ಇಂದು ಹನೂರಿಗೆ ಪ್ರಿಯಾಂಕಾ ಗಾಂಧಿ- ಮಹಿಳೆಯರೊಂದಿಗೆ ಸಂವಾದ, ಚುನಾವಣಾ ಪ್ರಚಾರ
Karnataka assembly Election: ಇಂದು ಚಾಮರಾಜನಗರದ ಹನೂರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಲಿದ್ದು, ಈ ಭಾಗದ ಗಿರಿಜನ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.
Karnataka assembly Election 2023: ಕಿತ್ತೂರು ಕರ್ನಾಟಕ ಭಾಗದಲ್ಲಿ ಸಹೋದರ ರಾಹುಲ್ ಗಾಂಧಿ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಈಗ ರಾಜ್ಯ ಚುನಾವಣಾ ಅಖಾಡಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ ಕೊಡುತ್ತಿದ್ದು ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರಿಗೆ ಮಧ್ಯಾಹ್ನ 2.30 ರ ಸುಮಾರಿಗೆ ಬರಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಗಿರಿಜನ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ. ಗಿರಿಜನ ಮಹಿಳೆಯರ ಅಭಿವೃದ್ಧಿಗೆ ಕಾಂಗ್ರೆಸ್ ನೀತಿ, ಕಾರ್ಯಕ್ರಮಗಳ ಬಗ್ಗೆ ಪ್ರಿಯಾಂಕಾ ತಿಳಿಸಲಿದ್ದಾರೆ.
ಇದನ್ನೂ ಓದಿ- ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ನೇರ ಮತದಾನಕ್ಕೆ ಅವಕಾಶ..!
ಇನ್ನು, ಸಂವಾದದ ಬಳಿಕ ಜಿಲ್ಲೆಯ ನಾಲ್ಕು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಿಯಾಂಕಾ ಗಾಂಧಿ ಚುನಾವಣಾ ಭಾಷಣ ಮಾಡಲಿದ್ದು ಈಗಾಗಲೇ ಹನೂರಿನಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ- Karnataka Election 2023: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮೇಲೆ ಜನರಿಗೆ ವಿಶ್ವಾಸವಿಲ್ಲ - ಸಿಎಂ ಬೊಮ್ಮಾಯಿ
ಸೋಮವಾರವಷ್ಟೇ ಗುಂಡ್ಲುಪೇಟೆಯಲ್ಲಿ ಅಮಿತ್ ಷಾ ರೋಡ್ ಶೋ ಮಾಡಿ ಕಮಲಪಡೆಗೆ ರಣೋತ್ಸಾಹ ತುಂಬಿದ್ದರು. ಈಗ ಕೈ ನಾಯಕಿ ಎಂಟ್ರಿ ಕೊಡುತ್ತಿದ್ದು ಕೈ ಪಡೆಗೆ ಶಕ್ತಿ ತುಂಬಲಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.