ಮೈಸೂರು : ಟಿ.ನರಸೀಪುರದಲ್ಲಿ ನಟ ಹಾಗೂ ಯುವನಾಯಕ ನಿಖಿಲ್ ಕುಮಾರಸ್ವಾಮಿಯನ್ನು   ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ   ಬೃಹತ್ ಸೇಬಿನ ಹಾರ ಹಾಕಿ ಹೂವಿನ ಸುರಿಮಳೆ  ಹಾಕುವ  ಮೂಲಕ  ಸ್ವಾಗತ ಕೋರಲಾಯಿತು. ಬನ್ನೂರಿನ ಹಾಲಿನ ಡೈರಿ ಮುಂಭಾಗದಿಂದ ರೋಡ್ ಶೋ  ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ಇದೇ ವೇಳೆ ಮಾತನಾಡಿದ ಯುವನಾಯಕ ನಿಖಿಲ್,  ಕುಮಾರಣ್ಣನವರ ಪಂಚರತ್ನ ರಥಯಾತ್ರೆ ಮೈಸೂರಿನಲ್ಲಿ ಅಂತ್ಯಗೊಳ್ಳಲಿದೆ.ಇಡೀ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಯೋಜನೆಗಳು ಪಂಚರತ್ನ ಯೋಜನೆಯಲ್ಲಿವೆ.


ಇದನ್ನೂ ಓದಿ: ಸಿಡಿ ವಿಚಾರವಾಗಿ ರಮೇಶ್ ಜಾರಕಿಹೊಳಿಗೆ ಈಶ್ವರಪ್ಪ ಬೆಂಬಲ


ಸ್ವತಂತ್ರ ಬಂದು 72ವರ್ಷಗಳು ಕಳೆದಿವೆ.ಎರಡು ರಾಷ್ಟ್ರೀಯ ಪಕ್ಷಗಳ ಕಾರ್ಯವೈಖರಿಯನ್ನ ಜನ ನೋಡಿದ್ದಾರೆ.ಕುಮಾರಣ್ಣನವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಒಂದು ಭಾರಿ 20ತಿಂಗಳು.ಮತ್ತೊಂದು ಭಾರಿ 14ತಿಂಗಳು ಒಟ್ಟು 34ತಿಂಗಳು ಕುಮಾರಣ್ಣ ಕೊಟ್ಟ ಜನಪ್ರಿಯ ಕಾರ್ಯಕ್ರಮಗಳು ಇವತ್ತಿಗೂ ಮನೆ ಮನೆ ಮಾತಾಗಿವೆ.


ಇದನ್ನೂ ಓದಿ:“ಸಿಡಿ ಪ್ರಕರಣದ ವಿಚಾರವಾಗಿ ರಮೇಶ್ ಜಾರಕಿಹೋಳಿ ಜೊತೆ ಮಾತಾಡುವೆ”


ಕುಮಾರಣ್ಣ ಮುಖ್ಯಮಂತ್ರಿ ಆಗದೆ ಇದ್ದಾಗಲೂ ರೈತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದ್ದಾರೆ. ಅದೇ ಸಾಲಿನ್ಲಿ  26ಸಾವಿರ ಕೋಟಿ ರೈತರ ಸಾಲವನ್ನ ಮನ್ನಾ ಮಾಡಿದ ಕೀರ್ತಿ ಕುಮಾರಣ್ಣನಿಗೆ ಸಿಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.