ಡಿಜಿಟಲ್ ಮಿಡೀಯಾ ಮೊರೆ ಹೋದ ರಾಜಕೀಯ ಕಲಿಗಳು; ಕಂಗಾಲಾದ ಪ್ರಿಂಟಿಂಗ್ ಪ್ರೆಸ್ ಮಾಲೀಕರು
Printing Press : ಹಗಲು ರಾತ್ರಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸುಮ್ಮನೆ ಇರುವಂತೆ ಆಗಿದೆ. ಚುನಾವಣೆಯ ಆದಾಯದ ನಿರೀಕ್ಷೆಯಲ್ಲಿದ್ದ ಮಾಲೀಕರು ಕಂಗಾಲಾಗಿದ್ದಾರೆ. ಇದು ಪ್ರಿಟಿಂಗ್ ಪ್ರೆಸ್ ಗಳ ಸದ್ಯದ ಚಿತ್ರಣ. ಎಲೆಕ್ಷನ್ ಟೈಮ್ನಲ್ಲಿ ಪಂಪ್ಲೆಟ್ ಗಳಿಗೆ ಡಿಮ್ಯಾಂಡೇ ಇಲ್ಲದಂತಾಗಿದ್ದು,ಹಿಂದೆಲ್ಲ ಲಕ್ಷದ ಲೆಕ್ಕದಲ್ಲಿ ಪ್ರಿಟಿಂಗ್ ಮಾಡುತ್ತಿದ್ದ ಮಾಲೀಕರು ಈಗ ಸಾವಿರ ಆರ್ಡರ್ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆಲ್ಲ ಕಾರಣ ಡಿಜಿಟಲ್ ಮೀಡಿಯಾ.
Karnataka Assembly Election 2023 : ಕರುನಾಡ ಕುರುಕ್ಷೇತ್ರಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿಯಿವೆ. ಗೆಲುವಿನ ಹುಮ್ಮಸ್ಸಿನಲ್ಲಿ ರಣಕಣಕ್ಕೆ ಇಳಿದಿರುವ ಕದನ ಕಲಿಗಳು, ಜನರ ಮನ ತಲುಪಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಅಭ್ಯರ್ಥಿಗಳು ಮತಬೇಟೆ ಶುರು ಮಾಡಿದ್ದಾರೆ. ಆದ್ರೆ ಪಂಪ್ಲೆಟ್, ಕರಪತ್ರದ ಮೇಲೆ ಅಭ್ಯರ್ಥಿಗಳಿಗೆ ಆಸಕ್ತಿ ಕಮ್ಮಿಯಾದಂತಿದೆ. ಡಿಜಿಟಲ್ ಮೀಡಿಯಾ ಮೊರೆ ಹೋದ ಅಭ್ಯರ್ಥಿಗಳು ಪೇಸ್ಬುಕ್, ವಾಟ್ಸಾಪ್, ಯೂಟ್ಯೂಬ್, ಇನ್ಸ್ಟಾಗ್ರಾಂಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಭರ್ಜರಿ ಆದಾಯ ನಿರೀಕ್ಷೆಯಲ್ಲಿದ್ದ ಪ್ರಿಟಿಂಗ್ ಪ್ರೆಸ್ ಮಾಲೀಕರು ನಿರಾಸರಾಗಿದ್ದಾರೆ.
ಕಳೆದ ಚುನಾವಣೆಯ ವೇಳೆ ನೀತಿಸಂಹಿತೆ ಜಾರಿಗೂ ಮುನ್ನವೇ ಲಕ್ಷದ ಲೆಕ್ಕದಲ್ಲಿ ಪಂಪ್ಲೆಟ್ ಗಳಿಗೆ ಆರ್ಡರ್ ಬರ್ತಿತ್ತು. ಆದರೇ ಈ ಬಾರಿ ನೀತಿಸಂಹಿತೆ ಬಂದು 1 ತಿಂಗಳು ಆದರೂ 10 ಸಾವಿರ ಪಂಪ್ಲೆಟ್ ಗಳ ಮಾತ್ರ ಆರ್ಡರ್ ಮಾಡಿದ್ದಾರೆ. ಅಲ್ಲದೆ ಚುನಾವಣಾ ಆಯೋಗ ಕೂಡ ಪ್ರಿಟಿಂಗ್ ಗೆ ಕಠಿಣ ನಿಯಮ ಜಾರಿ ಮಾಡಿದೆ. ಒಪ್ಪಿಗೆ ಪಡೆಯದೇ ಮುದ್ರಣ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಕಾಗದದ ದರ ಕೂಡ ಅಧಿಕವಾಗಿರುವುದು ಮಾಲೀಕರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಇದನ್ನೂ ಓದಿ-ಇಂದು ಹನೂರಿಗೆ ಪ್ರಿಯಾಂಕಾ ಗಾಂಧಿ- ಮಹಿಳೆಯರೊಂದಿಗೆ ಸಂವಾದ, ಚುನಾವಣಾ ಪ್ರಚಾರ
ಅತ್ತ ಪ್ರಿಟಿಂಗ್ ಪ್ರೆಸ್ ಮಾಲೀಕರು ನಷ್ಟದಲ್ಲಿದ್ರೆ, ಇತ್ತ ಸೋಷಿಯಲ್ ಮೀಡಿಯಾ ಪ್ರಮೋಷನ್ ಕಂಪನಿಗಳಿಗೆ ಚುನಾವಣೆ ಸುಗ್ಗಿ ಶುರುವಾಗಿದೆ. ಲಕ್ಷ ಲಕ್ಷದ ಪ್ಯಾಕೇಜ್ ಲೆಕ್ಕದಲ್ಲಿ ಅಭ್ಯರ್ಥಿಗಳ ಪರವಾಗಿ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ತಾವು ಕುಳಿತಿರುವ ಜಾಗದಿಂದಲೇ ಮತದಾರರಿಗೆ ಮೊಬೈಲ್ ಮೂಲಕ ತಲುಪುತ್ತಿದ್ದಾರೆ. ಹೆಚ್ಚಿನ ಆರ್ಡರ್ ಬರುತ್ತಿರುವ ಕಾರಣ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಂಡು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇನ್ನೂ ಚುನಾವಣೆ ಬೆರಳೆಣಿಕೆಯಷ್ಟು ದಿನವಿರುವ ಕಾರಣ ಇನ್ನೂ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲೆದ್ದಾರೆ.
ಇದನ್ನೂ ಓದಿ-ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ನೇರ ಮತದಾನಕ್ಕೆ ಅವಕಾಶ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.