ಹಾಸನ: ಪ್ರತಿಷ್ಠೆಯ ಕಣವಾಗಿರುವ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಜೆಡಿಎಸ್-ಬಿಜೆಪಿ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಮತ ಎಣಿಕೆಯ ಹಿಂದಿನ ದಿನವಾದ ಶುಕ್ರವಾರ ಬೆಟ್ಟಿಂಗ್ ಭರಾಟೆ ಜೋರಾಗಿಯೇ ನಡೆದಿದೆ.


COMMERCIAL BREAK
SCROLL TO CONTINUE READING

ಜೆಡಿಎಸ್ ಅಭ್ಯರ್ಥಿ ಹೆಚ್.ಪಿ.ಸ್ವರೂಪ್ ಅವರು 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿಗಳು, ಪ್ರೀತಂ ಜೆ.ಗೌಡ ಅವರು ಮರು ಆಯ್ಕೆಯಾಗುತ್ತಾರೆಂದು ಪಂದ್ಯ ಕಟ್ಟಿರುವ ಅಭಿಮಾನಿಗಳು ಹಣ, ವಾಹನ, ಪಣಕ್ಕಿಟ್ಟಿದ್ದಾರೆಂಬ ಮಾಹಿತಿ ಇದೆ.


ಇದನ್ನೂ ಓದಿ: ಅಲರ್ಟ್ ಆದ ಕಾಂಗ್ರೆಸ್ : ಗೆದ್ದವರನ್ನು ಬೆಂಗಳೂರಿಗೆ ಕರೆ ತರಲು ಜಿಲ್ಲಾಧ್ಯಕ್ಷರಿಗೆ ಸೂಚನೆ


1 ಲಕ್ಷದಿಂದ ಕೋಟಿ ರೂ.ವರೆಗೆ ಅಭಿಮಾನಿಗಳು ಬೆಟ್ಟಿಂಗ್ ಕಟ್ಟಿದ್ದಾರೆ. ಕೆಲವರು ಕಾರು, ಜೀಪು, ಮನೆ, ಜಮೀನು ಪತ್ರಗಳನ್ನು ಪಣಕ್ಕಿಟ್ಟಿದ್ದಾರೆ. ಮತದಾನದ ನಂತರ ಎರಡೂ ಅಭ್ಯರ್ಥಿಗಳ ಪರ ಸಮಬಲ ಕಾಯ್ದುಕೊಂಡಿರುವ ನಿರೀಕ್ಷೆ ಇರುವುದರಿಂದ ಹಲವು ಕಡೆಗಳಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಹಾಸನ ಮಾತ್ರವಲ್ಲದೇ ಸ್ವರೂಪ್-ಪ್ರೀತಂ ಅಭಿಮಾನಿಗಳು ಹೊರ ಊರುಗಳಲ್ಲಿಯೂ ಬೆಟ್ಟಿಂಗ್ ಕಟ್ಟಿದ್ದಾರೆಂದು ಹೇಳಲಾಗಿದೆ.


ಪ್ರೀತಂಗೌಡ ಅವರ ಅಳುಕಿಲ್ಲದ ವಿಶ್ವಾಸದ ಮಾತುಗಳು ಅವರ ಅಭಿಮಾನಿಗಳನ್ನು ಪ್ರೇರೇಪಿಸಿದ್ದರೆ, ಮತ್ತೊಂದೆಡೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೇ ಅಖಾಡಕ್ಕಿಳಿದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಮಾತ್ರವಲ್ಲದೇ ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ಜೊತೆಗೂಡಿ ಸ್ವರೂಪ್ ಪರ ಪ್ರಚಾರ ನಡೆಸಿದ್ದಾರೆ.


ಇದನ್ನೂ ಓದಿ: ಅವರ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಇದೆಲ್ಲದರ ಫಲವಾಗಿ ಸ್ವರೂಪ್ ಪ್ರಕಾಶ್ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ನಂಬಿಕೆಯಿಂದ ಅವರ ಅಭಿಮಾನಿಗಳು ಬೆಟ್ಟಿಂಗ್ ಕಟ್ಟಿದ್ದಾರೆ. ಅದೇ ರೀತಿ ಪ್ರೀತಂಗೌಡ ಬೆಂಬಲಿಗರೂ ಕೂಡ ಹುಮ್ಮಸ್ಸಿನಲ್ಲಿ ಬೆಟ್ಟಿಂಗ್ ಕಟ್ಟುವುದಲ್ಲಿ ಹಿಂದೆ ಬಿದ್ದಿಲ್ಲ.


ಅಭಿಮಾನಿಗಳಲ್ಲಿ ಮೂಡಿರುವ ವಿಶ್ವಾಸ ಪಂದ್ಯ ಕಟ್ಟಲು ಪ್ರೇರೇಪಿಸಿದ್ದರೂ ಬೆಟ್ಟಿಂಗ್ ದಂಧೆ ಕಾನೂನು ಬಾಹಿರ. ಇಂತಹದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಸಾಕಷ್ಟು ಪ್ರಯತ್ನಿಸಿದರೂ ಅಲ್ಲಲ್ಲಿ ಕದ್ದು ಮುಚ್ಚಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.