ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ, ಚಿಕ್ಕಪೇಟೆ  ವಾರ್ಡಿನ ಮಹಿಳೆಯರ ಮತ್ತು ಅಭಿಮಾನಿಗಳ ಸಮಾವೇಶವನ್ನು ವಿಜಯವಿಹಾರ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.


COMMERCIAL BREAK
SCROLL TO CONTINUE READING

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನೇಶ್ ಗುಂಡೂರಾವ್ ರವರು, ಆರ್.ಗುಂಡೂರಾವ್ ಫೌಂಡೇಷನ್ ಅಧ್ಯಕ್ಷರಾದ ಶ್ರೀಮತಿ ತಬು ದಿನೇಶ್ ಗುಂಡೂರಾವ್,  ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜಿ.ರಾಮಚಂದ್ರರವರು, ಕಾಂಗ್ರೆಸ್ ಪಕ್ಷದ ಮುಖಂಡ ರಘುರವರು ಹಾಗೂ ಮಹಿಳಾ ಮುಖಂಡರು, ಮೇರುನಟ ಡಾ.ರಾಜ್ ಕುಮಾರ್ ಮತ್ತು ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ,  ದೀಪಾ ಬೆಳಗಿಸಿ ಮಹಿಳಾ ಸಮಾವೇಶ ಉದ್ಘಾಟನೆ ಮಾಡಿದರು.


ಇದನ್ನೂ ಓದಿ: ಮುಂದಿನ ಸಿಎಂ ಆಗ್ತಾರಾ ಮಲ್ಲಿಕಾರ್ಜುನ್ ಖರ್ಗೆ...? ಶಶಿತರೂರ್ ಹೇಳಿದ್ದೇನು ?


ದಿನೇಶ್ ಗುಂಡೂರಾವ್ ರವರು ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರವರು ದೇಶ ಕಂಡ ಅದ್ಬುತ ನಟ ಮತ್ತು ಮಾನವೀಯ ಗುಣವುಳ್ಳ ವ್ಯಕ್ತಿ.ಪುನೀತ್ ರಾಜ್ ಕುಮಾರ್ ರವರು ಎಲೆ ಮರೆ ಕಾಯಿಯಂತೆ ಸಮಾಜ ಸೇವೆ ಮಾಡಿದರು.ದೇಶದಲ್ಲಿ ಆಹಾರ ಮತ್ತು ತೈಲಬೆಲೆ ಏರಿಕೆಯಿಂದ ಹಾಗೂ ಅವೈಜ್ಞಾನಿಕ ಜಿ.ಎಸ್.ಟಿ.ಯಿಂದ ಬಡವರು, ಮಧ್ಯಮವರ್ಗದ ಕುಟುಂಬದವರು ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ.


ಇದನ್ನೂ ಓದಿ: ರಸ್ತೆ ಅಪಘಾತ: ರಂಭಾಪುರಿ ಶ್ರೀಗಳು ಅಪಾಯದಿಂದ ಪಾರು!


ನಾಡಿನ ಜನರ ಸಂಕಷ್ಟದಿಂದ ದೂರ ಮಾಡಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ನೇತೃತ್ವದಲ್ಲಿ ನಾಲ್ಕು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.200 ಯೂನಿಟ್ ವಿದ್ಯುತ್ ಉಚಿತ, ಮನೆಯ ಯಾಜಮಾನಿಗೆ 2000ಸಾವಿರ ಹಾಗೂ ಪ್ರತಿ ವ್ಯಕ್ತಿಗೆ 10ಕೆ.ಜಿ.ಅಕ್ಕಿ ಹಾಗೂ ನಿರುದ್ಯೋಗ ಭತ್ಯೆ ಗ್ಯಾರಂಟಿ ಕಾರ್ಡ್ ನೀಡಲಾಗುತ್ತಿದೆ.ಕಾಂಗ್ರೆಸ್ ಪಕ್ಷ ಬಡವರ ಪರ ಇರುವ ಪಕ್ಷ ಎಂದು ಹೇಳಿದರು.


ತಬು ದಿನೇಶ್ ಗುಂಡೂರಾವ್ ರವರು ಮಾತನಾಡಿ ಮಹಿಳೆಯರ ಸ್ವಾವಲಂಭಿ ಜೀವನ ಸಾಗಿಸಲು ಅನುಕೂಲವಾಗಲಿ ಎಂದು ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ಟೈರಲರಿಂಗ್, ನಿಟ್ಟಿಂಗ್ ತರಭೇತಿ ಮತ್ತು ಎಂಬ್ರಾಯಿಡರಿ ಮತ್ತು ಕಂಪ್ಯೂಟರ್ ತರಭೇತಿ ನೀಡಲಾಗುತ್ತಿದೆ.ಮಹಿಳೆ ಸಮಾಜದಲ್ಲಿ ತಾಯಿ, ತಂಗಿ ಮತ್ತು ಅಕ್ಕ ತಂಗಿಯಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸುವಳು ಎಂದು ಹೇಳಿದರು.


ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮತ್ತು ಬೆಂಗಾಲಿ ಆಸೋಸಿಯೇಷನ್ ಮತ್ತು ಮಾರ್ವಾಡಿ ಸಂಘ  ಭಾಗವಹಿಸಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.