ಬೆಂಗಳೂರು: ಬೆಂಗಳೂರಿನ ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ಬಂದು ರಾಕಿಂಗ್ ಸ್ಟಾರ್ ಯಶ್ ಮತ ಚಲಾಯಿಸಿದರು. ಮತದಾನ ಮುಗಿಯುವ ಒಂದೂವರೆ ಗಂಟೆ ಮುಂಚಿತವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ ಯಶ್ ತಮ್ಮ ಹಕ್ಕು ಚಲಾಯಿಸಿದರು. ಪತ್ನಿ ರಾಧಿಕಾ ಪಂಡಿತ್ ಬೇರೆ ಕೇಂದ್ರದಲ್ಲಿ ಮತದಾನ ಮಾಡಿದ್ದರಿಂದ ಯಶ್ ಒಬ್ಬರೇ ಬಂದು ವೋಟ್ ಮಾಡಿದರು.


COMMERCIAL BREAK
SCROLL TO CONTINUE READING

ಪ್ರತಿಯೊಬ್ಬರೂ ವೋಟ್ ಮಾಡುವುದು ಕರ್ತವ್ಯ!


ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಯಶ್, ‘ಪ್ರತಿಯೊಬ್ಬರೂ ತಪ್ಪದೇ ವೋಟ್ ಮಾಡಬೇಕು. ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಕರ್ತವ್ಯ. ನಾನು ನನ್ನ ಹಕ್ಕು ಚಲಾಯಿಸಿದ್ದೀನಿ.. ಅದು ಬಹಳ ಮುಖ್ಯ, ನೀವು ತಪ್ಪದೇ ಹೋಗಿ ವೋಟ್ ಮಾಡಿ’ ಎಂದು ಮನವಿ ಮಾಡಿದರು.


ಇದನ್ನೂ ಓದಿ: ʼಹಕ್ಕುʼ ಚಲಾಯಿಸಲು ಕೇವಲ ಒಂದು ಗಂಟೆ ಬಾಕಿ..! ನೀವು ಮತ ಹಾಕಿದ್ರಾ..?


ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದ ವಿಚಾರವಾಗಿ ಮಾತನಾಡಿದ ಯಶ್, ‘ನನಗೆ ಈ ಬಾರಿ ಇಂಟರೆಸ್ಟ್ ಅನಿಸಲಿಲ್ಲ.. ಆ ಕಾರಣದಿಂದ ಪ್ರಚಾರಕ್ಕೆ ಹೋಗಲಿಲ್ಲ. ಕಳೆದ ಬಾರಿ ಒಂದಷ್ಟು ಉದ್ದೇಶಗಳಿತ್ತು.. ಯಶೋಮಾರ್ಗದಿಂದ ಹಲವಾರು ಕೆಲಸಗಳು ಮಾಡ್ತಿದ್ವಿ. ಈ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಜನರಿಗೆ ನೆರವಾಗುತ್ತೇವೆ’ ಎಂದರು. 


ಯೂತ್ ಕೂಡ ವೋಟ್ ಮಾಡ್ತಿದ್ದಾರೆ.. ವೋಟಿಂಗ್ ನಮ್ಮ ಹಕ್ಕು ಅನ್ನೋದನ್ನು ಯಂಗ್‍ಸ್ಟರ್ಸ್ ಅರ್ಥ ಮಾಡಿಕೊಳ್ಳಬೇಕು. ಈಗಿನ ಚುನಾವಣೆ ವಿಚಾರವಾಗಿ ರಾಜಕಾರಣಿಗಳು ಹಾಗೂ ಪಕ್ಷಗಳು ಮೂಲಭೂತ ಕೆಲಸಗಳನ್ನು ಸರಿಯಾಗಿ ಮಾಡಬೇಕು. ಆರೋಗ್ಯ, ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನು ಜನರಿಗೆ ಸರಿಯಾಗಿ ನೀಡಬೇಕು. ಅದನ್ನು ಮಾಡಿದರೆ ಸಾಕು.. ಜನರು ಉಳಿದದ್ದನ್ನು ನೀಟ್ ಆಗಿ ಮಾಡ್ಕೊಂಡು ಹೋಗ್ತಾರೆ’ ಎಂದು ಹೇಳಿದರು.


ಇದನ್ನೂ ಓದಿ: ಮತದಾನಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ: ವ್ಯಕ್ತಿ ಮೃತ


ಸಿನಿಮಾ ಕುರಿತ ಪ್ರಶ್ನೆಗೆ ಯಶ್ ಯಾವುದೇ ಮಾಹಿತಿ ನೀಡಲಿಲ್ಲ. ಮುಂದಿನ ದಿನಗಳಲ್ಲಿ ಆ ಕುರಿತು ಮಾತನಾಡುವುದಾಗಿ ಹೇಳಿ ಮತದಾನ ಕೇಂದ್ರದಿಂದ ಹೊರ ನಡೆದರು. ಯಶ್‍ ಮತದಾನಕ್ಕೆ ಆಗಮಿಸುವ ವೇಳೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಅತ್ಯಂತ ಬಿಗಿಭದ್ರತೆಯಲ್ಲಿ ಯಶ್ ಅವರನ್ನು ಮತಗಟ್ಟೆಗೆ ಕರೆದುಕೊಂಡು ಬಂದು ಕರೆದುಕೊಂಡು ಹೋಗಲಾಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.