ಕೊಪ್ಪಳ: SC ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಭೋವಿ ಸಮುದಾಯದವರು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.


COMMERCIAL BREAK
SCROLL TO CONTINUE READING

ಹಾಬಲಕಟ್ಟಿ ಗ್ರಾಮದಲ್ಲಿ ವಾಸವಿರುವ ಭೋವಿ ಸಮುದಾಯದವರಿಗೆ 1954 ರಿಂದ 2011ರವರೆಗೆ ಪರಿಶಿಷ್ಟ ಜಾತಿ(SC) ಪ್ರಮಾಣ ಪತ್ರ ನೀಡಲಾಗಿತ್ತು. ಆದರೆ 2011ರ ಬಳಿಕ ಈ ಸಮುದಾಯದವರಿಗೆ ತಾಲೂಕಿನಲ್ಲಿ ಯಾವುದೇ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಜಾತಿ ಪ್ರಮಾಣ ಪತ್ರವಿಲ್ಲದ ಕಾರಣ ಸಮುದಾಯದ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಸೇರಿದಂತೆ ಅನೇಕ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಭೋವಿ ಸಮುದಾಯದವರಿಗೆ ಈ ಮೊದಲು ನೀಡುತ್ತಿದ್ದ ಪರಿಶಿಷ್ಟ ಜಾತಿ(SC) ಪ್ರಮಾಣ ಪತ್ರವನ್ನು ನೀಡಲೇಬೇಕೆಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ಭೋವಿ ಸಮುದಾಯದವರು ವಿಧಾನಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.


ಇದನ್ನೂ ಓದಿ: ಹಾಸನದಲ್ಲಿ ಸವಾಲು ಸ್ವೀಕರಿಸಿದ್ರಾ ಭವಾನಿ ರೇವಣ್ಣ..?


ಹಾಬಲಕಟ್ಟಿ ಗ್ರಾಮದ ಭೋವಿ ಸಮುದಾಯದವರು ಪರಿಶಿಷ್ಟ ಜಾತಿ(SC) ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಈ ಹಿಂದೆ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಧರಣಿ ನಡೆಸಿದ್ದರು. ಇದಲ್ಲದೇ ಕುಷ್ಟಗಿ ತಹಶೀಲ್ದಾರ್ ಕಚೇರಿ ಮುಂಭಾಗ ಬರೋಬ್ಬರಿ 101 ದಿನಗಳ ಕಾಲ ಹೋರಾಟವನ್ನೂ ಕೈಗೊಳ್ಳಲಾಗಿತ್ತು. ಆಗಿನ ಸರ್ಕಾರ ಸದನ ಸಮಿತಿ ರಚಿಸಿತ್ತು. ಸಮಿತಿ ಅಧ್ಯಕ್ಷರು ಸೇರಿ 9 ಜನ ಶಾಸಕರು ಹಾಬಲಕಟ್ಟಿ ಗ್ರಾಮಕ್ಕೆ ಆಗಮಿಸಿ ಖುದ್ದು ಸಭೆ ನಡೆಸಿ ಪರಿಶೀಲನೆ ನಡೆಸಿದ್ದರು. ಸಮಿತಿಯ ಅಧ್ಯಯನದ ಬಳಿಕ ಸರ್ಕಾರಕ್ಕೆ ವರದಿ ಕೂಡ ನೀಡಲಾಗಿತ್ತು. ಆದರೆ ನಂತರದ ಸರ್ಕಾರಗಳು ಸಮುದಾಯದ ಸಮಸ್ಯೆಗಳಿಗೆ ಯಾವುದೇ ರೀತಿ ಸ್ಪಂದಿಸಲಿಲ್ಲವೆಂದು ಭೋವಿ ಮುಖಂಡರು ಆರೋಪಿಸಿದ್ದಾರೆ.


ಈ ಬಗ್ಗೆ ಈಗಾಗಲೇ ಏಪ್ರಿಲ್ 12ರಂದು ಸಮುದಾಯದ ಮುಖಂಡರು ತಹಶೀಲ್ದಾರ್ ಕಚೇರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ರಾಜ್ಯದ ನಾನಾ ಕಡೆ ಭೋವಿ ಜನಾಂಗಕ್ಕೆ SC ಪ್ರಮಾಣಪತ್ರ ಹಾಗೂ ಸರ್ಕಾರದ ಸೌಕರ್ಯಗಳನ್ನು ನೀಡಲಾಗುತ್ತಿದೆ. ಹಾಬಲಕಟ್ಟಿ ಗ್ರಾಮದ ಭೋವಿ ಸಮುದಾಯಕ್ಕೆ ಮಾತ್ರ SC ಪ್ರಮಾಣಪತ್ರ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ ಮುಂದಿನ ಎಲ್ಲಾ ಚುನಾವಣೆಗಳ ಮತದಾನಕ್ಕೆ ಬಹಿಷ್ಕಾರ ಹಾಕುವುದಾಗಿ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: ಶಿವಮೊಗ್ಗ ಅಥವಾ ಮಾನ್ವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಿಚ್ಚ ಸುದೀಪ್ ಕಣಕ್ಕೆ ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.