Karnataka Assembly Election: ಮಾರ್ನಿಂಗ್ ವಾಕ್ ನಿಂದಲೇ ಸಚಿವ ಸೋಮಣ್ಣ ಚಾಮರಾಜನಗರದಲ್ಲಿ ಮತಬೇಟೆ ಆರಂಭ ಮಾಡಿದ್ದು ವಾಯುವಿಹಾರಿಗಳು, ಟೀ ಅಂಗಡಿಗಳಿಗೆಲ್ಲಾ ತೆರಳಿ ಮತ ಶಿಕಾರಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದ ವೇಳೆ ಎದುರಾದ ಬಾಲಕನೋರ್ವ ಸಿಎಂ ಆಗೊಕೆ ಏನ್ ಮಾಡ್ಬೇಕು ಅಂತಾ ಸೋಮಣ್ಣರನ್ನು ಪ್ರಶ್ನಿಸಿದ್ದಾನೆ‌.


ಇದನ್ನೂ ಓದಿ- ʼಲಿಂಗಾಯತ ಸಿಎಂʼ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ : ಸಿಎಂ ಸ್ಪಷ್ಟನೆ


ನೀನು ಏನು ಮಾಡ್ಬೇಡ ಹೋಗಪ್ಪಾ ತಂದೆ, ಚೆನ್ನಾಗಿ ಓದು. ಸಿಎಂ, ಗಿಎಂ ಎಲ್ಲಾ ಲೆಕ್ಕ ಇಲ್ಲ ನೀನೆ ದೊಡ್ಡ ಸಿಎಂ,   ಚೆನ್ನಾಗಿ ಓದು, ಸ್ಪೋರ್ಟ್ಸ್ ಆಕ್ಟಿವಿಟಿಯಲ್ಲಿರು ಬಾಕಿದೆಲ್ಲಾ ಬಿಟ್ಬಿಡು, ನಿನ್ನ ಹಣೆಯಲ್ಲಿದ್ರೆ ಬರ್ತೀಯಾ ಹೋಗು ಎಂದು  ಸೋಮಣ್ಣ ಹೇಳಿದ್ದಾರೆ.


ಸ್ಟೇಡಿಯಂ ಅವ್ಯವಸ್ಥೆ ನೋಡಿ ಬಿಜೆಪಿ ಮುಖಂಡರಿಗೆ ಸೋಮಣ್ಣ  ಕ್ಲಾಸ್: 
ನಂಗೆ ಪಾರ್ಟಿ ತಾಯಿ, ಅಷ್ಟಕ್ಕೆ ಇಷ್ಟಕ್ಕೆ ಅಲ್ಲ. ನೀನೊಬ್ಬ ಬದಲಾವಣೆಯಾಗು. ಒಳ್ಳೆಯದಕ್ಕೆ ನಾನು ಪ್ರಾಣ ಕೊಡ್ತೀನಿ. ಕೆಟ್ಟವರಿಗೆ ಮಾತ್ರ ಬಿಡೋದಿಲ್ಲ. ದಯಮಾಡಿ ಕೆಲಸ ಮಾಡಿ. 10 ವರ್ಷದಿಂದ ಅವರೇನೂ ಮಾಡಿಲ್ಲ. ಸರಿ ಹಾಗಾದ್ರೆ ನಾವೇನೂ  ಕೆಲಸ ಮಾಡಿದ್ದೀವಿ. ನಮ್ಮ ಸರ್ಕಾರವಿದ್ದಾಗಲೂ ಏನು ಮಾಡಿಲ್ಲವೆಂದು ಸ್ಟೇಡಿಯಂ ಅವ್ಯವಸ್ಥೆ ನೋಡಿ ಬಿಜೆಪಿ ಮುಖಂಡರಿಗೆ ಸೋಮಣ್ಣ ಚಾಟಿ ಬೀಸಿದರು.


ಇದನ್ನೂ ಓದಿ- ಇಷ್ಟೆಲ್ಲಾ ಮಾತಾಡುವ ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಸೋಮಣ್ಣ ಸವಾಲ್


ಇನ್ನು, ಎರಡನೇ ದಿನದ ಮತಪ್ರಚಾರ ನಡೆಸುತ್ತಿರುವ ಸಚಿವ ಸೋಮಣ್ಣ ಇಂದು ಕೂಡ 18 ಕ್ಕೂ ಹೆಚ್ಚು ಊರುಗಳಿಗೆ ಭೇಟಿ ಕೊಡಲಿದ್ದಾರೆ. ಇದರ ಜೊತೆ, ಸಮುದಾಯದ ಮುಖಂಡರನ್ನು ಸಚಿವ ಸೋಮಣ್ಣ ಭೇಟಿ ಮಾಡುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.