Karnataka Assembly Elections 2023: ರಾಮನ ಬಂಟ ಹನುಮನೇ ಬೇಡ ಎಂದರೆ ಹೇಗೆ..? ಎಂದು ಭಜರಂಗದಳ ನಿಷೇಧ ಎಂಬ ಕಾಂಗ್ರೆಸ್ ಪ್ರಣಾಳಿಕೆಗೆ ಚಾಮರಾಜನಗರ ಹಾಗೂ ವರುಣ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಚಾಮರಾಜನಗರದಲ್ಲಿ ಪ್ರಚಾರ ನಡೆಸಿ ಮಾಧ್ಯಮದರೊಂದಿಗೆ ಮಾತನಾಡಿದ ಸಚಿವ ವಿ‌. ಸೋಮಣ್ಣ, ಕಾಂಗ್ರೆಸ್ ಪಕ್ಷದವರು ಒಂದೊಂದು ದಿನ ಒಂದೊಂದು ಮಾತಾಡ್ತಾ ಇದ್ದಾರೆ.  ಇದೇನಾ 75 ವರ್ಷ ಆಡಳಿತ ನಡಿಸಿದವರ ರೀತಿ..!, ದೇವರು, ಸತ್ ಸಂಪ್ರದಾಯಗಳೇ ಬೇಡ ಎಂದರೆ ಈ ದೇಶಕ್ಕೆ ಭವಿಷ್ಯ ಇರುತ್ತಾ? ಎಂದು ಕಿಡಿಕಾರಿದರು.


ಇದನ್ನೂ ಓದಿ- ಕಾಂಗ್ರೆಸ್ ಪ್ರಣಾಳಿಕೆ ಮೋಸದ ಪ್ರಣಾಳಿಕೆ: ಸಿಎಂ ಬಸವರಾಜ್ ಬೊಮ್ಮಾಯಿ


ಸತ್ಸಂಪ್ರದಾಯಗಳು ಭಾರತೀಯರ ಕೊಡುಗೆಯಾಗಿದೆ, ರಾಮನ ಭಕ್ತ ಹನುಂತನೂ  ಬೇಡ ಅಂದ್ರೆ ಹೇಗೆ? ಇವರ ಮನೇಲಿ ಪೂಜೆ ಮಾಡಲ್ವಾ, ಕುಂಕುಮ ಹಾಕಲ್ವಾ ವಿಭೂತಿ ಬಳಸಳ್ವಾ?  ಇದೇನಿದು ಇವರು ದಿನಕ್ಕೊಂದು  ರೀತಿ  ಆಡ್ತಾರೆ, ನಾವೇನೂ ಅಭಿವೃದ್ಧಿ ಮಾಡಿದ್ದೇವೆ,  ಅವರೇನೂ ಅಭಿವೃದ್ಧಿ ಮಾಡಿದ್ದಾರೆ ಈ ವಿಚಾರ ಇಟ್ಟುಕೊಂಡು ಚುನಾವಣೆಗೆ ಹೋಗಲಿ ಎಂದರು. 


ಇದನ್ನೂ ಓದಿ- ಭಜರಂಗದಳ ನಿಷೇಧ: ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸುತ್ತೇವೆಂದ ಶ್ರೀರಾಮಸೇನೆ  


ಶಾಸಕ ಸ್ಥಾನ ಎಂದರೆ ಅದು ಉದ್ಯೋಗ ಅಲ್ಲ, ಜನರ ಸೇವೆಗೆ ಸಿಗುವ ಅವಕಾಶ. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಪ್ರಣಾಳಿಕೆಗೆ ಅಸಮಾಧಾನ ಹೊರಹಾಕಿದರು.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.