ಬೆಂಗಳೂರು: ‘ಮೀಸಲಾತಿ ಘೋಷಣೆ ಕೇವಲ ರಾಜಕೀಯ ಗಿಮಿಕ್’ ಅಷ್ಟೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಮೀಸಲಾತಿ ವಿಚಾರವಾಗಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕಮಲ’ ಪಕ್ಷದ ವಿರುದ್ಧ ಕಿಡಿಕಾರಿದೆ. ‘ಸಿಎಂ ಬಸವರಾಜ್ ಬೊಮ್ಮಾಯಿಯವರೇ ನಿಮ್ಮ ‘ಮೀಸಲಾತಿ ಗಿಮಿಕ್’ ಅನುಷ್ಠಾನ ಮಾಡುವುದು ಅಸಾಧ್ಯವೆಂದು ಸುಪ್ರೀಂಕೋರ್ಟ್ ಹೇಳಿದೆ. ಜನತೆಗೆ ಈಗ ನಿಮ್ಮ ಉತ್ತರವೇನು, ಸಾಬೂಬುಗಳೇನು’ ಎಂದು ಪ್ರಶ್ನಿಸಿದೆ.


ಇದನ್ನೂ ಓದಿ: ಅರವಿಂದ ಲಿಂಬಾವಳಿಗೆ ಟಿಕೆಟ್ ತಪ್ಪಿದಲ್ಲಿ ಭೋವಿ ಸಮಾಜ ಬಿಜೆಪಿಯಿಂದ ದೂರ ಎಂದ ಸ್ವಾಮೀಜಿ 


‘ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ ಅವರ ಜಯಂತಿ ಸಂದರ್ಭದಲ್ಲಿ ಸಂವಿಧಾನದ ಆಶಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಬಿಜೆಪಿಯ ಸಂವಿಧಾನ ವಿರೋಧಿ ನೀತಿಯನ್ನು ಬೆತ್ತಲುಗೊಳಿಸಿದೆ’ ಎಂದು ಕಾಂಗ್ರೆಸ್ ಕುಟುಕಿದೆ.


‘ಅಧ್ಯಯನವಿಲ್ಲದೆ ಚುನಾವಣೆ ಗಿಮಿಕ್‌ಗಾಗಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಮೂಗಿಗೆ ತುಪ್ಪ ಸವರುವ ನಿರ್ಧಾರ ದೋಷಪೂರಿತವೆಂದು ಸುಪ್ರೀಂಕೋರ್ಟ್ ಹೇಳಿರುವುದು ಬಿಜೆಪಿ ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. "ಅನುಷ್ಠಾನ ಅಸಾಧ್ಯ" ಎಂಬುದು ಸುಪ್ರೀಂಕೋರ್ಟ್ ಹೇಳುವ ಮೂಲಕ ಬಿಜೆಪಿಯ ಕಿವಿ ಮೇಲೆ ಹೂವು ಇಡುವ ಪ್ರಯತ್ನವನ್ನು ಬಯಲುಗೊಳಿಸಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.


ಇದನ್ನೂ ಓದಿ: ʼಲಕ್ಷ್ಮಣ್‌ ಸವದಿ ಒಬ್ಬ ವಿಶ್ವಾಸಘಾತುಕ, ಬೆನ್ನಿಗೆ ಚೂರಿ ಹಾಕುವವನುʼ


ಬಿಜೆಪಿ ಈಗ ಮುಳುಗಿದ ಹಡಗು!


‘ಬಿಜೆಪಿ ಈಗ ಮುಳುಗಿದ ಹಡಗು! ಅಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ, ಇಲ್ಲಿ ಪ್ರಹ್ಲಾದ್ ಜೋಶಿ – ಬಿ.ಎಲ್.ಸಂತೋಷ್ ಜೋಡಿ ಪಕ್ಷದಲ್ಲಿ ಸರ್ವಾಧಿಕಾರ ಸ್ಥಾಪಿಸಲು ಮಾಡಿದ ಹುನ್ನಾರಗಳು ಬಿಜೆಪಿಗೇ ಮುಳುವಾಗಲಿದೆ. ಕೆಡರ್ ಕಾರ್ಯಕರ್ತರು ಎನ್ನುತ್ತಿದ್ದರು, ಈಗ ಬಿಜೆಪಿಗೆ ಕೇಡಿ ಕಾರ್ಯಕರ್ತರಾಗಿದ್ದಾರೆ. ಶಿಸ್ತಿನ ಪಕ್ಷ ಎಂದುಕೊಳ್ಳುತ್ತಿದ್ದರು, ಈಗ ಕುಸ್ತಿಯ ಪಕ್ಷವಾಗಿದೆ!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.