ಬೆಂಗಳೂರು: 2022-23ನೇ ಸಾಲಿನಲ್ಲಿ ರಾಜ್ಯದ 10 ಜಿಲ್ಲೆಗಳಲ್ಲಿ ಪದವಿ ಪೂರ್ವ ವಸತಿ ಶಾಲೆಗಳನ್ನು ಮಂಜೂರು ಮಾಡಿ ಸರ್ಕಾರದ ಆದೇಶ ಹೊರಡಿಸಿದೆ. ಅಲ್ಪಸಂಖ್ಯಾತರ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿರುವ 10 ಜಿಲ್ಲೆಗಳಲ್ಲಿ ಪದವಿ ಪೂರ್ವ ವಸತಿ ಕಾಲೇಜುಗಳನ್ನು ಪ್ರಾರಂಭಿಸಲು ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳೊಂದಿಗೆ ವಿಲೀನಗೊಳಿಸಿ "ಎ.ಪಿ.ಜೆ. ಅಬ್ದುಲ್‌ ಕಲಾಂ ವಸತಿ ಶಾಲೆ"ಗಳೆಂದು ಮರುನಾಮಕರಣ‌ ಮಾಡಲು ಸರ್ಕಾರ ನಿರ್ಧರಿಸಿದೆ.  


COMMERCIAL BREAK
SCROLL TO CONTINUE READING

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ 16 ಅಲ್ಪಸಂಖ್ಯಾತರ ವಸತಿ ಶಾಲೆಗಳನ್ನು ಅಲ್ಪಸಂಖ್ಯಾತರ ಪದವಿ ಪೂರ್ವ ವಸತಿ ಕಾಲೇಜುಗಳೊಂದಿಗೆ ಒಂದುಗೂಡಿಸಿ, "ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ"ಗಳೆಂದು ಮರುನಾಮಕರಣ ಮಾಡಿ ಸಿ.ಬಿ.ಎಸ್.ಇ. ಮಾನ್ಯತೆ ನೀಡಲು ಆದೇಶಿಸಲಾಗಿದೆ. 


ಇದನ್ನೂ ಓದಿ- ಪಾರಿವಾಳ ಹಿಡಿಯಲೋದ ಮಕ್ಕಳಿಗೆ ಕರೆಂಟ್‌ ಶಾಕ್‌ - ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕ


10 ಜಿಲ್ಲೆಗಳು ಪದವಿ ಪೂರ್ವ ವಸತಿ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರವು ಮಂಜೂರಾತಿ ನೀಡಿದ್ದು ಸದರಿ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ (11 & 12ನೇ ತರಗತಿ)ಗಳನ್ನು ಆಂಗ್ಲ ಮಾಧ್ಯಮದ ಸಹಶಿಕ್ಷಣ ಮಾದರಿಯಲ್ಲಿ ಒಟ್ಟು 120 ಸಂಖ್ಯಾಬಲದೊಂದಿಗೆ (ಪಿಸಿಎಂಬಿ) ಕೋರ್ಸ್‌ಗಳನ್ನು ಆರಂಭಿಸಲು ಪ್ರಸ್ತಾಪಿಸಿದೆ.


ಇದನ್ನೂ ಓದಿ- ಚಿರತೆ ದಾಳಿಗೆ ಮತ್ತೊಂದು ಬಲಿ!!


ಸದರಿ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಸಿ ಈ ಕೆಳಗಿನಂತೆ ಅದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ MWD 149 MDS 2022 ಬೆಂಗಳೂರು, ದಿನಾಂಕ : 28.10.2022
ಈ ಕೆಳಕಂಡ 10 ಜಿಲ್ಲೆಗಳಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಪದವಿ ಪೂರ್ವ ತರಗತಿಗಳನ್ನು ಈ ಕೆಳಕಂಡ ವಿದ್ಯಾರ್ಥಿಗಳ ಸಂಖ್ಯಾಬಲ ಹಾಗೂ ಕೋರ್ಸ್‌ನೊಂದಿಗೆ ಪ್ರಾರಂಭಿಸಲು ಮಂಜೂರಾತಿ ನೀಡಿ ಆದೇಶಿಸಿದೆ.


2022-23ನೇ ಸಾಲಿನಲ್ಲಿ ಮಂಜೂರಾದ 10 ಪದವಿ ಪೂರ್ವ ವಸತಿ ಕಾಲೇಜುಗಳ ವಿವರ ಕೆಳಕಂಡಂತಿದೆ:
1. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಿಡ್ಡಪಣ ಹಳ್ಳಿ (ಹೊಸಕೋಟೆ)
2. ಚಾಮರಾಜನಗರ ( ಗುಂಡ್ಲುಪೇಟೆ)
3. ಚಿಕ್ಕಮಗಳೂರು (ತೇಗೂರು)
4. ದಾವಣಗೆರೆಯ ಕೊಂಡಜ್ಜಿ ಹರಿಹರ 
5. ಧಾರವಾಡ (ಅಂಚಟಿಗೇರೆ. ಹುಬ್ಬಳ್ಳಿ)
6. ಗದಗ (ಮಲ್ಲಸಮುದ್ರ)
7. ಕೊಡಗು (ಕೊಡ್ಲಿಪೇಟೆ, ಸೋಮವಾರಪೇಟೆ)
8. ಕೋಲಾರ 
9. ಉತ್ತರ ಕನ್ನಡ (ದಾಂಡೇಲಿ, ಹಳಿಯಾಳ)
10. ವಿಜಯನಗರ (ಹೊಸಪೇಟೆ) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.