Karnataka Election Result 2023: 38 ವರ್ಷಗಳ ಹಳೆ ಸಂಪ್ರದಾಯವನ್ನು ಮುರಿಯಲು ವಿಫಲವಾದ ಬಿಜೆಪಿ
Karnataka Assembly Election Results 2023: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಬಹುತೇಕ ನಿಚ್ಚಳವಾಗಿದೆ. ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು ದಾಪುಗಾಲಿಟ್ಟಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಇತ್ತೀಚಿನ ಟ್ರೆಂಡ್ ಪ್ರಕಾರ ಬಿಜೆಪಿ 70 ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸಿಲುಕಿಕೊಂಡಂತಿದೆ. ಮತ್ತೊಂದೆಡೆ, ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ರುಚಿ ನೋಡುವತ್ತ ಸಾಗುತ್ತಿದೆ. ಬಹುಮತದ ಗಡಿ ದಾಟಿದೆ. ರಾಜ್ಯದಲ್ಲಿ ಸರ್ಕಾರ ರಚಿಸಲು 113 ಸ್ಥಾನಗಳ ಅಗತ್ಯವಿದ್ದು, ಅದನ್ನು ಕಾಂಗ್ರೆಸ್ ಸ್ವಂತ ಬಲದಿಂದ ಸಾಧಿಸಿದೆ.
Karnataka Assembly Election Result: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 38 ವರ್ಷಗಳ ಸಂಪ್ರದಾಯವನ್ನು ಮುರಿಯುವುದರಿಂದ ಗುರಿತಪ್ಪಿದೆ. 1985ರ ನಂತರ ರಾಜ್ಯದಲ್ಲಿ ಯಾವ ಪಕ್ಷವೂ ಮತ್ತೆ ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಟ್ರೆಂಡ್ ಪ್ರಕಾರ ಬಿಜೆಪಿ 70 ಕ್ಕಿಂತ ಕಡಿಮೆ ಸೀಟುಗಳಲ್ಲಿ ಸಿಲುಕಿಕೊಂಡಂತಿದೆ. ಮತ್ತೊಂದೆಡೆ, ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ರುಚಿ ನೋಡುವತ್ತ ಸಾಗುತ್ತಿದೆ. ಬಹುಮತದ ಗಡಿ ದಾಟಿದೆ. ರಾಜ್ಯದಲ್ಲಿ ಸರ್ಕಾರ ರಚಿಸಲು 113 ಸ್ಥಾನಗಳ ಅಗತ್ಯವಿದ್ದು, ಅದನ್ನು ಕಾಂಗ್ರೆಸ್ ಸ್ವಂತ ಬಲದಿಂದ ಸಾಧಿಸುತ್ತಿದೆ.
ಈ ಟ್ರೆಂಡ್‌ಗಳು ಫಲಿತಾಂಶ ರೂಪಕ್ಕೆ ತಿರುಗಿದರೆ, 2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ದಕ್ಷಿಣದಲ್ಲಿ ಬಿಜೆಪಿ ಸರ್ಕಾರ ಇರುವ ಏಕೈಕ ರಾಜ್ಯ ಎಂದರೆ ಕರ್ನಾಟಕ. ಹೀಗಿರುವಾಗ ರಾಜ್ಯದಲ್ಲಿ ಪಕ್ಷದ ಕಳಪೆ ಸಾಧನೆಗೆ ಕಾರಣಗಳೇನು ಎಂಬುದೂ ತುಂಭಾ ಮುಖ್ಯವಾಗುತ್ತವೆ.
ಉತ್ತರ ಭಾರತದ ಪಕ್ಷದ ಟ್ಯಾಗ್ ಹೋಗಲಿಲ್ಲ
ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯನ್ನು ಉತ್ತರ ಭಾರತದ ಪಕ್ಷವೆಂದು ಇನ್ನೂ ಗ್ರಹಿಸಲಾಗಿದೆ ಮತ್ತು ಕಳೆದ ನಾಲ್ಕು ವರ್ಷಗಳ ಘಟನೆಗಳು ಈ ಗ್ರಹಿಕೆಯನ್ನು ದೃಢಪಡಿಸಿವೆ. ಅದು ಗೋಮಾಂಸ ವಿವಾದವಾಗಲಿ ಅಥವಾ ಹಿಂದಿ ಭಾಷೆಯ ಪಾರಮ್ಯವಾಗಲಿ, ಮೋದಿ ಸರ್ಕಾರವನ್ನು ಆರ್‌ಎಸ್‌ಎಸ್ ಅಜೆಂಡಾವನ್ನು ಉತ್ತೇಜಿಸುವ ಶಕ್ತಿಯಾಗಿ ನೋಡಲಾಗುತ್ತದೆ.
ಆರೆಸ್ಸೆಸ್ ನ ಹಿಂದುತ್ವ ವ್ಯಾಖ್ಯಾನಿಸಿದ ಜೀವನ ವಿಧಾನ ಇಂದಿಗೂ ಕರ್ನಾಟಕದ ಜನತೆಗೆ ಅನ್ಯವಾಗಿದೆ. ಬಿಜೆಪಿ ವಿರುದ್ಧ ಏನು ಕೆಲಸ ಮಾಡುತ್ತದೆ ಎಂದರೆ ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ವಾಸಿಸುವ ಉತ್ತರ ಭಾರತೀಯರು ಹೆಚ್ಚಾಗಿ ಯುವಕರು ಮತ್ತು ಹಿಂದುತ್ವ ಸಂಘಟನೆಗಳು ನಡೆಸುತ್ತಿರುವ ನೈತಿಕ ಪೊಲೀಸ್‌ಗಿರಿಯಿಂದ ಅಸಮರ್ಥರಾಗಿದ್ದಾರೆ. ಈ ವಿಭಾಗವು ಪ್ರಧಾನಿಯಾಗಿ ನರೇಂದ್ರ ಮೋದಿಯವರ ಪರವಾಗಿರಬಹುದು, ಆದರೆ ಅದು ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಉತ್ಸಾಹ ಹೊಂದಿಲ್ಲ.
ಯಡಿಯೂರಪ್ಪನವರ ಮೇಲೆ ರಾಜ್ಯದ ಜನತೆ ನಂಬಿಕೆ ಕಳೆದುಕೊಂಡಿದ್ದಾರೆ
ಪ್ರತಿಯೊಬ್ಬ ಕ್ರೀಡಾಪಟುವಿನಂತೆ, ಪ್ರತಿಯೊಬ್ಬ ರಾಜಕಾರಣಿಯೂ ಉನ್ನತ ಸ್ಥಾನವನ್ನು ಅಲಂಕರಿಸುತ್ತಾನೆ ಮತ್ತು ನಂತರ ಅವರ ಪ್ರಭಾವ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ಯಡಿಯೂರಪ್ಪನವರ ವಿಚಾರದಲ್ಲಿ ಆಗುತ್ತಿರುವಂತೆ ಕಾಣುತ್ತಿದೆ. ಅವರು ತಮ್ಮ ಉನ್ನತ ಷ್ಟಾನವನ್ನು ದಾಟಿದಂತಿದ್ದು, ಆದರೆ ಸಿದ್ದರಾಮಯ್ಯ ಇದೀಗ ಮತ್ತೆ ಉತ್ತುಂಗ ಸ್ಥಾನಕ್ಕೆ ಏರಿದ್ದಾರೆ.
ಯಡಿಯೂರಪ್ಪ ಜೈಲು ವಾಸದೊಂದಿಗೆ ಭ್ರಷ್ಟಾಚಾರದ ಕಳಂಕ ಪಕ್ಷಕ್ಕೆ ಶಾಶ್ವತವಾಗಿ ಅಂಟಿಕೊಂಡಿದೆ. ನ್ಯಾಯಾಲಯದ ತೀರ್ಪಿನಿಂದ ಈ ಕಳಂಕವನ್ನು ತೆಗೆದುಹಾಕಲಾಗಿದೆ ಎಂದು ಬಿಜೆಪಿ ಹೇಳುತ್ತಿದೆ, ಆದರೆ ರಾಜಕೀಯವು ಗ್ರಹಿಕೆಯ ಮೇಲೆ ನಡೆಯುತ್ತದೆ. ಹೀಗಿರುವಾಗ ರಾಜಕೀಯ ನಿರೂಪಣೆಯಿಂದ ಮಾಜಿ ಸಿಎಂ ಮೇಲಿರುವ ಕಳಂಕವನ್ನು ತೆಗೆದುಹಾಕುವುದು ಸುಲಭವಲ್ಲ.ಆಡಳಿತಗಾರರಾಗಿಯೂ ಸಿದ್ದರಾಮಯ್ಯನವರ ದಾಖಲೆ ಯಡಿಯೂರಪ್ಪನವರಿಗಿಂತ ಉತ್ತಮವಾಗಿರುವಂತಿದೆ.
ಹೊಸ ನಾಯಕತ್ವದ ಕೊರತೆ
ಈ ಚುನಾವಣೆಯಲ್ಲಿ ಬಿಜೆಪಿಗೆ ಹೊಸ ನಾಯಕತ್ವದ ಸಂದಿಗ್ಧತೆ ಎದುರಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಪಕ್ಷದ ಮುಖವಾಗಬೇಕು ಮತ್ತು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಪಕ್ಷವು ಸೂಚಿಸಿತ್ತು, ಆದರೆ ಇದರ ಹಿಂದಿನ ದೊಡ್ಡ ಅಂಶವೆಂದರೆ ಅವರು ಲಿಂಗಾಯತ ಸಮುದಾಯದಿಂದ ಬಂದಿರುವುದು.
ಈಗಂತೂ 80ರ ಹರೆಯದ ಬಿ.ಎಸ್.ಯಡಿಯೂರಪ್ಪ ಅವರೇ ಅತಿ ಎತ್ತರದ ನಾಯಕರಾಗಿ ಹೊರಹೊಮ್ಮಿರುವುದು ಪಕ್ಷಕ್ಕೆ ಕಹಿ ಸತ್ಯ. ಚುನಾವಣಾ ಪ್ರಚಾರದ ಆರಂಭದಲ್ಲಿ, ಹೊಸ ನಾಯಕತ್ವದ ಕಾರಣದಿಂದ ಚುನಾವಣಾ ಕದನವನ್ನು ಎದುರಿಸಲು ಪಕ್ಷವು ಪ್ರಯತ್ನಿಸಿತು, ಆದರೆ ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ, ಯಡಿಯೂರಪ್ಪನವರ ಮೇಲೆ ಪಕ್ಷದ ಅವಲಂಬನೆ ಹೆಚ್ಚಾಯಿತು. ನಂತರವೂ ಟಿಕೆಟ್ ಹಂಚಿಕೆಯವರೆಗೂ ಯಡಿಯೂರಪ್ಪನವರ ಕೆಲಸ ನಡೆದಿದೆ ಎನ್ನಲಾಗಿತ್ತು. ಈ ಕಾರಣಕ್ಕಾಗಿಯೇ ಬಿಜೆಪಿಯ ಹೊಸ ಮತ್ತು ಹಳೆಯ ತಲೆಮಾರಿನ ನಡುವಿನ ಒಡಕು ಸಹ ಗೋಚರಿಸಿತು ಮತ್ತು ಅದರ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ಸಹ ನೀಡಲಾಯಿತು.
ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರ ಸರಿಯಾಗಿ ನಡೆಯಲಿಲ್ಲ
ಬಿಜೆಪಿ ತನ್ನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಲಿಲ್ಲ ವಿಫಲವಾಗಿದೆ ಎಂದು ರಾಜಕೀಯ ವಿಮರ್ಶಕರ ಅಭಿಪ್ರಾಯವಾಗಿದೆ. ಇಡೀ ಚುನಾವಣೆಯಲ್ಲಿ ಅವುಗಳ ಚರ್ಚೆ ನಗಣ್ಯ. ಯಾವುದೇ ದೊಡ್ಡ ನಾಯಕರ ರ್ಯಾಲಿಯಲ್ಲಿ ಕರ್ನಾಟಕ ಸರ್ಕಾರದ ಸಾಧನೆಗಳ ಕುರಿತು ಚರ್ಚೆ ನಡೆಯಲಿಲ್ಲ. ಸಣ್ಣ ನಾಯಕರು ಅವರ ಅನುಕೂಲಕ್ಕೆ ತಕ್ಕಂತೆ ಸಭೆಗಳಲ್ಲಿ ತಮ್ಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಖಂಡಿತವಾಗಿ ಹೇಳಿಕೊಂಡಿದ್ದಾರೆ. ಆದರೆ ಈ ಕೆಲಸವನ್ನು ಬಿಜೆಪಿ ಆದ್ಯತೆಯ ಮೇಲೆ ಮಾಡಬೇಕಿತ್ತು ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಮಾತು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ