Karnataka Assembly Election: ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಪ್ರಚಂಡ‌ ಬಹುಮತದಿಂದ‌ ಗೆಲ್ಲಿಸಿ ಕಳಿಸಿ, ಇಲ್ಲಿ ಹದಗೆಟ್ಟಿರುವ ರಸ್ತೆ ಸರಿಪಡಿಸುತ್ತಾರೆ. ಒಂದೊಮ್ಮೆ ಚುನಾವಣೆಯಲ್ಲಿ ಗೆದ್ದ ಮೇಲೂ ಎಂ.ಆರ್. ಪಾಟೀಲ್ ಕೆಲಸ ಮಾಡದೆ ಹೋದರೆ ನನಗೆ ಹೇಳಿ ನಾನು ಕೆಲಸ ಮಾಡಿಸ್ತೀನಿ ಎಂದು ಚಿತ್ರನಟ ಕಿಚ್ಚ ಸುದೀಪ್ ಎಂ.ಆರ್. ಪಾಟೀಲ್ ಪರವಾಗಿ ಮತ ಯಾಚಿಸಿದರು. 


COMMERCIAL BREAK
SCROLL TO CONTINUE READING

ಕುಂದಗೋಳ ಪಟ್ಟಣದಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ಬಂದಿಳಿದು ರಸ್ತೆ ಮೂಲಕ ಸಂಶಿ ತಲುಪಿ ಬಳಿಕ ಬಸ್ ನಿಲ್ದಾಣದ ಮೂಲಕ ಮೆರವಣಿಗೆಯಲ್ಲಿ ಸಾಗಿದ ಸ್ಯಾಂಡಲ್ವುಡ್ ವರದ ನಾಯಕ ಕಿಚ್ಚ ಸುದೀಪ್ ನಂತರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು. ಅಭಿಮಾನಿಗಳ ಉತ್ಸಾಸ ಕಂಡು ಸಂತಸಗೊಂಡ ಸುದೀಪ್, ಆಕಾಶದತ್ತ ಕೇಸರಿ‌ ಬಲೂನ್ ಹಾರಿಸಿ ವಿಜಯದ ಸಂಕೇತ ತೋರಿಸಿದರು.


ಇದನ್ನೂ ಓದಿ- ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಮಲೆನಾಡು ಕ್ಷೇತ್ರವೇ ನಿರ್ಣಾಯಕ


ತಾಲೂಕಿನ ಸಂಶಿ ಗ್ರಾಮದ‌ ನಾಡರ ಬಯಲಿನಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಮಾತನಾಡಿದ‌ ನಟ ಕಿಚ್ಚ ಸುದೀಪ್, ನಿಮ್ಮೂರಲ್ಲಿನ‌ ಪರಸ್ಥಿತಿ ಹದಗೆಟ್ಟು ಹೋಗಿದೆ. ಆದರೂ ನೀವು ಸುಮ್ಮನಿದ್ದೀರಿ ಎಂದುಕೊಂಡಿಲ್ಲ. ಏಕೆಂದರೆ ನೀವೆಲ್ಲಾ ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ್ ಅವರನ್ನು ಖಂಡಿತ ಗೆಲ್ಲಿಸುತ್ತೀರಿ ಎಂಬ ವಿಶ್ವಾಸ ನನಗೀಗ ಮೂಡಿದೆ ಎಂದರು.


ಇದೇ ವೇಳೆ ರಾಜ್ಯದಲ್ಲಿ ‌ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಎಂ.ಆರ್.ಪಾಟೀಲ ಕುಂದಗೋಳ ಶಾಸಕರಾಗಬೇಕು. ‌ಅದಕ್ಕಾಗಿ ನೀವೆಲ್ಲರೂ ನಿಮ್ಮ ಹಕ್ಕನ್ನು ಚಲಾಯಿಸಿ. ಇವರಿಗೆ ಮತ ಹಾಕಬೇಕು, ಓಟ್ ಹಾಕಿಸಬೇಕು ಎಂದು ತಮ್ಮದೇ ಆದ ಸಿನಿಮಾ‌ ಧಾಟಿಯಲ್ಲಿ  ಕರೆ ನೀಡಿದರು.


ಇದನ್ನೂ ಓದಿ- ಕರಾವಳಿ ಗೆದ್ದ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ! ದ. ಕನ್ನಡ ಜಿಲ್ಲೆಯ ಕ್ಷೇತ್ರಗಳಲ್ಲಿ ಹೇಗಿದೆ ಹವಾ


ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ, ನಾನು‌ ನಿಮ್ಮ ಸೇವಕ, ನಾನು‌ ಯಾವುದಕ್ಕೂ ಆಸೆಪಡುವವನಲ್ಲ. ಅಭಿವೃದ್ಧಿ ಮಾಡಿ‌ ಮತ ಕೇಳುತ್ತಿದ್ದೇನೆ ಎಂದರು.  ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಅದ್ಯಕ್ಷ ಬಸವರಾಜ ಕುಂದಗೋಳ ಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ