ಮಡಿಕೇರಿ: ಜಿಲ್ಲೆಯಾದ್ಯಂತ ಕೋವಿಡ್-19 (Covid-19) ವೈರಸ್ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಮದ್ಯ ಮಾರಾಟ ನಿಷೇದಿಸಿದ್ದು, ಮದ್ಯ ಮಾರಾಟ ನಿಷೇದ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ ಎಂದು ಕೊಡಗು ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಪಿ.ಬಿಂದುಶ್ರೀ ತಿಳಿಸಿದ್ದಾರೆ.  
     
ಇದುವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 09 ಪ್ರಕರಣ ದಾಖಲಿಸಲಾಗಿದ್ದು, 23 ಲೀ. ಕಳ್ಳಭಟ್ಟಿ, 1665 ಲೀ. ಗೇರು ಹಣ್ಣಿನ ಪುಳಗಂಜಿ ಹಾಗೂ 1 ಸನ್ನದಿನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪಿ.ಬಿಂದುಶ್ರೀ ಮಾಹಿತಿ ನೀಡಿದ್ದಾರೆ.


ತುರ್ತು ಕಾರ್ಯಕ್ಕೆ ಅಂತರ್ ಜಿಲ್ಲೆ, ಅಂತರ್ ರಾಜ್ಯ ತೆರಳುವವರಿಗೆ ಸಿಗಲಿದೆ ಇ-ಪಾಸ್


COMMERCIAL BREAK
SCROLL TO CONTINUE READING

ಸೋಮವಾರಪೇಟೆ ತಾಲ್ಲೂಕಿನಲ್ಲಿ 09 ಪ್ರಕರಣ ದಾಖಲಿಸಿದ್ದು, 2.5 ಲೀ. ಕಳ್ಳಭಟ್ಟಿ, 128 ಲೀ. ಬೆಲ್ಲದ ಕೊಳೆ, 120 ಲೀ. ಬೆಲ್ಲದ ಪುಳಗಂಜಿ ಹಾಗೂ 2 ಸನ್ನದಿನ ಮೇಲೆ ಪ್ರಕರಣ ದಾಖಲಿಸಲಾಗಿದೆ.     ಹಾಗೆಯೇ ವಿರಾಜಪೇಟೆ ತಾಲ್ಲೂಕಿನಲ್ಲಿ 03 ಪ್ರಕರಣ ದಾಖಲಿಸಲಾಗಿದ್ದು 05 ಲೀ. ಕಳ್ಳಭಟ್ಟಿ, 20 ಲೀ.  ಪುಳಗಂಜಿ ಹಾಗೂ 2 ಸನ್ನದಿನ ಮೇಲೆ ಪ್ರಕರಣ ದಾಖಲಾಗಿದೆ.


ಜೊತೆಗೆ ಜಿಲ್ಲೆಯಾದ್ಯಂತ ಒಟ್ಟು 360 ದಾಳಿ ನಡೆಸಿದ್ದು 21 ಪ್ರಕರಣ ದಾಖಲಿಸಲಾಗಿದ್ದು,  128 ಲೀ. ಬೆಲ್ಲದ ಕೊಳೆ, 1805 ಪುಳಗಂಜಿ, 30.500 ಲೀ ಕಳ್ಳಭಟ್ಟಿ ಸಾರಾಯಿ, 8.280 ಲೀ ಅಕ್ರಮ ಮದ್ಯ ಹಾಗೂ ಕಳ್ಳಭಟ್ಟಿ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ನಿಯಮ ಉಲ್ಲಂಘನೆ ಮಾಡಿರುವ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ.


ಮೈಸೂರು ಜಿಲ್ಲೆಯಲ್ಲಿ ಲಾಕ್​ಡೌನ್ ಸಡಿಲಿಕೆ ಇಲ್ಲ, ತುರ್ತು ಇದ್ದರೆ ಮಾತ್ರ ಅನುಮತಿ: ಸಚಿವ ಸೋಮಶೇಖರ್


ಕಳ್ಳಭಟ್ಟಿ ತಯಾರಿಕೆಯಲ್ಲಿ ಕೊಳೆತ ಹಣ್ಣು, ಕೊಳೆತ ಬೆಲ್ಲ, ಬ್ಯಾಟರಿ ಸೆಲ್, ಯೂರಿಯಾ ಮತ್ತಿತರ ಆರೋಗ್ಯಕ್ಕೆ ಹಾನಿಕರವಾದ ಪದಾರ್ಥಗಳನ್ನು ಮಿಶ್ರಣ ಮಾಡುವ ಸಾಧ್ಯತೆಗಳಿದ್ದು, ಇದು ಪಾನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿ ರೋಗ ನಿರೋಧಕ ಶಕ್ತಿ ಕುಂದಿಸಲಿದೆ. ಆದ್ದರಿಂದ ಸಾರ್ವಜನಿಕರಿಗೆ ಕಳ್ಳಭಟ್ಟಿ ಸೇವನೆಯಿಂದ ದೂರವಿರುವಂತೆ ಮನವಿ ಮಾಡಿದೆ ಹಾಗೂ ಯರಾದರೂ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಕೆ, ಮಾರಾಟ ಮಾಡುವುದು ಕಂಡುಬಂದಲ್ಲಿ ಅಬಕಾರಿ ಇಲಾಖೆಗೆ ಮಾಹಿತಿ ನೀಡಲು ಕೋರಿದೆ. ಮಾಹಿತಿ ನೀಡುವವರ ಗೋಪ್ಯತೆ ಕಾಪಾಡಲಾಗುವುದು ಎಂದು ಅಬಕಾರಿ ಉಪ ಆಯುಕ್ತರಾದ ಪಿ.ಬಿಂದುಶ್ರೀ ಅವರು ತಿಳಿಸಿದ್ದಾರೆ.