ಬೆಂಗಳೂರು: ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರಿಗೆ ಬಿಜೆಪಿ ಟಿಕೆಟ್ ನೀಡುವಲ್ಲಿ ವಿಳಂಭ ಧೋರಣೆ ಅನುಸರಿಸುತ್ತಿರುವ ಬೆನ್ನಲ್ಲೇ ಈಗ ಭೋವಿ ಸಮಾಜದ ಅಖಿಲ ಕರ್ನಾಟಕ ಭೋವಿ ಮಠದ ಪೀಠಾಧೀಪತಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅರವಿಂದ್ ಲಿಂಬಾವಳಿ ಅವರಿಗೆ ಟಿಕೆಟ್ ತಪ್ಪಿದಲ್ಲಿ ಭೋವಿ ಸಮಾಜ ಬಿಜೆಪಿಯಿಂದ ದೂರವಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: "ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ"
ಈ ಕುರಿತಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸ್ವಾಮೀಜಿ ಅವರು ಪಕ್ಷಕ್ಕೆ ದುಡಿದಿದ್ರು ಅಧಿಕಾರಕ್ಕೆ ತಂದಿದ್ರು ಅವರನ್ನು ಪಕ್ಷದಿಂದ ದೂರ ಇಡಲಾಗಿದೆ,ಇದು ನಿಜಕ್ಕೂ ಖಂಡನೀಯ ವಿಷಯವಾಗಿದೆ.ಈ ಚುನಾವಣೆಯಲ್ಲಿ ಅವರಿಗೆ ಟೀಕೆಟ್ ನೀಡದಿದ್ರೆ ಭೋವಿ ಸಮುದಾಯ ಮತದಾನದ ವಿಚಾರದಲ್ಲಿ ಯೋಚನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಅರವಿಂದ್ ಲಿಂಬಾವಳಿ ಭೋವಿ ಸಮಾಜದ ಪರಮೋಚ್ಛ ನಾಯಕರು ಹೀಗಾಗಿ ಅವರಿಗೆ ಟಿಕೆಟ್ ನೀಡದೆ ಕಾಯಿಸುತ್ತಿರುವುದು ಸರಿಯಲ್ಲ,ಯಾರು ಸಾಮುದಾಯದ ಕೈ ಬಿಡುತ್ತಾರೋ ಅವರಿಗೆ ನಮ್ಮ ಸಮಾಜ ಬೆಂಬಲ ನೀಡುವುದಿಲ್ಲ ಎಂದು ಅವರು ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.