ಮಹಿಳೆಯರ ಜೊತೆ ಪ್ರಿಯಾಂಕ ಗಾಂಧಿ ಸಂವಾದ- ಇಂದಿರಾ ಹೊಗಳಿದಾಕೆಗೆ ಪ್ರೀತಿಯ ಅಪ್ಪುಗೆ

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಹಿಳೆಯರ ಮತಬೇಟೆ ನಡೆಸಿದರು.

Written by - Zee Kannada News Desk | Last Updated : Apr 25, 2023, 06:57 PM IST
  • ಇಂದಿರಾ ಗಾಂಧಿ ಅವರ ಕಾಲದಲ್ಲಿ ನಮಗೆ ಸೌಲಭ್ಯಗಳು ಸಿಕ್ಕಿದವು,
  • ನೀವು ಇಂದಿರಾ ಪ್ರತಿರೂಪದಂತೆ ಇದ್ದೀರಿ,
  • ನಮ್ಕ ಸಮಸ್ಯೆಗಳನ್ನು ಪರಿಹರಿಸಿ ಎಂದು ಹೇಳಿದ್ದಕ್ಕೆ ವೇದಿಕೆಯಿಂದ ಕೆಳಗಿಳಿದು ಬಂದು ತಿರುಮಮ್ಮನು ಅಪ್ಪಿಕೊಂಡರು.
 ಮಹಿಳೆಯರ ಜೊತೆ ಪ್ರಿಯಾಂಕ ಗಾಂಧಿ ಸಂವಾದ- ಇಂದಿರಾ ಹೊಗಳಿದಾಕೆಗೆ ಪ್ರೀತಿಯ ಅಪ್ಪುಗೆ title=
screengrab

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಹಿಳೆಯರ ಮತಬೇಟೆ ನಡೆಸಿದರು.

ಸಂವಾದದಲ್ಲಿ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕೊಕ್ಕಬೊರೆ ಗ್ರಾಮದ ಬೊಮ್ಮಮ್ಮ ಮಾತನಾಡಿ, ನಮಗೇ ಇಷ್ಟು ವರ್ಷಗಳಾದರೂ ವಿದ್ಯುತ್ ಇಲ್ಲಾ, ರಸ್ತೆಯೂ ಇಲ್ಲಾ, ಮನೆಗಳು ಇಲ್ಲಾ, ಸೂಕ್ತ  ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ, ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಬರಲಿದೆ, ಎಲ್ಲ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.

ಇದನ್ನೂ ಓದಿ: Pregnancy Test: ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೇಗ್ನೆನ್ಸಿ ಟೆಸ್ಟ್, ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ!

ಹನೂರು ತಾಲೂಕಿನ ಹೊಸಪೋಡು ಗ್ರಾಮದ ತಿರುಮಮ್ಮ ಮಾತನಾಡಿ, ಇಂದಿರಾ ಗಾಂಧಿ ಅವರ ಕಾಲದಲ್ಲಿ ನಮಗೆ ಸೌಲಭ್ಯಗಳು ಸಿಕ್ಕಿದವು, ನೀವು ಇಂದಿರಾ ಪ್ರತಿರೂಪದಂತೆ ಇದ್ದೀರಿ, ನಮ್ಕ ಸಮಸ್ಯೆಗಳನ್ನು ಪರಿಹರಿಸಿ ಎಂದು ಹೇಳಿದ್ದಕ್ಕೆ ವೇದಿಕೆಯಿಂದ ಕೆಳಗಿಳಿದು ಬಂದು ತಿರುಮಮ್ಮನು ಅಪ್ಪಿಕೊಂಡರು.

ಇನ್ನು, ಪ್ರಿಯಾಂಕಾ ಅಪ್ಪುಗೆ ಬಗ್ಗೆ ತಿರುಮಮ್ಮ ಮಾತನಾಡಿ, ನಮ್ಮ ಸಮಸ್ಯೆಗಳನ್ನು ಈಡೇರಿಸುವ ಭರವಸೆ ಕೊಟ್ಟಿದ್ದಾರೆ, ಕಾಂಗ್ರೆಸ್ ಇದ್ದಾಗಲೇ ನಾನು ಗ್ರಾಪಂ ಸದಸ್ಯಳಾಗಿದ್ದೆ, ನಮ್ಕ ಮತ ಯಾವಾಗಲೂ ಕಾಂಗ್ರೆಸ್ ಗೆ ಎಂದರು.

ಇದನ್ನೂ ಓದಿ: ಭೂಮಿಗೆ ಮೊದಲು ಬಂದಿದ್ದು ಕೋಳಿನಾ? ಮೊಟ್ಟೆನಾ? Chat GPT ಕೊಟ್ಟೇ ಬಿಡ್ತು ಉತ್ತರ!

ಭದ್ರತೆ ಬಿಟ್ಟು ಜನರ ಬಳಿ ಪ್ರಿಯಾಂಕ ಗಾಂಧಿ

ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆಯೂ ಕಾರಿನಿಂದ ಇಳಿದು ಜನರ ಬಳಿ ತೆರಳಿದ ಪ್ರಿಯಾಂಕಾ ಗಾಂಧಿ ಹಸ್ತಲಾಘವ ಕೊಟ್ಟು, ನಮಸ್ಕಾರ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲೂ ವೇದಿಕೆಯಿಂದ ಇಳಿದು ಜನರ ಬಳಿ ಮಿಂಚಿನ ಸಂಚಾರ ನಡೆಸಿ ಗಮನ ಸೆಳೆದರು.

ಇನ್ನು, ಇಂದಿನ ಸಮಾವೇಶದಲ್ಲಿ 10-12 ಸಾವಿರದಷ್ಟು ಮಂದಿ ಮಹಿಳೆಯರು ಭಾಗಿಯಾಗಿದ್ದರು. ಭಾಷಣದ ಕೊನೆಯಲ್ಲಿ ಜನರ ಕೈಯಲ್ಲಿ ಜೈ ಕರ್ನಾಟಕ ಎಂದು ಹೇಳಿಸಿದ್ದು ವಿಶೇಷವಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News