World Liver Day 2023: ನಮ್ಮ ದೇಹದ ಎರಡನೇ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣವಾದ ಅಂಗವೆಂದರೆ ಲಿವರ್. ಇದನ್ನು ಯಕೃತ್, ಪಿತ್ತಜನಕಾಂಗ ಎಂತಲೂ ಕರೆಯಲಾಗುತ್ತದೆ. ಲಿವರ್ ಮಾನವನ ದೇಹದಲ್ಲಿ ಜೀವಾಣುಗಳನ್ನು ಒಡೆಯುವ, ಪಿತ್ತರಸ ಉತ್ಪಾದನೆ, ಚಯಾಪಚಯ ನಿಯಂತ್ರಣ, ಜೀವಸತ್ವಗಳು, ಖನಿಜಗಳನ್ನು ಸಂಗ್ರಹಿಸುವಂತಹ ಹಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸುವ ಪ್ರಮುಖ ಅಂಗವಾಗಿದೆ. ಹಾಗಾಗಿಯೇ, ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ಕುರಿತಂತೆ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್ 19ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ವಿಶ್ವದಾದ್ಯಂತ ಹಲವು ಮಂದಿ ಫ್ಯಾಟಿ ಲಿವರ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಫ್ಯಾಟಿ ಲಿವರ್ ಎಂದರೇನು? ಇದರ ಲಕ್ಷಣಗಳೇನು. ಮತ್ತದರ ಪರಿಣಾಮಗಳೇನು ಎಂಬ ಬಗ್ಗೆಯೂ ತಿಳಿದಿರುವುದು ಬಹಳ ಮುಖ್ಯ. 


ಏನಿದು ಫ್ಯಾಟಿ ಲಿವರ್? 
ಯಕೃತ್ ಪಿತ್ತರಸವನ್ನು ಉತ್ಪಾದಿಸುತ್ತದೆ. ಇದು ಕೊಲೆಸ್ಟ್ರಾಲ್ ಮತ್ತು ಪಿತ್ತರಸ ಆಮ್ಲಗಳನ್ನು ಹೊಂದಿರುವ ಕ್ಷಾರೀಯ ದ್ರವವಾಗಿದ್ದು ಅದು ಕೊಬ್ಬನ್ನು ಒಡೆಯಲು ಸಹಾಯ ಮಾಡುತ್ತದೆ. ಫ್ಯಾಟಿ ಲಿವರ್ ಎಂದರೆ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗುವುದು. ಇದನ್ನು ಯಕೃತ್ತಿನಲ್ಲಿ ಅತಿಯಾದ ಕೊಬ್ಬಿನ ಶೇಖರಣೆಯಿಂದ ಉಂಟಾಗುವ ಪ್ರಚಲಿತ ಆರೋಗ್ಯ ಸ್ಥಿತಿ ಎಂತಲೂ ಹೇಳಲಾಗುತ್ತದೆ. 


ಇದನ್ನೂ ಓದಿ- Diabetes: ಬೇಸಿಗೆಯಲ್ಲಿ ಮಧುಮೇಹವನ್ನು ನಿಯಂತ್ರಿಸುವ 5 ಸುಲಭ ವಿಧಾನಗಳು


ದೇಹದಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಉಂಟಾದಾಗ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಲೇಬಾರದು... 
* ಕುತ್ತಿಗೆ ಸುತ್ತ ಕಪ್ಪಾಗುವುದು: 

ಸಾಮಾನ್ಯವಾಗಿ ಫ್ಯಾಟಿ ಲಿವರ್ ಸಮಸ್ಯೆ ಇರುವವರಲ್ಲಿ ಕುತ್ತಿಗೆ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ವಾಸ್ತವವಾಗಿ, ಫ್ಯಾಟಿ ಲಿವರ್ ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸಲು ಕಾರಣವಾಗಬಹುದು. ಇದು ಹೆಚ್ಚುವರಿ ಇನ್ಸುಲಿನ್ ಸಂಗ್ರಹವನ್ನು ಉಂಟುಮಾಡುತ್ತದೆ ಮತ್ತು ಅಕಾಂಥೋಸಿಸ್ ನಿಗ್ರಿಕಾನ್ಸ್ ಎಂಬ ಸ್ಥಿತಿಗೆ ಕಾರಣವಾಗುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 


* ಬಾಯಿಯ ಸುತ್ತ ದದ್ದು: 
ಫ್ಯಾಟಿ ಲಿವರ್ ಸಮಸ್ಯೆ ಇರುವವರಲ್ಲಿ ಸತುವಿನ ಕೊರತೆ ಉಂಟಾಗಬಹುದು. ಇದು ಬಾಯಿಯ ಸುತ್ತ ದದ್ದು ಸೇರಿದಂತೆ ಕೆಲವು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. 


* ಆಯಾಸ:
ಫ್ಯಾಟಿ ಲಿವರ್ ಸಮಸ್ಯೆ ಇರುವವರಲ್ಲಿ ಸುಸ್ತು, ಆಯಾಸದಂತಹ ಲಕ್ಷಣಗಳು ಕೂಡ ಕಂಡು ಬರಬಹುದು. ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ದೇಹವು ಸರಿಯಾಗಿ ಶಕ್ತಿಯನ್ನು ಪಡೆಯಲು ಸಹ ಸಾಧ್ಯವಾಗುವುದಿಲ್ಲ. 


* ಹೊಟ್ಟೆ ನೋವು: 
ಕೆಲವರಲ್ಲಿ ಆಹಾರ ಸೇವನೆ ಬಳಿಕ ಹೊಟ್ಟೆ ಉಬ್ಬರ, ಮೇಲೊಟ್ಟೆಯ ನೋವು ಕಾಣಿಸಿಕೊಳ್ಳುತ್ತದೆ. ಇದೂ ಸಹ ಫ್ಯಾಟಿ ಲಿವರ್ ಲಕ್ಷಣವಾಗಿರಬಹುದು. 


ಇದನ್ನೂ ಓದಿ- Sugarcane Juice: ಈ ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಕುಡಿಯಬೇಡಿ ಕಬ್ಬಿನ ಜ್ಯೂಸ್!


* ಕಾಮಾಲೆ:
ಕಣ್ಣುಗಳ ಚರ್ಮ ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವ ಸ್ಥಿತಿಯನ್ನು ಕಾಮಾಲೆ ಎಂದು ಕರೆಯಲಾಗುತ್ತದೆ. ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ತೀವ್ರತರವಾದ ಸ್ಥಿತಿಯಲ್ಲಿಯೂ ಇದು ಕಾಣಿಸಿಕೊಳ್ಳಬಹುದು.


* ತುರಿಕೆ: 
ಫ್ಯಾಟಿ ಲಿವರ್ ಕಾಯಿಲೆಯು ದೇಹದಲ್ಲಿ ಪಿತ್ತರಸದ ಲವಣಗಳ ಅಧಿಕದಿಂದ ಮುಖದ ಮೇಲೆ ಸೇರಿದಂತೆ ಚರ್ಮದ ತುರಿಕೆಗೆ ಕಾರಣವಾಗಬಹುದು. ನಿಮ್ಮಲ್ಲೂ ಇಂತಹ ಲಕ್ಷಣಗಳು ಕಂಡು ಬಂದರೆ ಅದನ್ನು ನಿರ್ಲಕ್ಷಿಸಬೇಡಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.