"ಸರ್ಕಾರದ ಹಣದಲ್ಲಿ ಬಿಜೆಪಿಯ ಜಾತ್ರೆ"- ಕಾಂಗ್ರೆಸ್ ಟೀಕೆ

ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.ಶ್ವೇತ ಕ್ರಾಂತಿಯ ಮೂಲಕ ಕಾಂಗ್ರೆಸ್ ಭಾರತವನ್ನು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವನ್ನಾಗಿ ಮಾಡಿದೆ.

Written by - Zee Kannada News Desk | Last Updated : Apr 10, 2023, 04:43 PM IST
  • ಶ್ವೇತ ಕ್ರಾಂತಿಯ ಮೂಲಕ ಕಾಂಗ್ರೆಸ್ ಭಾರತವನ್ನು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವನ್ನಾಗಿ ಮಾಡಿದೆ.
  • ಆದರೆ,ಬಿಜೆಪಿಯ ದುರಾಡಳಿತ ನಮ್ಮ ಹೈನುಗಾರರಿಗೆ ದ್ರೋಹ ಬಗೆದಿದೆ,
  • ಇದರಿಂದ ಹಾಲಿನ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈಗ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಟೀಕಿಸಿದೆ.
"ಸರ್ಕಾರದ ಹಣದಲ್ಲಿ ಬಿಜೆಪಿಯ ಜಾತ್ರೆ"- ಕಾಂಗ್ರೆಸ್ ಟೀಕೆ title=

ಬೆಂಗಳೂರು: ಫಲಾನುಭವಿಗಳ ಸಮಾವೇಶದ ಹೆಸರಲ್ಲಿ ಪಕ್ಷದ ಪ್ರಚಾರ ನಡೆಸಿದ ಬಿಜೆಪಿ ಜನರನ್ನು ಕರೆತಂದ ಬಸ್ಸುಗಳ ಬಾಡಿಗೆ ಪಾವತಿಸದೆ ಗ್ರಾಮ ಪಂಚಾಯ್ತಿಗಳಿಗೆ ಬಾಡಿಗೆ ಹೊರೆ ಹೊರೆಸಿದೆ.ಗ್ರಾಮ ಪಂಚಾಯ್ತಿಗಳನ್ನೂ ಬಿಡದೆ ಸುಲಿಗೆ ಮಾಡುತ್ತಿರುವ ಬೊಮ್ಮಾಯಿ ಅವರೇ, ಕನಿಷ್ಠ ನಾಚಿಕೆ ಮಾನ ಮರ್ಯಾದೆಗಳಿಲ್ಲವೇ? ಎಂದು ಕಾಂಗ್ರೆಸ್ ಕಿಡಿ ಕಾರಿದೆ.

ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.ಶ್ವೇತ ಕ್ರಾಂತಿಯ ಮೂಲಕ ಕಾಂಗ್ರೆಸ್ ಭಾರತವನ್ನು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವನ್ನಾಗಿ ಮಾಡಿದೆ.ಆದರೆ,ಬಿಜೆಪಿಯ ದುರಾಡಳಿತ ನಮ್ಮ ಹೈನುಗಾರರಿಗೆ ದ್ರೋಹ ಬಗೆದಿದೆ, ಇದರಿಂದ ಹಾಲಿನ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈಗ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಟೀಕಿಸಿದೆ.

ಕ್ಷೀಣಿಸುತಿದ್ದ ಹುಲಿ ಸಂತತಿಯ ರಕ್ಷಣೆಗೆ ಕಾಂಗ್ರೆಸ್ 'ಪ್ರಾಜೆಕ್ಟ್ ಟೈಗರ್' ಎಂಬ ಮಹತ್ತರ ಯೋಜನೆಗೆ ನಾಂದಿ ಹಾಡಿತ್ತು. ಬಿಜೆಪಿ ಆಡಳಿತದಲ್ಲಿ ಹುಲಿ ಸಂರಕ್ಷಣೆಗೆ ನೀಡುವ ಅನುದಾನವು ಕಡಿಮೆಯಾಗುತ್ತಿದೆ, ಮೀಸಲಿಟ್ಟ ಅನುದಾನದ ಮಂಜೂರಾತಿಯಲ್ಲೂ ಕಡಿತಗೊಳಿಸಲಾಗಿದೆ.ಈ ಅನ್ಯಾಯಕ್ಕೆ ಮುನಿಸಿಕೊಂಡ ಹುಲಿಗಳು ನರೇಂದ್ರ ಅವರ ಮುಖ ನೋಡಲಿಲ್ಲ!ಅಧಿಕಾರಾವಧಿಯುದ್ದಕ್ಕೂಜನರ ಕಷ್ಟ ಕೇಳಲು ಹೋಗದೆ, ಈಗ ಜನರ ಮತ ಕೇಳಲು ಹೋಗುತ್ತಿರುವ ಬಿಜೆಪಿ ಶಾಸಕರು, ಸಚಿವರಿಗೆ ಮತದಾರರು ಆಕ್ರೋಶದ ಸ್ವಾಗತ ಕೋರುತ್ತಿದ್ದಾರೆ.ನೆರೆ, ಬರ, ಬೆಲೆ ಏರಿಕೆಯಿಂದ ಕಂಗೆಟ್ಟ ಜನರನ್ನು ಕೇಳದ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಜನರ ಮಾತಿನ ಏಟು ಬೀಳುತ್ತಿವೆ.ಈ ಜನಾಕ್ರೋಶವೇ ಬಿಜೆಪಿಯನ್ನು ಮುಳುಗಿಸಲಿದೆ ಎಂದು ಹೇಳಿದೆ.

ಇದೆ ವೇಳೆ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ 'ರಾಜ್ಯದಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸರ್ಕಾರ ನಿರ್ಲಕ್ಷಿಸಿದ್ದು,ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ.ಜಿಲ್ಲಾ ಆಡಳಿತ,ಸಂಬಂಧಿಸಿದ ತಾಲೂಕು ದಂಡಾಧಿಕಾರಿಗಳು, ತುರ್ತು ಸಂದರ್ಭದಲ್ಲಿ ಬಳಕೆಗೆ ಮೀಸಲಿಡುವ ನಿಧಿಯ ಮೂಲಕ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ಮುಂದುವರೆದು ಕೇಂದ್ರ ಬಿಜೆಪಿ ಸರ್ಕಾರ, ಕೇಂದ್ರ ಮೀಸಲು ಪಡೆಯ ನೇಮಕಾತಿ ಪರೀಕ್ಷೆಯನ್ನು ಕೇವಲ ಹಿಂದಿ-ಇಂಗ್ಲೀಷ್‌ನಲ್ಲಿ ಮಾಡುತ್ತಿರುವುದು ಖಂಡನೀಯ.ಪರೀಕ್ಷೆ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಸರ್ಕಾರ ಹಿಂಪಡೆಯಬೇಕು.ಕನ್ನಡಿಗರಿಗೆ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಹಾಗೂ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News