ಕಾಂಗ್ರೆಸ್ ಬಿಜೆಪಿ ನಮ್ಮ ನಾಯಕರನ್ನು ಸಂಪರ್ಕಿಸಿದೆ ! ಯಾರಿಗೆ ಬೆಂಬಲ ಎನ್ನುವ ನಿರ್ಧಾರ ಪಕ್ಷ ತೆಗೆದುಕೊಂಡಿದೆ : ಜೆಡಿಎಸ್
ಅತಂತ್ರ ಸರ್ಕಾರ ಬಂದರೆ ತಾವು ಯಾರಿಗೆ ಬೆಂಬಲ ಸೂಚಿಸಬೇಕು ಎನ್ನುವುದನ್ನು ಜೆಡಿಎಸ್ ಈಗಾಗಲೇ ನಿರ್ಧರಿಸಿದೆ ಎನ್ನಲಾಗಿದೆ. ಈ ಮಾಹಿತಿಯನ್ನು ಪಕ್ಷದ ಹಿರಿಯ ಮುಖಂಡರೊಬ್ಬರು ಹೊರ ಹಾಕಿದ್ದಾರೆ.
ಬೆಂಗಳೂರು : ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎನ್ನುವ ಮಾಹಿತಿ ಸಮೀಕ್ಷೆಗಳಿಂದ ಹೊರ ಬಿದ್ದಿದೆ. ಸಮೀಕ್ಷೆಗಳ ಪ್ರಕಾರ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಬೇಕಾದರೆ ಜೆಡಿಎಸ್ ನ ಸಹಕಾರ ಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಜೆಡಿಎಸ್ ಕದ ತಟ್ಟಿದೆ ಎನ್ನಲಾಗಿದೆ. ಜೆಡಿಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈಗಾಗಲೇ ಸಿಂಗಾಪುರದಲ್ಲಿದ್ದಾರೆ. ಬುಧವಾರ ರಾತ್ರಿಯೇ ಅವರು ಸಿಂಗಾಪುರಕ್ಕೆ ತೆರಳಿದ್ದಾರೆ. ಅತಂತ್ರ ಸರ್ಕಾರ ಬಂದರೆ ತಾವು ಯಾರಿಗೆ ಬೆಂಬಲ ಸೂಚಿಸಬೇಕು ಎನ್ನುವುದನ್ನು ಜೆಡಿಎಸ್ ಈಗಾಗಲೇ ನಿರ್ಧರಿಸಿದೆ ಎನ್ನಲಾಗಿದೆ. ಈ ಮಾಹಿತಿಯನ್ನು ಪಕ್ಷದ ಹಿರಿಯ ಮುಖಂಡರೊಬ್ಬರು ಹೊರ ಹಾಕಿದ್ದಾರೆ.
ಜೆಡಿಎಸ್ ಯಾವ ಪಕ್ಷದ ಜೊತೆ ಹೋಗಲಿದೆ ಎನ್ನುವ ನಿರ್ಧಾರವನ್ನು ಈಗಾಗಲೇ ಮಾಡಿ ಆಗಿದೆ. ಸರಿಯಾದ ಸಮಯ ಬಂದಾಗ ನಮ್ಮ ನಿರ್ಧಾರವನ್ನು ಜನತೆ ಮುಂದೆ ಘೋಷಿಸಲಾಗುವುದು ಎಂದು ಪಕ್ಷದ ಹಿರಿಯ ನಾಯಕ ನಾಯಕ ತನ್ವೀರ್ ಅಹ್ಮದ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ತಂದೆ-ತಾಯಿ, ಹೆಂಡತಿ-ಮಕ್ಕಳ ಜೊತೆ ಕಾಲ ಕಳೆಯಿರಿ: ‘ಕೈ’ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸಲಹೆ
ಆದರೆ ತಾನು ಜೆಡಿಎಸ್ ನಾಯಕರನ್ನು ಸಂಪರ್ಕಿಸಿರುವ ವರದಿಯನ್ನು ಬಿಜೆಪಿ ತಳ್ಳಿ ಹಾಕಿದೆ. ಸ್ಪಷ್ಟ ಜನಾದೇಶದ ಬಗ್ಗೆ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ. ಸಮ್ಮಿಶ್ರ ಸರ್ಕಾರದ ಪ್ರಶ್ನೆಯೇ ಇಲ್ಲ, ಹಾಗಾಗಿ ಬಿಜೆಪಿ ಜೆಡಿಎಸ್ ಅನ್ನು ಸಂಪರ್ಕಿಸುವ ಪ್ರಮೇಯ ಕೂಡಾ ಇಲ್ಲ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಾವು 120 ಸೀಟುಗಳನ್ನು ಪಡೆಯುವುದು ಖಚಿತ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಆದರೆ ಸರ್ಕಾರ ರಚನೆಯ ಬಗ್ಗೆ ಮಾತುಕತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ನಮ್ಮನ್ನು ಸಂಪರ್ಕಿಸಿವೆ ಎನ್ನುವುದನ್ನು ಜೆಡಿಎಸ್ ಪುನರುಚ್ಚರಿಸಿದೆ. ರಾಜ್ಯದ ಒಳಿತಿಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಪರಿಶೀಲಿಸಬೇಕು ಎನ್ನುವುದು ಕರ್ನಾಟಕದ ಜನರ ಬಯಕೆ. ಪ್ರಾದೇಶಿಕ ಪಕ್ಷವು ಕರ್ನಾಟಕದ ಅಭಿವೃದ್ಧಿಗಾಗಿ ಕೆಲಸ ಮಾಡಲು ಬಯಸುತ್ತದೆ ಎಂದು ತನ್ವೀರ್ ಅಹ್ಮದ್ ಹೇಳಿದ್ದಾರೆ.
ಇದನ್ನೂ ಓದಿ : ʼಬಜರಂಗದಳʼಕ್ಕೂ ಭಜರಂಗಿಗೂ, ಇಮಾಮ್ ಸಾಬ್‌ಗೂ ಶಾಸ್ತ್ರಿಗೂ ಏನ್ ಸಂಬಂಧ..!
ಇನ್ನು ಯಾವ ಪಕ್ಷದ ಜೊತೆ ಕೈ ಜೋಡಿಸುತ್ತೀರಿ ಎನ್ನುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಕರ್ನಾಟಕ ಮತ್ತು ಕನ್ನಡಿಗರ ಅಭ್ಯುದಯಕ್ಕೆ ಯಾರು ಒತ್ತು ನೀಡುತ್ತಾರೆಯೋ ಅವರಿಗೆ ಬೆಂಬಲ ಎಂದಿದ್ದಾರೆ.
"ನಾವಿಲ್ಲದೆ ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ಪಕ್ಷಗಳಷ್ಟು ಸಂಪನ್ಮೂಲಗಳನ್ನು ನಾವು ಹೊಂದಿಸಲು ಸಾಧ್ಯವಿಲ್ಲ. ಹಣ, ಶಕ್ತಿ, ತೋಳ್ಬಲದ ವಿಚಾರದಲ್ಲಿ ನಾವು ದುರ್ಬಲರಾಗಿದ್ದೇವೆ. ಆದರೆ ನಾವು ಸಾಕಷ್ಟು ಉತ್ತಮ ಸಾಧನೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದ ಭಾಗವಾಗಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Karnataka Election 2023: ಮತದಾನ ಮುಗಿಯುತ್ತಿದ್ದಂತೆ ಸಿಎಂ ಟೆಂಪಲ್ ರನ್: ಸವದತ್ತಿ ಕ್ಷೇತ್ರಕ್ಕೆ ಬೊಮ್ಮಾಯಿ ಭೇಟಿ
ಪಕ್ಷದ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಸಾಮಾನ್ಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ. ಮತ ಎಣಿಕೆ ದಿನದಂದು ಅವರು ವಾಪಸಾಗಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.