ಜನರ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರವಿಲ್ಲದ ಉತ್ತರಕುಮಾರರಾಗಿದ್ದಾರೆ!: ಕಾಂಗ್ರೆಸ್

Karnataka Assembly Election 2023: ಪ್ರಧಾನಿ ಮೋದಿಯವರು ಈಶ್ವರಪ್ಪನವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ. ಈ ಶ್ಲಾಘನೆ ಏಕೆ? 40% ಕಮಿಷನ್ ಲೂಟಿ ಮಾಡಿದ್ದಕ್ಕಾ? ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ? ಭ್ರಷ್ಟಾಚಾರದ ಪೋಷಣೆ ಮಾಡಿದ್ದಕ್ಕಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Apr 21, 2023, 01:59 PM IST
  • ಜನರ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರವಿಲ್ಲದ ಉತ್ತರಕುಮಾರರಾಗಿದ್ದಾರೆ!
  • ಅಧಿಕಾರದುದ್ದಕ್ಕೂ ಜನವಿರೋಧಿಯಾಗಿ ನಡೆದುಕೊಂಡ ಬಿಜೆಪಿಗೆ ಜನಾಕ್ರೋಶದ ಅಸಲಿ ದರ್ಶನವಾಗುತ್ತಿದೆ
  • ಕರ್ನಾಟಕದ ಜನತೆ ಮತ ಕೇಳಲು ಬರುವ ಬಿಜೆಪಿಗರ ಎದುರು ತಮ್ಮ ಗ್ಯಾಸ್ ಸಿಲಿಂಡರ್ ತಂದಿಡಲು ತೀರ್ಮಾನಿಸಿದ್ದಾರೆ!
ಜನರ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರವಿಲ್ಲದ ಉತ್ತರಕುಮಾರರಾಗಿದ್ದಾರೆ!: ಕಾಂಗ್ರೆಸ್ title=
ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಸಚಿವ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಅವರು ವರುಣಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ.

‘ಈಗ ಜನರ ಸಮಯ ಬಂದಿದೆ, ಜನರ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರವಿಲ್ಲದ ಉತ್ತರಕುಮಾರರಾಗಿದ್ದಾರೆ! ಡಿಯರ್ ಬಿಜೆಪಿ ಶಾಸಕರನ್ನು ಅಪಹರಿಸಿ ಅನೈತಿಕ ಸರ್ಕಾರ ಮಾಡಿದಂತಲ್ಲ ಜನರನ್ನು ಎದುರಿಸುವುದು. ಅಧಿಕಾರದುದ್ದಕ್ಕೂ ಜನವಿರೋಧಿಯಾಗಿ ನಡೆದುಕೊಂಡ ಬಿಜೆಪಿಗೆ ಜನಾಕ್ರೋಶದ ಅಸಲಿ ದರ್ಶನವಾಗುತ್ತಿದೆ. ಹೇಗಿದೆ ಜನಾಭಿಪ್ರಾಯ ಪ್ರತಾಪ್ ಸಿಂಹ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: Election 2023: ಸಿಎಂ ಆಗೋಕೆ ಏನ್ ಮಾಡಬೇಕು? ವಿ.ಸೋಮಣ್ಣಗೆ ಬಾಲಕನ ಪ್ರಶ್ನೆ!

‘ಕರ್ನಾಟಕದ ಕೋಟ್ಯಂತರ ರೈತರ, ಭೂರಹಿತರ ಬದುಕಿನ ಆಸರೆಯಾಗಿರುವುದು ಹೈನುಗಾರಿಕೆ. ಅವರ ಹೈನುಗಾರಿಕೆಗೆ ಬೆಂಬಲವಾಗಿರುವುದು "ನಂದಿನಿ". ಅಂತಹ ನಂದಿನಿಯ ಕತ್ತು ಕುಯ್ಯಲು ಹೊರಟಿರುವ ಗುಜರಾತಿ ಗುಲಾಮಗಿರಿಯಲ್ಲಿ ತೃಪ್ತಿ ಕಾಣುವ ಬಿಜೆಪಿಗೆ ಮತ ಹಾಕುವುದೆಂದರೆ ನಮ್ಮ ರೈತರ ಬೆನ್ನಿಗೆ ಚೂರಿ ಹಾಕಿದಂತೆ ಎಂದು ಕನ್ನಡಿಗರು ಅರ್ಥ ಮಾಡಿಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಕರ್ನಾಟಕದ ಜನತೆ ಮತ ಕೇಳಲು ಬರುವ ಬಿಜೆಪಿಗರ ಎದುರು ತಮ್ಮ ಗ್ಯಾಸ್ ಸಿಲಿಂಡರ್ ತಂದಿಡಲು ತೀರ್ಮಾನಿಸಿದ್ದಾರೆ! ಬಿಜೆಪಿಗೆ ಮತ ಹಾಕಿದರೆ ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ₹2000ಕ್ಕೆ ಏರಿಕೆಯಾಗಲು ಪ್ರೋತ್ಸಾಹಿಸಿದಂತೆ, ಕಾಂಗ್ರೆಸ್‌ಗೆ ಮತ ಹಾಕಿದರೆ ಗೃಹಲಕ್ಷಿ ಯೋಜನೆಯಲ್ಲಿ ₹2000 ಪಡೆದಂತೆ. ಇದು ಕನ್ನಡಿಗರಿಗೆ ತಿಳಿದಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಡಿಕೆಶಿ ನಾಮಪತ್ರ ಅಂಗೀಕಾರ : ಇನ್ನು ಕನಕಪುರ ಬಂಡೆಗಿಲ್ಲ ಅಡ್ಡಿ..!

‘ಒಂದು ಕಡೆ ಈಶ್ವರಪ್ಪ ಮೇಲೆ ಕಮಿಷನ್ ಆರೋಪ. ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ. ಇನ್ನೊಂದೆಡೆ ಸ್ವತಃ ಕರೆ ಮಾಡಿ ಈಶ್ವರಪ್ಪರನ್ನು ಶ್ಲಾಘಿಸಿದ ಪ್ರಧಾನಿ ಮೋದಿ. ಪ್ರಧಾನಿ ಮೋದಿ 'ಭ್ರಷ್ಟಾಚಾರ'ದ ಪರ ನಿಂತಿದ್ದಾರೆ ಎನ್ನುವುದಕ್ಕೆ ಇದಕ್ಕಿಂದ ಸಾಕ್ಷಿ ಬೇಕೆ? ಪ್ರಧಾನಿ ಮೋದಿಯವರು ಈಶ್ವರಪ್ಪನವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ. ಈ ಶ್ಲಾಘನೆ ಏಕೆ? 40% ಕಮಿಷನ್ ಲೂಟಿ ಮಾಡಿದ್ದಕ್ಕಾ? ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ? ಭ್ರಷ್ಟಾಚಾರದ ಪೋಷಣೆ ಮಾಡಿದ್ದಕ್ಕಾ? ಕಮಿಷನ್ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಮೋದಿ ಕಮಿಷನ್ ಲೂಟಿಕೋರನಿಗೆ ಬೆಂಬಲಿಸಿದ್ದಾರೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News