Karnataka Exit Poll 2023 Live: ..! ಜೀ ಕನ್ನಡ ನ್ಯೂಸ್ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಮೇಲುಗೈ
Karnataka Election Exit Poll Result 2023 Live: ಜೀ ಕನ್ನಡ ನ್ಯೂಸ್ ಮತ್ತು ಮ್ಯಾಟ್ರಿಜ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವುದನ್ನು ಸಮೀಕ್ಷೆ ಕಂಡುಕೊಂಡಿದೆ.ಕಾಂಗ್ರೆಸ್ ಪಕ್ಷಕ್ಕೆ 103 ರಿಂದ 118 ಸ್ಥಾನಗಳು ಲಭಿಸಿದರೆ, ಬಿಜೆಪಿಗೆ 79 ರಿಂದ 94 ಸ್ಥಾನಗಳು ಲಭಿಸಲಿವೆ ಇನ್ನೂ ಜೆಡಿಎಸ್ ಪಕ್ಷವು 25 ರಿಂದ 33 ಸ್ಥಾನಗಳನ್ನು ಪಡೆಯಲಿದೆ.
Karnataka Election Exit Poll Result 2023 Live Updates and News in Kannada: ಮತದಾನ ಮುಗಿಯುತ್ತಿದ್ದಂತೆ ಈಗ ಎಲ್ಲರ ಕಣ್ಣು ಚುನಾವಣೋತ್ತರ ಸಮೀಕ್ಷೆಯ ಮೇಲಿದೆ, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ, ಒಂದೇ ಪಕ್ಷ ಪೂರ್ಣ ಬಹುಮತದೊಂದಿಗೆ ಬರುತ್ತಾ? ಅಥವಾ ಮತ್ತೆ ಅತಂತ್ರ ಸರ್ಕಾರವೇನಾದ್ರೂ ನಿರ್ಮಾಣವಾಗುತ್ತಾ? ಎನ್ನುವ ಪ್ರಶ್ನೆಗಳು ಈಗ ಜನರಲ್ಲಿ ಮೂಡಿವೆ.ಈಗಾಗಲೇ ಮತದಾನ ಪ್ರಭು ತನ್ನ ಮತವನ್ನು ಚಲಾಯಿಸುವ ಮೂಲಕ ತನ್ನ ಆಯ್ಕೆಯನ್ನು ಮಾಡಿದ್ದಾನೆ.ಆದರೆ ಅಧಿಕೃತ ಫಲಿತಾಂಶಕ್ಕಾಗಿ ಮೇ 13 ರ ವರೆಗೆ ಕಾಯಬೇಕಾಗುತ್ತದೆ.ಅದಕ್ಕೂ ಮೊದಲು ಹಲವಾರು ಏಜೆನ್ಸಿಗಳು ಹಾಗೂ ಮಾಧ್ಯಮಗಳು ಅಂತಿಮ ಫಲಿತಾಂಶಕ್ಕೂ ಮುನ್ನ ತನ್ನ ಅಂದಾಜು ಲೆಕ್ಕಾಚಾರದ ಮೂಲಕ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎನ್ನುವುದನ್ನು ಹೇಳಲಿವೆ.ಈಗ ಜೀ ಕನ್ನಡ ನ್ಯೂಸ್ ಕೂಡ ಅದರ ಭಾಗವಾಗಿ ತನ್ನ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದೆ.
ಜೀ ಕನ್ನಡ ನ್ಯೂಸ್ ಮತ್ತು ಮ್ಯಾಟ್ರಿಜ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವುದನ್ನು ಸಮೀಕ್ಷೆ ಕಂಡುಕೊಂಡಿದೆ.ಕಾಂಗ್ರೆಸ್ ಪಕ್ಷಕ್ಕೆ 103 ರಿಂದ 118 ಸ್ಥಾನಗಳು ಲಭಿಸಿದರೆ, ಬಿಜೆಪಿಗೆ 79 ರಿಂದ 94 ಸ್ಥಾನಗಳು ಲಭಿಸಲಿವೆ ಇನ್ನೂ ಜೆಡಿಎಸ್ ಪಕ್ಷವು 25 ರಿಂದ 33 ಸ್ಥಾನಗಳನ್ನು ಪಡೆಯಲಿದೆ. ಇನ್ನೂ ಇತರರಿಗೆ 2 ರಿಂದ 5 ಸ್ಥಾನಗಳು ಸಿಗಲಿವೆ. ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ ಎನ್ನುವುದನ್ನು ಸಮೀಕ್ಷೆ ಹೇಳಿದೆ. ಚುನಾವಣಾ ಪ್ರಚಾರದುದ್ದಕ್ಕೂ ಸ್ಥಳೀಯ ಸಮಸ್ಯೆಗಳ ಮೇಲೆ ಕೇಂದ್ರಿಕರಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ. ಇನ್ನೂ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ನಂಬಿಕೆ ಹುಸಿಯಾಗಿದೆ.
Latest Updates
ಜನರು ಡಬಲ್-ಎಂಜಿನ್ ಸರ್ಕಾರವನ್ನು ಹುಡುಕುತ್ತಿದ್ದಾರೆ ಮತ್ತು ಭಜರಂಗ್ ದಾಲ್ ಅನ್ನು ನಿಷೇಧಿಸಲು ಪ್ರಯತ್ನಿಸುತ್ತಿರುವ ರಿವರ್ಸ್ ಗೇರ್ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಾರೆ. ಜನರ ಹೃದಯಕ್ಕೆ ಹತ್ತಿರವಿರುವ ಸಮಸ್ಯೆಗಳಿಗಾಗಿ ಕಾಂಗ್ರೆಸ್ ಪಕ್ಷ ನಿಲ್ಲುವುದಿಲ್ಲ: ಕರ್ನಾಟಕ ಸಚಿವ ಸಿ.ಎನ್. ಅಶ್ವತ್ ನಾರಾಯಣ್
ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ. ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿದೆ. ಬೇರೆ ಯಾವುದೇ ಪಕ್ಷದೊಂದಿಗೆ, ವಿಶೇಷವಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ: ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್
"ನನ್ನ ಮೊದಲ ಪ್ರತಿಕ್ರಿಯೆ ಏನೆಂದರೆ ನಾನು ಈ ಸಂಖ್ಯೆಗಳನ್ನು (ಎಕ್ಸಿಟ್ ಪೋಲ್‌ಗಳನ್ನು) ನಂಬುವುದಿಲ್ಲ.ನಾವು 146 ಸ್ಥಾನಗಳನ್ನು ದಾಟುತ್ತೇವೆ ಎನ್ನುವ ನನ್ನ ಸಂಖ್ಯೆಗೆ ನಾನು ಅಂಟಿಕೊಂಡಿದ್ದೇನೆ.ಕರ್ನಾಟಕದಲ್ಲಿ ಡಬಲ್ ಇಂಜಿನ್ ವಿಫಲವಾದ ಕಾರಣ ಜನರು ಜಾಣರಾಗಿದ್ದು, ಅವರು ಉತ್ತಮ ಹಿತಾಸಕ್ತಿಗಳನ್ನು ಎದುರು ನೋಡುತ್ತಿದ್ದಾರೆ.ಹಾಗಾಗಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂಡಿಯಾ ಟುಡೇ ಮತ್ತು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್
ಇಂಡಿಯಾ ಟುಡೇ ಮತ್ತು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ 122 ರಿಂದ 140 ಸ್ಥಾನಗಳನ್ನು ಪಡೆಯಬಹುದು.ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) 62 ರಿಂದ 80 ಸ್ಥಾನಗಳಿಗೆ ಕುಸಿಯುವ ಸಾಧ್ಯತೆ ಇದೆ.ಇನ್ನೂ ಜೆಡಿಎಸ್ 20 ರಿಂದ 25 ಸ್ಥಾನಗಳನ್ನು ಮತ್ತು ಇತರರು 0 ರಿಂದ 3 ಸ್ಥಾನಗಳನ್ನು ಪಡೆಯಬಹುದು.
ಚುನಾವಣೋತ್ತರ ಸಮೀಕ್ಷೆಯ ಕುರಿತಾಗಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ "ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಬಹುಮತ ಸಿಗಲಿದೆ. ವರುಣಾ ಕ್ಷೇತ್ರದಲ್ಲಿ ನಾನು ಆರಾಮವಾಗಿ ಗೆಲ್ಲುತ್ತೇನೆ" ಎಂದು ಹೇಳಿದ್ದಾರೆ.
ಕರ್ನಾಟಕದ ಎಕ್ಸಿಟ್ ಪೋಲ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸುತ್ತಾ "ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ನನಗೆ ತುಂಬಾ ವಿಶ್ವಾಸವಿದೆ, ನನಗೆ 200% ವಿಶ್ವಾಸವಿದೆ. ಎಕ್ಸಿಟ್ ಪೋಲ್‌ಗಳು ತರಾತುರಿಯಲ್ಲಿ ಮಾಡಲ್ಪಟ್ಟಿವೆ ಮತ್ತು ಸಾಕಷ್ಟು ತಪ್ಪುಗಳಿವೆ. ಯಾರೂ ಕಿಂಗ್‌ಮೇಕರ್ ಆಗುವ ಪ್ರಶ್ನೆಯೇ ಇಲ್ಲ, ನನಗೆ ಜನರೇ ಕಿಂಗ್ ಮೇಕರ್ ಆಗಿದ್ದು, ಅವರೇ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದ್ದಾರೆ.
ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಎಕ್ಸಿಟ್ ಪೋಲ್
ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ ಪಕ್ಷವು 100 ರಿಂದ 112 ಸ್ಥಾನಗಳನ್ನು ಪಡೆಯಬಹುದು.ಬಿಜೆಪಿ 83 ರಿಂದ 95 ಸ್ಥಾನಗಳನ್ನು ಪಡೆಯಬಹುದು, ಆದರೆ ಜೆಡಿಎಸ್ 21 ರಿಂದ 29 ಮತ್ತು ಇತರರು 2 ರಿಂದ 6 ಸ್ಥಾನಗಳನ್ನು ಪಡೆಯಬಹುದು.
ರಿಪಬ್ಲಿಕ್ ಟಿವಿ ಮತ್ತು P MARQ ಎಕ್ಸಿಟ್ ಪೋಲ್
ಕರ್ನಾಟಕ ವಿಧಾನಸಭೆ ಚುನಾವಣೆಗೆ ರಿಪಬ್ಲಿಕ್ ಟಿವಿ ಮತ್ತು ಪಿ ಮಾರ್ಕ್ ಎಕ್ಸಿಟ್ ಪೋಲ್‌ಗಳಲ್ಲಿ ಕಾಂಗ್ರೆಸ್ 94-108 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಇನ್ನೂ ಬಿಜೆಪಿ 85 ರಿಂದ 108 ಸ್ಥಾನಗಳನ್ನು ಪಡೆಯಬಹುದು. ಇದಲ್ಲದೇ ಜೆಡಿಎಸ್ 24ರಿಂದ 32 ಹಾಗೂ ಇತರರು 2ರಿಂದ 6 ಸ್ಥಾನ ಪಡೆಯಲಿದ್ದಾರೆ ಎಂದು ಹೇಳಿದೆ.
TV9 Bharatvarsh ಮತ್ತು Polstrat ನ ಎಕ್ಸಿಟ್ ಪೋಲ್
ಕರ್ನಾಟಕ ವಿಧಾನಸಭೆ ಚುನಾವಣೆಗೆ ಟಿವಿ9 ಭಾರತ್ ವರ್ಷ್ ಮತ್ತು ಪೋಲ್‌ಸ್ಟ್ರಾಟ್‌ನ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ 99 ರಿಂದ 109 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.ಇನ್ನೊಂದೆಡೆಗೆ ಬಿಜೆಪಿ 88 ರಿಂದ 98 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.ಆದರೆ, ಜೆಡಿಎಸ್ ಖಾತೆಗೆ 21ರಿಂದ 26 ಸ್ಥಾನಗಳು ಮತ್ತು ಇತರರ ಖಾತೆಗೆ 0 ರಿಂದ 4 ಸ್ಥಾನಗಳು ಸಿಗಲಿವೆ ಎನ್ನಲಾಗಿದೆ.
ನ್ಯೂಸ್ ನೇಷನ್ ಮತ್ತು ಸಿಜಿಎಸ್ ಎಕ್ಸಿಟ್ ಪೋಲ್
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನ್ಯೂಸ್ ನೇಷನ್ ಮತ್ತು ಸಿಜಿಎಸ್‌ನ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 114 ಸ್ಥಾನಗಳನ್ನು ಪಡೆಯಲಿದೆ,ಕಾಂಗ್ರೆಸ್ 86, ಜೆಡಿಎಸ್ 21 ಮತ್ತು ಇತರರು 1 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದೆ.
ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳು ಕರ್ನಾಟಕ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದಾಗಿ ಉಭಯ ಪಕ್ಷಗಳ ನಾಯಕರು ರಾಜ್ಯದಾದ್ಯಂತ ಬೃಹತ್ ರ್ಯಾಲಿಗಳು ರೋಡ್ ಶೋ ಗಳನ್ನು ಮಾಡುವ ಮೂಲಕ ಮತದಾರರನ್ನು ಓಲೈಸುವ ಕಾರ್ಯದಲ್ಲಿ ಮುಂದಾದರು.ಬಿಜೆಪಿ ಹೆಚ್ಚಾಗಿ ಪ್ರಧಾನಿ ಮೋದಿ ಅವರ ಮೇಲೆ ಅವಲಂಬಿತವಾಗಿದ್ದರಿಂದಾಗಿ ಅವರು ಒಟ್ಟು 24 ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ಮಾಡಬೇಕಾಗಿ ಬಂತು. ಇನ್ನೂ ಕಾಂಗ್ರೆಸ್ ಪಕ್ಷದ ಪರವಾಗಿ ರಾಹುಲ್ ಗಾಂಧಿ 21 ರ್ಯಾಲಿಗಳನ್ನು ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗರಿಷ್ಠ 35 ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದರು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು 31 ರ್ಯಾಲಿಗಳು-ರೋಡ್ ಶೋಗಳನ್ನು ಮಾಡಿದ್ದಾರೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 12 ಸಾರ್ವಜನಿಕ ಸಭೆಗಳನ್ನು ನಡೆಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 16 ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು 22 ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 34 ರ್ಯಾಲಿಗಳನ್ನು ನಡೆಸಿದ್ದರೆ, ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇವಲ ಒಂದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಚುನಾವಣೆಯಲ್ಲಿ ಜಾತಿಯ ಪ್ರಭಾವ
ಯಾವುದೇ ಚುನಾವಣೆಯಲ್ಲಿಯೂ ಕೂಡ ಜಾತಿ ಲೆಕ್ಕಾಚಾರವು ಹೆಚ್ಚಿನ ರೀತಿಯಲ್ಲಿ ಪ್ರಭಾವ ಬೀರುತ್ತದೆ, ಇದಕ್ಕೆ ಅನುಸಾರವಾಗಿಯೇ ರಾಜಕೀಯ ಪಕ್ಷಗಳು ಟಿಕೆಟ್ ಹಂಚಿಕೆಯನ್ನು ಮಾಡುತ್ತವೆ.ರಾಜ್ಯದಲ್ಲಿನ ಜಾತಿ ಲೆಕ್ಕಾಚಾರವನ್ನು ನೋಡಿದಾಗ ಲಿಂಗಾಯತರು ಶೇಕಡಾ 17 ರಷ್ಟಿದ್ದರೆ, ಒಕ್ಕಲಿಗರು ಶೇಕಡಾ 15 ರಷ್ಟಿದ್ದಾರೆ. ಕರ್ನಾಟಕದಲ್ಲಿ ಶೇ.17ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ.13ರಷ್ಟು ಮುಸ್ಲಿಮರಿದ್ದಾರೆ. ಇದಲ್ಲದೇ ಕುರುಬ ಶೇ.8, ಎಸ್ಟಿ ಶೇ.7, ಕ್ರಿಶ್ಚಿಯನ್ ಶೇ.2 ಮತ್ತು ಜೈನ್ ಶೇ.1.ರಷ್ಟಿದ್ದಾರೆ.
ಕರ್ನಾಟಕ ಚುನಾವಣೆ: ಸೀಟು ಹಂಚಿಕೆ
ಬಿಜೆಪಿ - 79-94
ಕಾಂಗ್ರೆಸ್ - 103-118
ಜೆಡಿಎಸ್ - 25-33
ಕರ್ನಾಟಕ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ: ಮತ ಹಂಚಿಕೆ
ಬಿಜೆಪಿ - ಶೇ 36
ಕಾಂಗ್ರೆಸ್ - ಶೇ 41
ಜೆಡಿಎಸ್ - ಶೇ 17
ಸಮೀಕ್ಷೆಯಲ್ಲಿ ಕಂಡುಕೊಂಡಿರುವ ಇನ್ನೊಂದು ಅಂಶವೆಂದರೆ ಮತಗಳಿಕೆ ಪ್ರಮಾಣದಲ್ಲಿಯೂ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿದೆ.ಅದು ಶೇ 41% ವರೆಗೆ ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದೆ, ಇನ್ನೂ ಬಿಜೆಪಿ ಶೇ.36ರಷ್ಟು ಮತಗಳನ್ನು ಪಡೆಯುತ್ತಿದ್ದು, ಜೆಡಿಎಸ್ ಶೇ.17ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಉಳಿದ ಪಕ್ಷಗಳು ಶೇ 6ರಷ್ಟು ಮತಗಳನ್ನು ಪಡೆಯವ ಸಾಧ್ಯತೆ ಇದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮತ ಯಾಚಿಸಿದರೆ, ಆದರೆ ಕಾಂಗ್ರೆಸ್ ಪಕ್ಷವು ಬಿಜೆಪಿಯ ವೈಫಲ್ಯಗಳನ್ನು ತೋರಿಸುವುದರ ಜೊತೆಗೆ ಕೆಲವು ಜನಪ್ರಿಯ ಯೋಜನೆಗಳನ್ನು ಘೋಷಿಸುವ ಮೂಲಕ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನೂ ಜೆಡಿಎಸ್ ಪಕ್ಷವು ಪ್ರಾದೇಶಿಕ ಅಸ್ಮಿತೆ ಮಹಿಳೆಯರು ರೈತರನ್ನು ಕೇಂದ್ರಿಕರಿಸಿ ತನ್ನ ಪ್ರಣಾಳಿಕೆಯಲ್ಲಿ ಹಲವು ಯೋಜನೆಗಳನ್ನು ಘೋಷಿಸಿತ್ತು, ಈ ಬಾರಿ ಪಂಚರತ್ನ ಯೋಜನೆಯ ಮೂಲಕ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಯತ್ನಿಸಿದ್ದರು.ಜೊತೆಗೆ ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ 90 ಇಳಿ ವಯಸ್ಸಿನಲ್ಲಿಯೂ ಕೂಡ ಪ್ರಚಾರಕ್ಕೆ ಧುಮುಕಿದ್ದರು
ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಮತದಾನವು ಬುಧವಾರ ಸಂಜೆ 7 ಗಂಟೆಗೆ ಮುಕ್ತಾಯಗೊಂಡಿದೆ.ಭಾರತೀಯ ಜನತಾ ಪಕ್ಷವು ಎಲ್ಲಾ 224 ವಿಧಾನಸಭಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ 223 ಅಸೆಂಬ್ಲಿ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷವು ಮೇಲುಕೋಟೆ ಸ್ಥಾನಕ್ಕೆ ಅಭ್ಯರ್ಥಿಯನ್ನು ಘೋಷಿಸಲಿಲ್ಲ. 2,613 ಅಭ್ಯರ್ಥಿಗಳ ಪೈಕಿ 2,427 ಪುರುಷರು ಮತ್ತು 185 ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಪ್ರದೇಶವಾರು ಜೆಡಿಎಸ್ ಗಳಿಸಲಿರುವ ಸ್ಥಾನಗಳು
ಮಧ್ಯ ಕರ್ನಾಟಕ - 01-2
ಕರಾವಳಿ ಕರ್ನಾಟಕ - 00
ಗ್ರೇಟರ್ ಬೆಂಗಳೂರು- 2-3
ಹೈದರಾಬಾದ್ ಕರ್ನಾಟಕ - 4-7
ಮುಂಬೈ ಕರ್ನಾಟಕ -1-3
ಮೈಸೂರು ಕರ್ನಾಟಕ -20-26
ಪ್ರದೇಶವಾರು ಇತರೆ ಅಭ್ಯರ್ಥಿಗಳು ಗಳಿಸಲಿರುವ ಸ್ಥಾನಗಳು
ಮಧ್ಯ ಕರ್ನಾಟಕ - 01
ಕರಾವಳಿ ಕರ್ನಾಟಕ - 00
ಗ್ರೇಟರ್ ಬೆಂಗಳೂರು- 00
ಹೈದರಾಬಾದ್ ಕರ್ನಾಟಕ - 01
ಮುಂಬೈ ಕರ್ನಾಟಕ -1-2
ಮೈಸೂರು ಕರ್ನಾಟಕ -01
ಪ್ರದೇಶವಾರು ಬಿಜೆಪಿ ಗಳಿಸಲಿರುವ ಸ್ಥಾನಗಳು
ಮಧ್ಯ ಕರ್ನಾಟಕ - 11-14
ಕರಾವಳಿ ಕರ್ನಾಟಕ - 13-16
ಗ್ರೇಟರ್ ಬೆಂಗಳೂರು- 13-16
ಹೈದರಾಬಾದ್ ಕರ್ನಾಟಕ - 11-16
ಮುಂಬೈ ಕರ್ನಾಟಕ -18-23
ಮೈಸೂರು ಕರ್ನಾಟಕ -06-09
ಪ್ರದೇಶವಾರು ಬಿಜೆಪಿ ಗಳಿಸಲಿರುವ ಸ್ಥಾನಗಳು
ಮಧ್ಯ ಕರ್ನಾಟಕ - 11-14
ಕರಾವಳಿ ಕರ್ನಾಟಕ - 13-16
ಗ್ರೇಟರ್ ಬೆಂಗಳೂರು- 13-16
ಹೈದರಾಬಾದ್ ಕರ್ನಾಟಕ - 11-16
ಮುಂಬೈ ಕರ್ನಾಟಕ -18-23
ಮೈಸೂರು ಕರ್ನಾಟಕ -06-09
ಪ್ರದೇಶವಾರು ಸ್ಥಾನಗಳ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷವು ಹೈದರಾಬಾದ್ ಕರ್ನಾಟಕ (21-26), , ಮೈಸೂರ್ ಕರ್ನಾಟಕ (23-28) ಮತ್ತು ಮುಂಬೈ ಕರ್ನಾಟಕ (21-26,)ದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದೆ.