Mudigere Assembly Election Result 2023: ನಯನ ಮೋಟಮ್ಮ ʼಕೈʼ ಹಿಡಿದ ಮೂಡಿಗೆರೆ ಮತದಾರರು

Mudigere Assembly Election Result 2023: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಮಡಿಲು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕಾಂಗ್ರೇಸ್‌ ಅಭ್ಯರ್ಥಿಯಾಗಿರುವ ನಯನ ಮೋಟಮ್ಮ ಗೆಲುವು  ಪಡೆದುಕೊಂಡಿದ್ದಾರೆ 

Written by - Zee Kannada News Desk | Last Updated : May 13, 2023, 02:13 PM IST
  • ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್‌ ಅಭ್ಯರ್ಥಿ ಗೆಲುವು
  • ಕಾಂಗ್ರೇಸ್‌ ಅಭ್ಯರ್ಥಿಯಾಗಿರುವ ನಯನ ಮೋಟಮ್ಮನಿಗೆ ಜಯ
  • ಮೋಟಮ್ಮ ಪುತ್ರಿ ಕಾಂಗ್ರೇಸ್‌ ಅಭ್ಯರ್ಥಿ ನಯನ ಮೋಟಮ್ಮ
Mudigere Assembly Election Result 2023:  ನಯನ ಮೋಟಮ್ಮ ʼಕೈʼ ಹಿಡಿದ ಮೂಡಿಗೆರೆ ಮತದಾರರು title=

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡ ಮಡಿಲು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕಾಂಗ್ರೇಸ್‌ ಅಭ್ಯರ್ಥಿಯಾಗಿರುವ ನಯನ ಮೋಟಮ್ಮ ಗೆಲುವು  ಪಡೆದುಕೊಂಡಿದ್ದಾರೆ.  ಈ ಭಾಗವು ಮೀಸಲಾತಿ ಕ್ಷೇತ್ರವಾಗಿದೆ.  ದಲಿತವಾದಿಯಾಗಿರುವ ಮೊಟ್ಟಮ್ಮನ ಪುತ್ರಿ ಮೊದಲ ಬಾರಿಗೆ ಮೂಡಿಗೆರೆ ಕ್ಷೇತ್ರದಿಂದ  ಕಾಂಗ್ರೇಸ್‌ನಿಂದ ಸ್ಪರ್ದಿಸಿ  2783 ಓಟುಗಳಿಂದ ಗೆಲುವು ಸಾಧಿಸಿದ್ದಾರೆ. 

ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ 118 ಸೀಟ್ ಗೆಲ್ಲುತ್ತದೆ ಎಂದ ಮುರುಗೇಶ್ ನಿರಾಣಿ

ಮತ ಎಣಿಕೆಯಲ್ಲಿ ಒಂದೆರೆಡು ಬಾರಿ ಹಿನ್ನಡೆ ಕಂಡು ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿದೀಪಕ್ ದೊಡ್ಡಯ್ಯ ಹಾಗೂ ಜೆಡಿಎಸ್‌ ಅಭ್ಯರ್ಥಿ ಎಂ ಪಿ ಕುಮಾರ ಸ್ವಾಮಿ ವಿರುದ್ದ ಭರ್ಜರಿ ಗೆಲುವು ಸಾಧಿಸಿದ್ದಾರೆ.14 ನಾಲ್ಕನೇ ಸುತ್ತಿನಲ್ಲಿ 2783 ಅಂತರದಿಂದ ಜಯ ಸಾಧಿಸಿದ್ದಾರೆ. 

2018 ರ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ  ಮೂಡಿಗೆರೆ ಕ್ಷೇತ್ರದಿಂದ ಎಂಪಿ ಕುಮಾರ ಸ್ವಾಮಿ , ಬಿ.ಬಿ.ನಿಂಗಯ್ಯ ,ಮೋಟಮ್ಮ ಚುನಾವಣೆಗೆ ಸ್ವರ್ದಿಸಿದ್ದರು. ಆ ವೇಳೆ  ಬಿಜೆಪಿ -ಎಂ.ಪಿ.ಕುಮಾರಸ್ವಾಮಿ 58,783  ಮೊಟ್ಟಮ್ಮ ವಿರುದ್ದ 12,512 ಓಟುಗಳಿಂದ ಗೆಲುವು ಸಾದಿಸಿದ್ದರು.

ಇದನ್ನೂ ಓದಿ: ಸರ್ಕಾರ ರಚಿಸಲು ರಾಜ್ಯ ನಾಯಕರಿಗೆ ಬಿ.ಎಸ್.ಯಡಿಯೂರಪ್ಪ ಅಭಯ!

 ಆದರೆ ಈ ಬಾರಿ ಮೊಟಮ್ಮ ಮಗಳಾಗಿರುವ ನಯನ ಮೋಟಮ್ಮ  2783 ಓಟುಗಳಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರತಿ ಬಾರಿ ಈ ಭಾಗದಲ್ಲಿ ಜಾತಿ , ಧರ್ಮ ಆಧಾರಿತ ಮತ ಹಂಚಿಕೆ ಯಾಗುತ್ತಿತ್ತು. ಈ ಬಾರಿ ಮೂಡಿಗೆರೆ ಕ್ಷೇತ್ರದ ಮತದಾರರು ಕಾಂಗ್ರೆಸ್‌ ಅಭ್ಯರ್ಥಿ ಕೈ ಹಿಡಿದಿದ್ದಾರೆ. ಇದೀಗ ಈ ಭಾಗದ ಮತದಾರರ ಸಂಭ್ರಮ ಮಿಗಿಲು ಮುಟ್ಟಿದ್ದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News