ರಸ್ತೆ ಅಪಘಾತ: ರಂಭಾಪುರಿ ಶ್ರೀಗಳು ಅಪಾಯದಿಂದ ಪಾರು!

Rambhapuri shree Car Accident: ರಂಭಾಪುರಿ ಪೀಠದಿಂದ ಆಲಮಟ್ಟಿ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ತೆರಳುತ್ತಿದ್ದರು. ಘಟನೆಯಲ್ಲಿ ಬೈಕ್ ಸಾವರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Written by - Zee Kannada News Desk | Last Updated : Apr 9, 2023, 11:12 AM IST
  • ಕಾರು ಅಪಘಾತದಲ್ಲಿ ರಂಭಾಪುರಿ ಶ್ರೀಗಳು ಅಪಾಯದಿಂದ ಪಾರು
  • ಹರಪನಹಳ್ಳಿ ತಾಲೂಕಿನ ಚಿರಸ್ತಹಳ್ಳಿಯ ತಿರುವಿನಲ್ಲಿ ಈ ಘಟನೆ ನಡೆದಿದೆ
  • ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ
ರಸ್ತೆ ಅಪಘಾತ: ರಂಭಾಪುರಿ ಶ್ರೀಗಳು ಅಪಾಯದಿಂದ ಪಾರು! title=
ರಂಭಾಪುರಿ ಶ್ರೀಗಳು ಅಪಾಯದಿಂದ ಪಾರು!

ವಿಜಯನಗರ: ಕಾರು ಅಪಘಾತದಲ್ಲಿ ರಂಭಾಪುರಿ ಶ್ರೀಗಳು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.

ಹರಪನಹಳ್ಳಿ ತಾಲೂಕಿನ  ಚಿರಸ್ತಹಳ್ಳಿಯ ತಿರುವಿನಲ್ಲಿ ಈ ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ರಂಭಾಪುರಿ ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ - ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿ ಹರಿಹರದಿಂದ ಹರಪನಹಳ್ಳಿ ಮಾರ್ಗವಾಗಿ ಶ್ರಿಗಳ ಕಾರು ಚಲಿಸುತ್ತಿತ್ತು.

ಇದನ್ನೂ ಓದಿ: "ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದಕ್ಕೆ ಅವರ ಕೇಂದ್ರ ನಾಯಕರ ರಾಜ್ಯ ಪ್ರವಾಸವೇ ಸಾಕ್ಷಿ" 

ಚಿರಸ್ತಳ್ಳಿ ತಿರುವಿನಲ್ಲಿ ಎದುರಿಗೆ ಬಂದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಬೈಕ್ ಗುದ್ದಿದ ರಭಸಕ್ಕೆ ಶ್ರೀಗಳ ಕಾರಿನ ಮುಂಭಾಗ ಹಾಗೂ ಬೈಕಿಗೆ ಹಾನಿಯುಂಟಾಗಿದೆ. ಶ್ರೀಗಳ ಕಾರಿಗೆ ಗುದ್ದಿದ ರಭಸಕ್ಕೆ ಬೈಕ್ ಸವಾರ ಎಂಜಿನ್ ಮೇಲೆ ಹಾರಿ ಬಿದ್ದಿದ್ದಾನೆ.

ಘಟನಾ ಸ್ಥಳಕ್ಕೆ ಹರಪನಹಳ್ಳಿ ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಜಿಗಳು ಭೇಟಿ ನೀಡಿದ್ದಾರೆ. ರಂಭಾಪುರಿ ಶ್ರೀಗಳನ್ನು ಹರಪನಹಳ್ಳಿಯ ತೆಗ್ಗಿನ ಮಠಕ್ಕೆ ಕರೆದುಕೊಂಡು ಹೋಗಿ ಉಪಚರಿಸಿ ಬಳಿಕ ಕಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ರಂಭಾಪುರಿ ಪೀಠದಿಂದ ಆಲಮಟ್ಟಿ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ತೆರಳುತ್ತಿದ್ದರು. ಘಟನೆಯಲ್ಲಿ ಬೈಕ್ ಸಾವರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News