ಡೆಲಿವರಿ ಬಾಯ್ಸ್ ಗಳಿಗೆ ತಲಾ 2 ಲಕ್ಷ ರೂ. ಜೀವವಿಮೆ ಮತ್ತು ಅಪಘಾತ ವಿಮಾ ಯೋಜನೆಗೆ ರಾಜ್ಯ ಸರ್ಕಾರ ಅಸ್ತು
ರಾಜ್ಯ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ಡೆಲಿವರಿ ಬಾಯ್ಸ್ ( ಗಿಗ್ ಕಾರ್ಮಿಕರು )ಗಳಿಗೆ ರೂ.2 ಲಕ್ಷ ಜೀವವಿಮೆ ಮತ್ತು ರೂ.2 ಲಕ್ಷ ಅಪಘಾತ ಪರಿಹಾರ ವಿಮಾ ಸೌಲಭ್ಯ ಕಲ್ಪಿಸಿ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ಡೆಲಿವರಿ ಬಾಯ್ಸ್ ( ಗಿಗ್ ಕಾರ್ಮಿಕರು )ಗಳಿಗೆ ರೂ.2 ಲಕ್ಷ ಜೀವವಿಮೆ ಮತ್ತು ರೂ.2 ಲಕ್ಷ ಅಪಘಾತ ಪರಿಹಾರ ವಿಮಾ ಸೌಲಭ್ಯ ಕಲ್ಪಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ
ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿ "ಇದು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಆಶಯದ ಯೋಜನೆ.ಭಾರತ್ ಜೋಡೊ ಪಾದಯಾತ್ರೆಯ ಸಂದರ್ಭದಲ್ಲಿ ಡೆಲಿವರ್ ಬಾಯ್‌ಗಳ ಜೊತೆ ಚರ್ಚೆ ನಡೆಸಿದ್ದಾಗ ಅವರ ಅಸುರಕ್ಷಿತ ಬದುಕಿನ ಬವಣೆಗಳು ರಾಹುಲ್ ಗಾಂಧಿ ಅವರ ಗಮನಕ್ಕೆ ಬಂದಿತ್ತು.ಅವುಗಳನ್ನು ಪರಿಹರಿಸುವ ಭರವಸೆಯನ್ನೂ ಅವರು ನೀಡಿದ್ದರು.ಈ ಹಿನ್ನೆಲೆಯಲ್ಲಿ ನೂತನ ವಿಮಾ ಯೋಜನೆಯನ್ನು ರೂಪಿಸಿ ಜಾರಿಗೆ ತಂದಿದ್ದೇವೆ" ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : 60 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ : ಸಚಿವೆ ಲಕ್ಷ್ಮೀ ಹಬ್ಬಾಳ್ಕರ್ ಮಾಹಿತಿ
ರಾಜ್ಯಾದ್ಯಂತ ಗ್ರಾಹಕರಿಗೆ ಆಹಾರ, ದಿನಸಿ, ತರಕಾರಿ ಮುಂತಾದ ಅವಶ್ಯಕ ವಸ್ತುಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ಡೆಲಿವರಿ ಬಾಯ್ ಗಳು ನಿಗದಿತ ಸಮಯದಲ್ಲಿ ಆರ್ಡರ್ ತಲುಪಿಸಬೇಕೆಂಬ ಕಾರಣಕ್ಕಾಗಿ ಸಂಚಾರ ದಟ್ಟಣೆಯ ನಡುವೆ ಪ್ರಾಣವನ್ನು ಪಣಕ್ಕಿಟ್ಟು ವಾಹನ ಚಾಲನೆ ಮಾಡುತ್ತಿದ್ದಾರೆ. ಇಂತಹ ಅಪಾಯಕಾರಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಶ್ರಮಜೀವಿಗಳ ನಿತ್ಯದ ಬದುಕಿನ ಸವಾಲುಗಳನ್ನು ಅರ್ಥೈಸಿಕೊಂಡು, ಅಪಘಾತ, ಪ್ರಾಣಹಾನಿ ಸಂಭವಿಸಿದಾಗ ಅವರ ನೆರವಿಗೆ ಧಾವಿಸಬೇಕು ಎಂಬ ಉದ್ದೇಶದಿಂದ ಈ ವಿಮಾ ಕಾರ್ಯಕ್ರಮವನ್ನು ಬಜೆಟ್ ನಲ್ಲಿ ಘೋಷಿಸಿ,ಈಗದನ್ನು ಜಾರಿಗೆ ಕೊಟ್ಟು ನುಡಿದಂತೆ ನಡೆದಿದ್ದೇವೆ. ಎಂದು ಅವರು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.