪಿʼ..?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.