ಬೆಂಗಳೂರು: ಇಂದು ಬಹುನಿರೀಕ್ಷಿತ ರಾಜ್ಯ ಬಜೆಟ್‌ ಮಂಡನೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಇಂದು ಮಂಡಿಸಲಿದ್ದಾರೆ. ಕೇಂದ್ರ ಬಜೆಟ್‌ಗೆ ಹೋಲಿಸಿದರೆ ರಾಜ್ಯ ಬಜೆಟ್‌ ಭಿನ್ನವಾಗಿರುತ್ತದೆ. ಇಂದು ಬೊಮ್ಮಾಯಿ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕೊನೆಯ ಬಜೆಟ್‌ ಆಗಿರಲಿದೆ. ರಾಜ್ಯದ ಬಜೆಟ್‌ನ ಮಂಡನೆ, ಸಿದ್ಧತೆ, ಮುದ್ರಣ ಈ ಬಗ್ಗೆ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳು ಇಲ್ಲಿವೆ. 


COMMERCIAL BREAK
SCROLL TO CONTINUE READING

1) ರಾಜ್ಯ ಬಜೆಟ್‌ ಮಂಡನೆಯ ಸಿದ್ಧತೆ 2 ತಿಂಗಳಿನಿಂದ ಆರಂಭವಾಗುತ್ತವೆ. ಮುಂಬರುವ ಹಣಕಾಸು ವರ್ಷದಲ್ಲಿ ಸರ್ಕಾರ ಮಾಡಲಿರುವ ವೆಚ್ಚಗಳ ವಿಸ್ತೃತ ಅಂದಾಜು ಪಟ್ಟಿಯನ್ನು ತಯಾರಿಸಿ, ಮಂಡಿಸಲಾಗುತ್ತದೆ. 


2) ಪ್ರತಿವರ್ಷ ಡಿಸೆಂಬರ್‌ ಮುಕ್ತಾಯ ಅಥವಾ ಜನವರಿ ಆರಂಭದಿಂದ ಆಯವ್ಯಯ ಮಂಡನೆಯ ಸಿದ್ಧತೆಗಳು ಶುರುವಾಗುತ್ತವೆ. ರಾಜ್ಯ ಆರ್ಥಿಕ ಇಲಾಖೆ ಎಲ್ಲ ಇಲಾಖೆಗಳ ಜೊತೆ ಚರ್ಚಿಸಿ ಬಜೆಟ್‌ ತಯಾರಿಸುತ್ತದೆ. ಇಲಾಖೆವಾರು ಬೇಡಿಕೆ ಪಟ್ಟಿಯನ್ನು ಗಮನದಲ್ಲಿರಿಸಿಕೊಂಡು ಆಯಾ ಇಲಾಖೆಗೆ ಎಷ್ಟು ಅನುದಾನ ನೀಡಬೇಕೆಂಬ ನಿರ್ಧಾರ ಮಾಡುತ್ತಾರೆ. ರಾಜ್ಯದ ಖರ್ಚುವೆಚ್ಚಗಳನ್ನು ನೋಡಿಕೊಂಡು ಬಜೆಟ್‌ ರೆಡಿಯಾಗುತ್ತದೆ. 


3) ಬಜೆಟ್‌ ಉಪಕಾರ್ಯದರ್ಶಿಯವರ ಸುಪರ್ದಿಯಲ್ಲಿ ಈ ಆಯವ್ಯಯದ ಸಿದ್ಧತೆ ನಡೆಯುತ್ತದೆ. ಇಡೀ ಬಜೆಟ್‌ ಭಾಷಣ ತಯಾರಿಸುವಲ್ಲಿ ಬಜೆಟ್‌ ಉಪಕಾರ್ಯದರ್ಶಿ ಮಹತ್ವದ ಪಾತ್ರವಹಿಸುತ್ತಾರೆ. ಕೊನೆಯಲ್ಲಿ ಆರ್ಥಿಕ ಇಲಾಖೆ ಮುಖ್ಯ ಕಾರ್ಯದರ್ಶಿ ಬಜೆಟ್‌ ಪ್ರತಿಯ ಪರಾಮರ್ಶೆ ಮಾಡಿ, ಅಂತಿಮಗೊಳಿಸುತ್ತಾರೆ. 


ಇದನ್ನೂ ಓದಿ : Karnataka Budget 2023: ಈ ಬಾರಿಯ ಬಜೆಟ್ ಜನಪರ ಆಗಿರಲಿದೆಯಾ? ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು?


4) ಪ್ರಸ್ತುತ ಕರ್ನಾಟಕದಲ್ಲಿ ಇಂಗ್ಲಿಷ್‌-ಕನ್ನಡ ಎರಡೂ ಭಾಷೆಯಲ್ಲಿ ಬಜೆಟ್‌ ಪ್ರತಿ ಮುದ್ರಣವಾಗುತ್ತವೆ. ಆದರೆ 1956ರಿಂದ 1970ರವರೆಗೆ ಬಜೆಟ್‌ ಕೇವಲ ಆಂಗ್ಲ ಭಾಷೆಯಲ್ಲಿ ಮುದ್ರಣವಾಗುತ್ತಿತ್ತು. ಆರ್ಥಿಕ ಸಚಿವರು ಇಂಗ್ಲಿಷ್‌ನಲ್ಲೇ ಬಜೆಟ್‌ ಮಂಡಿಸುತ್ತಿದ್ದರು. 1970ರ ಬಳಿಕ ರಾಜ್ಯ ಬಜೆಟ್‌ನ್ನು ಕನ್ನಡದಲ್ಲಿ ಮಂಡಿಸಲು ಆರಂಭಿಸಿದರು.


5) ದೇವರಾಜ ಅರಸು ಅವರು ಸಿಎಂ ಆಗಿದ್ದ ಸಮಯದಿಂದ ರಾಜ್ಯ ಬಜೆಟ್‌ನ್ನು ಕನ್ನಡದಲ್ಲಿ ಮಂಡಿಸುವ ಸಂಪ್ರದಾಯ ಶುರುವಾಯಿತು. ಅಂದಿನ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಎಂ.ವೈ. ಘೋರ್ಪಡೆ ಅವರು ಕನ್ನಡದಲ್ಲಿ ಬಜೆಟ್‌ ಮಂಡಿಸಿದರು.


6) ಹಣಕಾಸು ಇಲಾಖೆಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಂ.ಆರ್‌. ಶ್ರೀನಿವಾಸ್‌ ಮೂರ್ತಿ ಸಂಪೂರ್ಣ ಕನ್ನಡದಲ್ಲೇ ಬಜೆಟ್‌ ಅನ್ನು ಬರೆಯಲು ಕಾರಣರಾದವರು. 


7) ಬಜೆಟ್‌ ಭಾಷಣದ ಪುಸ್ತಕಗಳನ್ನು ಪ್ರಿಂಟ್‌ ಮಾಡುವ ಸ್ಥಳ ಯಾರಿಗೂ ತಿಳಿದಿರುವುದಿಲ್ಲ. ಇದನ್ನು ಅತ್ಯಂತ ರಹಸ್ಯವಾಗಿಡಲಾಗುತ್ತದೆ. ಬಜೆಟ್‌ ಭಾಷಣ ಪ್ರತಿ ಅಂತಿಮಗೊಂಡ ಬಳಿಕ ಆಯವ್ಯ ಮಂಡನೆಯ ಮುನ್ನಾದಿನ ತಡರಾತ್ರಿ ಸರಕಾರಿ ಮುದ್ರಣಾಲಯಗಳಲ್ಲಿ ಪ್ರಿಂಟಿಂಗ್‌ ಕೆಲಸ ಆರಂಭವಾಗುತ್ತದೆ. ಈ ಪ್ರತಿಗಳನ್ನು ಗುಪ್ತವಾಗಿ ವಿಧಾನಸೌಧಕ್ಕೆ ತರಲಾಗುತ್ತದೆ. ಬಜೆಟ್‌ ಭಾಷಣಕ್ಕೆ ಕೆಲವೇ ಕೆಲವು ನಿಮಿಷಗಳ ಮೊದಲು ಅದನ್ನು ಸದಸ್ಯರಿಗೆ ಹಂಚಲಾಗುತ್ತದೆ. 


ಇದನ್ನೂ ಓದಿ : Karnataka Budget 2023 : ಫೆ.17 ರಂದು ಬಿಜೆಪಿ ಸರ್ಕಾರದ ಕೊನೆಯ ಬಜೆಟ್ : ಈ ಭಾರಿಯ ನಿರೀಕ್ಷೆಗಳೇನು?


8) ಬಜೆಟ್‌ ಮುದ್ರಣ ಮತ್ತು ತಯಾರಿಯಲ್ಲಿ ಅಧಿಕಾರಿ ವರ್ಗದ ಪಾತ್ರ ಮಹತ್ವದ್ದಾಗಿದೆ. ಇದಕ್ಕಾಗಿ ಆರ್ಥಿಕ ಇಲಾಖೆ ಬಜೆಟ್‌ ತಯಾರಿಯಲ್ಲಿ ತೊಡಗುವ ಅಧಿಕಾರಿ ವರ್ಗ, ನೌಕರರಿಗೆ ವಿಶೇಷ ಭತ್ಯೆ ಸಹ ನೀಡಲಾಗುತ್ತದೆ. 


9) ರಾಜ್ಯದ ಆರ್ಥಿಕ ದಿಕ್ಸೂಚಿಯಾಗಿರುವ ಆಯವ್ಯಯ ಸೋರಿಕೆಯಾಗದಂತೆ ಮುತುವರ್ಜಿ ವಹಿಸಲಾಗುತ್ತದೆ. ಬಜೆಟ್‌ ವಿಚಾರಗಳೇನಾದರೂ ಸೋರಿಕೆಯಾಗಿವೆಯೇ ಎಂದು ಪರಿಶೀಲಿಸಿ, ಖಚಿತವಾದ ಬಳಿಕವೇ ಮುದ್ರಣಕ್ಕೆ ಹೋಗುತ್ತದೆ. ಒಂದು ವೇಳೆ ಸೋರಿಕೆಯಾಗಿದ್ದಲ್ಲಿ ಅವುಗಳಲ್ಲಿನ ಅಂಶಗಳನ್ನು ತಕ್ಷಣವೇ ಬದಲಿಸುತ್ತಾರೆ.


10) ತೆರಿಗೆ ಪಾವತಿ, ತೆರಿಗೆ ಕಡಿತ, ವಿಶೇಷ ಅನುದಾನ.. ಇಂತಹ ಮುಖ್ಯ ವಿಚಾರಗಳನ್ನು ಬಜೆಟ್‌ ಪ್ರತಿ ಅಂತಿಮಗೊಳಿಸಿದ ಬಳಿಕ ಕೊನೆಯಲ್ಲಿ ಸೇರಿಸಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.