ತುಮಕೂರು : ಬಜರಂಗದಳಕ್ಕೂ ಮತ್ತು ಬಜರಂಗಿಗೂ ಏನ್ ರೀ ಸಂಬಂಧ, ಬಜರಂಗದಳವೇ ಬೇರೆ, ಭಜರಂಗಿಯೇ ಬೇರೆ, ಅದೊಂದು ರಾಜಕೀಯ ಸಂಘಟನೆ ಅಷ್ಟೆ. ಭಜರಂಗಿ ಅಂದ್ರೆ ದೇವರು ನಾವೆಲ್ಲರೂ ಪೂಜೆ ಮಾಡೋ ದೇವರು ಎಂದು ಮಧುಗಿರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧುಗಿರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ, ಇಮಾಮ್ ಸಾಬ್‌ಗೂ ಶಾಸ್ತ್ರಿಗೂ ಏನ್ ರೀ ಸಂಬಂಧ. ಬಜರಂಗದಳವೇ ಬೇರೆ, ಅದೊಂದು ರಾಜಕೀಯ ಸಂಘಟನೆ. ಭಜರಂಗಿ ಅಂದ್ರೆ ದೇವರು. ನಾವೆಲ್ಲರೂ ಪೂಜೆ ಮಾಡೋ ದೇವರು. ಸುಮ್ ಸುಮ್ನೆ.. ಕೇಳ್ರಿ ಇಲ್ಲಿ ಹೇಳ್ತಿನಿ.
ನೀವು ಮೀಡಿಯಾದವ್ರು ಇರ್ಬಹುದು, ನಾವು ರಾಜಕಾರಣಿಗಳು ಇರಬಹುದು ಸುಮ್ ಸುಮ್ನೆ ಸಂಬಂಧ ಕಟ್ಟಬಾರದು ಎಂದು ಗುಡುಗಿದರು.
ಇದನ್ನೂ ಓದಿ: Karnataka Election 2023: ಮತದಾನ ಮುಗಿಯುತ್ತಿದ್ದಂತೆ ಸಿಎಂ ಟೆಂಪಲ್ ರನ್: ಸವದತ್ತಿ ಕ್ಷೇತ್ರಕ್ಕೆ ಬೊಮ್ಮಾಯಿ ಭೇಟಿ
ಅಲ್ಲದೆ, ಯಾವ್ ಊರಲ್ಲಿ ಆಂಜನೇಯನ ದೇವಸ್ಥಾನ ಇಲ್ಲ ಹೇಳಿ. ಯಾವ ದೇವಸ್ಥಾನ ಇಲ್ಲ ಅಂದ್ರು, ಪ್ರತಿ ಹಳ್ಳಿಯಲ್ಲಿ ಒಂದು ಆಂಜನೇಯ ದೇವಸ್ಥಾನ ಇದ್ದೇ ಇರುತ್ತೆ. ಆದ್ದರಿಂದ ನಾವು ಬಿಜೆಪಿಯವರಿಂದ ದೇವರ ಭಕ್ತಿಯನ್ನ ಕಲಿಯಬೇಕಿಲ್ಲ. ದಯಮಾಡಿ ಭಜರಂಗಿಗೂ ಬಜರಂಗದಳಕ್ಕೂ ಸಂಬಂಧ ಕಲ್ಪಿಸಬೇಡಿ. ಬಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ, ಬಜರಂಗದಳ ಒಂದೇ ಅಲ್ಲ. ಯಾರೆಲ್ಲ ಸಮಾಜ ಘಾತುಕ ಕೆಲಸ ಮಾಡ್ತಾರೆ ಅವರನ್ನೆಲ್ಲ ಬ್ಯಾನ್ ಮಾಡ್ತೀವಿ ಅಂದಿದ್ದೀವಿ. ಅದರಲ್ಲಿ ಇದು ಒಂದು ಸೇರಿರಬಹುದು ಎಂದು ಕೆ.ಎನ್. ರಾಜಣ್ಣ ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ