ಬೆಂಗಳೂರು : ಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವರುಣಾದಲ್ಲಿ ಬಿಜೆಪಿ ಜೆಡಿಎಸ್ ಒಳಮೈತ್ರಿ ಎಂದು ಸಿದ್ದರಾಮಯ್ಯ ಅವರು ಮಾಡಿರುವ ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ಫಿಕ್ಸ್ ಆಗಿದಾರೆ ಎಂಬ ಭಯವಿದ್ದು, ಅವರಿಬ್ಬರೂ ಸೇರಿಕೊಂಡಿದಾರೆ ಎಂಬ ಭಯ ಬಂದಿದೆ ಎಂದ ಅವರು ಎಲ್ಲ ಅಭ್ಯರ್ಥಿಗಳೂ ತಾವೇ ಗೆಲ್ಲಬೇಕು ಎಂದು ಚುನಾವಣೆಯಲ್ಲಿ ನಿಲ್ಲುತ್ತಾರೆ.
ಇದನ್ನೂ ಓದಿ: ಬಿಜೆಪಿಯ ಜಾತಿವಾರು ಅಭ್ಯರ್ಥಿಗಳ ಪಟ್ಟಿ ರಿಲೀಸ್- ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂಬ ಸಂದೇಶ ರವಾನೆ
ಸ್ವಂತ ಬಲದಿಂದ ಗೆಲ್ಲುತ್ತೇನೆ. ಸಿದ್ದರಾಮಯ್ಯ ಅವರಿಗೆ ಸ್ವಂತ ಬಲ ಇದ್ದರೆ ಗೆಲ್ಲುತ್ತಾರೆ, ಇಲ್ಲದಿದ್ದರೆ, ಗೆಲ್ಲುವುದಿಲ್ಲ. ನನ್ನ ಕ್ಷೇತ್ರ ಶಿಗ್ಗಾಂವಿಯಲ್ಲೂ ಕಾಂಗ್ರೆಸ್- ಜೆಡಿಎಸ್ ಸೇರಿಕೊಂಡಿದ್ದಾರೆ. ಇದರಿಂದ ನನಗೇನೂ ಭಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿದ್ದು, ನನ್ನ ಮೇಲೆ ವ್ಯತ್ಯಾಸ ಆಗುವುದಿಲ್ಲ. ಎಲ್ಲರೂ ಕಾಂಗ್ರೆಸ್‌ಗೆ ಪ್ರಯತ್ನ ಮಾಡ್ತಿದ್ರು ಕಾಂಗ್ರೆಸ್‌ನ ಒಬ್ಬರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದೆ. ಇದನ್ನು ನಾನು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಎನ್ನಲಾ? ನಾನು ಈ ಥರ ಆರೋಪ ಎಲ್ಲ ಮಾಡುವುದಿಲ್ಲ. ಯಾರು ಯಾರ ಜತೆಗಾದರೂ ಸೇರಿಕೊಳ್ಳಲಿ. ನಾನು ನನ್ನ ಸ್ವಂತ ಬಲದಿಂದ ಗೆಲ್ಲುತ್ತೇನೆ ಎಂದರು.
ಕ್ಷೇತ್ರದೊಳಗೆ ಅನಿಶ್ಚಿತತೆ ಸಿದ್ದರಾಮಯ್ಯ ವರುಣಾದಿಂದ ಆರೇಳು ಸಲ ಗೆದ್ದು ಬಂದವರು.ಈ ಮೊದಲು ಅವರಿಗೆ ಕ್ಷೇತ್ರದ ಅನಿಶ್ಚಿತತೆ ಇತ್ತು. ಈಗ ಕ್ಷೇತ್ರದ ಒಳಗಡೆ ಅನಿಶ್ಚಿತತೆ ಇದೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.