Amul vs Nandini: ಅಮೂಲ್ ಪರ ಬಿಜೆಪಿ ನಿಂತಿರುವುದೇ ನಂದಿನಿಗೆ ಅಪಾಯ- ಕಾಂಗ್ರೆಸ್
Nandini vs Amul row: ಬೇರೆ ಬ್ರಾಂಡ್ ಹಾಲುಗಳಿಗೆ ಇಲ್ಲದ ವಿರೋಧ ಅಮೂಲ್‌ಗೆ ಏಕೆ ಎಂದು ಮೂಢ ಬಿಜೆಪಿಗರು ಜಾಣಕುರುಡರಂತೆ ಪ್ರಶ್ನಿಸುತ್ತಿದ್ದಾರೆ. ಬೇರೆ ಬ್ರಾಂಡ್‌ಗಳಿಗೆ ಅಮಿತ್ ಶಾ ಕೃಪಾಕಟಾಕ್ಷ ಇದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬೆಂಗಳೂರು: ರಾಜ್ಯದ ಹಾಲು ಮಾರುಕಟ್ಟೆಯನ್ನು ಗುಜರಾತ್ನ ಅಮುಲ್ ಅತಿಕ್ರಮಿಸಿಕೊಳ್ಳಲು ರಾಜ್ಯ ಸರ್ಕಾರ ನೆರವು ನೀಡುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಇದೇ ಬೆನ್ನಲ್ಲೇ ನಮಗೆ ನಂದಿನಿಗೆ ಬೇಕು, ಅಮೂಲ್ ಬೇಡವೇ ಬೇಡ ಅಂತಾ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ
ಇದೇ ವಿಚಾರವಾಗಿ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ‘ಬೇರೆ ಬ್ರಾಂಡ್ ಹಾಲುಗಳಿಗೆ ಇಲ್ಲದ ವಿರೋಧ ಅಮೂಲ್‌ಗೆ ಏಕೆ ಎಂದು ಮೂಢ ಬಿಜೆಪಿಗರು ಜಾಣಕುರುಡರಂತೆ ಪ್ರಶ್ನಿಸುತ್ತಿದ್ದಾರೆ. ಬೇರೆ ಬ್ರಾಂಡ್‌ಗಳಿಗೆ ಅಮಿತ್ ಶಾ ಕೃಪಾಕಟಾಕ್ಷ ಇದೆಯೇ? ನಂದಿನಿಯನ್ನು ವಿಲೀನಗೊಳಿಸುತ್ತೇವೆ ಎಂದಿದ್ದು ಅಮೂಲ್ ಜೊತೆಗೆ ಹೊರತು ಬೇರೆ ಬ್ರಾಂಡ್‌ಗಳೊಂದಿಗೆ ಅಲ್ಲ. ಅಮೂಲ್ ಪರ ಬಿಜೆಪಿ ನಿಂತಿರುವುದೇ ನಂದಿನಿಗೆ ಅಪಾಯ’ವೆಂದು ಟೀಕಿಸಿದೆ.
"ಸರ್ಕಾರದ ಹಣದಲ್ಲಿ ಬಿಜೆಪಿಯ ಜಾತ್ರೆ"- ಕಾಂಗ್ರೆಸ್ ಟೀಕೆ
‘ಕನ್ನಡಿಗರು ಅಮೂಲ್ ವಿರೋಧಿಸಿದರೆ ತಮ್ಮನ್ನೇ ವಿರೋಧಿಸಿದಂತೆ ಬಿಜೆಪಿಗರೇಕೆ ಹುಚ್ಚೆದ್ದು ಕುಣಿಯುತ್ತಿದ್ದಾರೆ? ಬಿಜೆಪಿಗರು ಏಕೆ ಅಮೂಲ್ ಪರ ವಹಿಸಿ ಮಾತಾಡುತ್ತಿದ್ದಾರೆ? ಅಮೂಲ್ ಪರ ವಕಾಲತ್ತು ವಹಿಸಲು ಬಿಜೆಪಿಗರಿಗೆ ಕಮಿಷನ್ ಸಿಗುತ್ತಿದೆಯೇ? ಇವರ ಮಾತುಗಳಲ್ಲೇ ನಂದಿನಿಯನ್ನು ಮುಳುಗಿಸುವ ಹುನ್ನಾರ ಎದ್ದು ಕಾಣುತ್ತಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್ ಉಲ್ಲೇಖಿಸಿ ಕಾಂಗ್ರೆಸ್ ಕಿಡಿಕಾರಿದೆ.
ಇದನ್ನೂ ಓದಿ: ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಮುಳುಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ: ಡಿ.ಕೆ.ಸುರೇಶ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.