ದಾವಣಗೆರೆ : ನಮ್ಮ ಹತ್ರನೂ ಬಹಳಷ್ಟು ಸಿಡಿಗಳಿವೆ, ಈಗ ಬಿಡುಗಡೆ ಮಾಡಲ್ಲ. ಈಗಲೇ ಬಿಡುಗಡೆ ಮಾಡಿದ್ರೆ ಜೈಲಿಗೆ ಹೋಗ್ತೀವಿ. ಸಿಡಿ ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದಾನೆ ಪುಣ್ಯಾತ್ಮ. ಸ್ಟೇ ವೆಕೆಟ್ ಆಗಲಿ ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ರೇಣುಕಾಚಾರ್ಯ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಹೊಸ ಬಾಂಬ್‌ ಸಿಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೊನ್ನಾಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹೊನ್ನಾಳಿಯ ಮಾಜಿ ಶಾಸಕ ಹಾಗೂ ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿ ಡಿ. ಜಿ. ಶಾಂತನಗೌಡ ಗಂಭೀರ ಆರೋಪವನ್ನು ಮಾಡಿದ್ದಾರೆ. ನಮ್ಮ ಹತ್ರನೂ ಬಹಳಷ್ಟು ಸಿಡಿಗಳಿವೆ, ಈಗ ಬಿಡುಗಡೆ ಮಾಡಲ್ಲ. ಈಗಲೇ ಬಿಡುಗಡೆ ಮಾಡಿದ್ರೆ ಜೈಲಿಗೆ ಹೋಗ್ತೀವಿ. ಈತ ಎಲ್ಲೆಲ್ಲಿ ಹೋಗ್ತಾನೆ, ಏನೇನು ಮಾಡ್ತಾನೆ ಎಲ್ಲವೂ ಗೊತ್ತು. ಸಿಡಿ ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದಾನೆ ಪುಣ್ಯಾತ್ಮ. ಸ್ಟೇ ವೆಕೆಟ್ ಆಗಲಿ ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ:ಜನರ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರವಿಲ್ಲದ ಉತ್ತರಕುಮಾರರಾಗಿದ್ದಾರೆ!: ಕಾಂಗ್ರೆಸ್


ಈತ ಸತ್ಯ ಹರಿಶ್ಚಂದ್ರನಾಗಿದ್ದರೆ ಯಾಕೆ ಸ್ಟೇ ತರಬೇಕಿತ್ತು. ಆ ಸಿಡಿಗಳನ್ನ ಬಿಡುಗಡೆ ಮಾಡೋಕೆ ತುಂಬ ಜನ ಕಾಯುತ್ತಿದ್ದಾರೆ. ಈ ಪುಣ್ಯಾತ್ಮ ಎಲ್ಲೆಲ್ಲಿ ಏನೇನು ಮಾಡ್ತಾನೆ ಎಂಬುದು ನಮಗೂ ಗೊತ್ತು. ಈತ ತುಮಕೂರಿನ ವಿದ್ಯಾನಗರಕ್ಕೆ ಹೋಗುತ್ತಾನೆ. ಈತನ ಬಗ್ಗೆ ನಮ್ಮಲ್ಲಿ ಎಲ್ಲ ದಾಖಲೆಗಳಿವೆ. ಸ್ಟೇ ಅವಧಿ ಮುಗಿದ ಮೇಲೆ ಬಿಡುಗಡೆ ಮಾಡುತ್ತೇವೆ. ರೇಣುಕಾಚಾರ್ಯ ಹೆಸರೇಳದೆ ಶಾಂತನಗೌಡ ಅವರು ಸಿಡಿ ಬಾಂಬ್ ಸ್ಫೋಟಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.