Karnataka Assembly Elections: ಚುನಾವಣಾ ಎಫೆಕ್ಟ್ ಬ್ಲೆಡ್ ಬ್ಯಾಂಕ್ ಗಳ ಮೇಲೂ ತಟ್ಟಿದೆ. ರಕ್ತದಾನಿಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದು, ರಕ್ತಕ್ಕೆ ಬೇಡಿಕೆ ಹೆಚ್ಚಾಗಿದೆ. ಬ್ಲೆಡ್ ಬ್ಯಾಂಕ್ ನಲ್ಲಿಯೂ  ಸಮಯಕ್ಕೆ ಸರಿಯಾಗಿ ಬ್ಲೆಡ್ ಸಿಗದೆ ರೋಗಿಗಳು ಪರದಾಡುವಂತಾಗಿದೆ. ರೋಗಿಗಳ ಸಂಬಂಧಿಕರು ರಕ್ತಕ್ಕಾಗಿ ಬ್ಲೆಡ್ ಬ್ಯಾಂಕ್ ಗಳಿಗೆ ಅಲೆಯುವಂತಾಗಿದೆ. 


COMMERCIAL BREAK
SCROLL TO CONTINUE READING

ಹೌದು, ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ  ಹೆಚ್ಚಿನ ರಕ್ತದಾನ ಶಿಬಿರಗಳೇ ನಡೆದಿಲ್ಲ. ಮೊದಲು ಕೆಲ ಕಾರ್ಯಕ್ರಮದ ಹೆಸರಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುತ್ತಿದ್ದ ರಾಜಕೀಯ ನಾಯಕರು, ಗಣ್ಯರು ಪ್ರಚಾರದಲ್ಲಿ ತೊಡಗಿದ್ದಾರೆ. ಈಗ ಈ ನೀತಿ ಸಂಹಿತೆಯಿಂದಾಗಿ ಗಣ್ಯರ ಕಾರ್ಯಕ್ರಮಕ್ಕೆ ತಡೆಬಿದ್ದಿದ್ದು, ರಕ್ತದಾನ ಶಿಬಿರ ಆಯೋಜನೆಗೆ ನೀತಿ ಸಂಹಿತೆ ಅಡ್ಡಿಪಡಿಸಿದೆ. ಇದರಿಂದ ರೋಗಿಗಳು ರಕ್ತ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಇದನ್ನೂ ಓದಿ- ಹಾವೇರಿ: ಸ್ಮಶಾನದಲ್ಲಿ ಮೂರು ಹುಡುಗಿಯರ ಪೊಟೊ ಇಟ್ಟು ವಾಮಾಚಾರ


ಇನ್ನು ಕೆಲವು ಸಿನಿಮಾ ನಟ-ನಟಿಯರು ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೆ, ಸಂಘ-ಸಂಸ್ಥೆಗಳು ಹಾಗೂ ಕಾರ್ಯಕರ್ತರು ಕೂಡ ಚುನಾವಣ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ದರಿ೦ದ ರಕ್ತದಾನ ಶಿಬಿರ ಆಯೋಜನೆಯಾಗುತ್ತಿಲ್ಲ. ಬೆಂಗಳೂರಿನ ರಾಷ್ಟೋತ್ಥನ ಸಂಸ್ಥೆಯ ರಕ್ತ ನಿಧಿಯಲ್ಲಿ ತಿಂಗಳಿಗೆ ಸರಾಸರಿ 2 ಸಾವಿರಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹವಾಗುತ್ತಿತ್ತು, ಕಳೆದ ಒಂದು ತಿಂಗಳಿನಲ್ಲಿ ಈ ಸಂಖ್ಯೆ ಅರ್ಧಕ್ಕೆ ಅರ್ಧ ಕುಸಿದಿದೆ. ಕೇವಲ 900 ಯೂನಿಟ್ ರಕ್ತ ಸಂಗ್ರಹವಾಗಿದೆಯಂತೆ. ಅಲ್ಲದೆ ತಿಂಗಳಿಗೆ 30 ರಿಂದ 40 ಶಿಬಿರ ಮಾಡ್ತಿದ್ದ ಸಂಸ್ಥೆ ಈ ತಿಂಗಳು 15ನ್ನೂ ಶಿಬಿರಗಳನ್ನು ಸಹ ನಡೆಸಿಲ್ಲವಂತೆ. ಇದರಿಂದಾಗಿ ಆಸ್ಪತ್ರೆಗಳಿಂದ ಬರುತ್ತಿರುವ ಬೇಡಿಕೆಯನ್ನ ಪೂರೈಸಲು ಕಷ್ಟವಾಗುತ್ತಿದೆ ಎಂದು ರಾಷ್ಟೋತ್ಥನ ಸಂಸ್ಥೆಯವರು ಬೇಸರ ವ್ಯಕ್ತಪಡಿಸಿದ್ದಾರೆ.  


ಇದನ್ನೂ ಓದಿ- ಮಹಿಳೆಯರ ಜೊತೆ ಪ್ರಿಯಾಂಕ ಗಾಂಧಿ ಸಂವಾದ- ಇಂದಿರಾ ಹೊಗಳಿದಾಕೆಗೆ ಪ್ರೀತಿಯ ಅಪ್ಪುಗೆ


ಬೆಂಗಳೂರು ನಗರದಲ್ಲಿ ನಿತ್ಯ 2,500 ಯುನಿಟ್‌ಗಳಷ್ಟು ರಕ್ತಕ್ಕೆ ಬೇಡಿಕೆ ಇದೆ. ಸದ್ಯಕ್ಕೆ ಬೆಂಗಳೂರಿನಲ್ಲಿ 300 ರಿಂದ 400 ಯುನಿಟ್ ಮಾತ್ರ ರಕ್ತ ಸಂಗ್ರಹವಿದೆ. ಇದಲ್ಲದೆ, ಕೆಂಪು ರಕ್ತಕಣಕ್ಕೆ ಬೇಡಿಕೆ ಇದೆ. ಅಲ್ಲದೆ, ನೆಗಟಿವ್ ಗ್ರೂಪ್ ರಕ್ತವೇ ಇಲ್ಲದಂತಾಗಿದೆಯಂತೆ. ಹೀಗಾಗಿ ರೋಗಿಗಳು ರಕ್ತಕ್ಕಾಗಿ ಅಲೆಯುವಂತೆ ಆಗಿದೆ ಎನ್ನಲಾಗುತ್ತಿದೆ. 


ಬಹುತೇಕ ಆಸ್ಪತ್ರೆಗಳು ಬ್ಲೆಡ್ ಬ್ಯಾಂಕ್ ಗಳನ್ನೇ ನೆಚ್ಚಿಕೊಂಡಿವೆ. ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವ ಕಾರಣ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ರಕ್ತದ ಅಗತ್ಯತೆ ಹೆಚ್ಚಿದೆ. ಹೀಗಾಗಿ ಜನ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಅಮಾಯಕರ ಪ್ರಾಣ ಉಳಿಸಬೇಕಿದೆ. ಮರೆಯಬೇಡಿ...ರಕ್ತದಾನಕ್ಕಿಂದ ಶ್ರೇಷ್ಠದಾನ ಯಾವುದು ಇಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.