ಹುಬ್ಬಳ್ಳಿ:  ರಾಜ್ಯದ ಜನ ಕೊಟ್ಟ ತೀರ್ಪನ್ನ ನಾವು ವಿನಮ್ರವಾಗಿ ಸ್ವೀಕರಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.ನಗರದ ಮಯೂರ ಎಸ್ಟೇಟ್ ನಲ್ಲಿನ ಅವರ ನಿವಾಸದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದುಕಾಂಗ್ರೆಸ್ ತನ್ನ ಭರವಸೆಗಳನ್ನ ಈಡೇರಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Mudigere Assembly Election Result 2023: ನಯನ ಮೋಟಮ್ಮ ʼಕೈʼ ಹಿಡಿದ ಮೂಡಿಗೆರೆ ಮತದಾರರು


ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಸಹಕಾರ ಇದ್ದೇ ಇರುತ್ತದೆ ಬಿಜೆಪಿಯ ಈ ಸೋಲಿನ ಪರಾಮರ್ಶೆ ಮಾಡುತ್ತೇವೆ ಎಲ್ಲಿ ನಮ್ಮ ತಂತ್ರಗಾರಿಕೆ ತಪ್ಪಿಗೆ ಎನ್ನುವುದನ್ನ ಗಂಭೀರವಾಗಿ ಅವಲೋಕನ ಮಾಡುತ್ತೇವೆ ಇದು ನಮ್ಮ ಕೆಲಸ,  ಇನ್ನು 2013 ರಲ್ಲಿಯೂ ನಾವು ಹೀನಾಯ ಸೋಲು ಅನುಭವಿಸುದ್ದೆವು 2013 ರ ನಂತರ ನಾವು ಚುನಾವಣೆಯಲ್ಲಿ ಉತ್ತಮ‌ ಸ್ಪರ್ಧೆ ಮಾಡಿದ್ದೆವು ಈ ಸೋಲನ್ನ ನಾವು ತುಂಬ ಸವಾಲಾಗಿ ಸ್ವೀಕರಿಸುತ್ತೇವೆ ಎಂದ ಅವರು ಸೋಲಿನ‌ಪರಾಮರ್ಶೆ ಮಾಡುವ ಮೂಲಕ ಕಾರಣವನ್ನ ಕಂಡುಕೊಳ್ಳಲಿದ್ದೇವೆ.ಪಕ್ಷವನ್ನ ಇನ್ನೂ ಹೆಚ್ಚು ಗಟ್ಟಿಗೊಳಿಸುವುದಕ್ಕೆ ನಾವು ಪ್ರಯತ್ನ‌ ಮಾಡುತ್ತೇವೆ. ಮೇಲ್ನೋಟಕ್ಕೆ ನಮ್ಮ ವಿರೋಧಿ ಅಲೆಯೇ ನಮಗೆ ಕಾರಣವಾಗಲಿದ್ದು ಸೋಲಿನ ಹೊಣೆಯನ್ನ ನಾವೆಲ್ಲರೂ ಹೊರಲು ಸಿದ್ಧರಿದ್ದೇವೆ ಎಂದರು.


ಇದನ್ನೂ ಓದಿ: Hubli-Dharwad Assembly Election Result 2023: ಹುಬ್ಬಳ್ಳಿ-ಧಾರವಾಡದ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಗೆಲುವು


ಗುಜರಾತ್ ಮಾದರಿಯಲ್ಲಿ ನಾವು ಚುನಾವಣೆ ನಡೆಸಲಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದ ಅವರು ಹಿರಿಯರನ್ನ ಕಡೆಗಣಿಸಿದ್ದೇವೆ ಎನ್ನುವ ಪ್ರಶ್ನೆಯೇ ಇಲ್ಲ ಈ ಚುನಾವಣೆ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ,2019 ರ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನದಲ್ಲಿ ನಾವು ಜಯಗಳಿಸಿದ್ದೇವೆ ಎಂದರು.


ಲಿಂಗಾಯತ ನಾಯಕರಿಗೆ ನಾವು ಟಿಕೆಟ್ ಕೊಟ್ಟಷ್ಟು ಯಾರೂ ಕೊಟ್ಟಿಲ್ಲ ಮಾಜಿ  ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪೂರ್ಣ ಜವಾಬ್ದಾರಿಯನ್ನ ಹೊತ್ತು ಚುನಾವಣೆ ಮಾಡಿದ್ದಾರೆ.ಲಿಂಗಾಯತರನ್ನ‌ ಕಡೆಗಣನೆ ಮಾಡಿರುವ ಪ್ರಶ್ನೆಯೇ ಇಲ್ಲ, ಶೆಟ್ಟರ್ ಸೋಲು ಅನ್ನೋದಕ್ಕಿಂತ ಬಿಜೆಪಿ ಗೆಲುವು ಸಾಧಿಸಿದೆ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಸಂತಸ ತಂದಿದೆ ಎಂದರು.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ