ಶೀಲ ಶಂಕೆ.. ಡಂಬಲ್ಸ್ ನಿಂದ ಹೊಡೆದು ಹೆಂಡತಿಯನ್ನು ಕೊಂದ ಗಂಡ

ಒಂದು ಬಾರಿ ಅನುಮಾನ ಶುರುವಾದರೆ ಅದು ಹೋಗೊದೆ ಇಲ್ಲಾ ಎಂಬುದಕ್ಕೆ ಇಲ್ಲಿ ನಡೆದ ಕೊಲೆ ಸಾಕ್ಷಿಯಾಗಿದೆ. ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಡನೆ ರಾಜಧಾನಿಯಲ್ಲಿ ನಡೆದಿದೆ.

Written by - VISHWANATH HARIHARA | Edited by - Krishna N K | Last Updated : Feb 2, 2023, 05:50 PM IST
  • ಒಂದು ಬಾರಿ ಅನುಮಾನ ಶುರುವಾದರೆ ಅದು ಹೋಗೊದೆ ಇಲ್ಲಾ.
  • ದಂಪತಿ ನಡುವೆ ಎಲ್ಲವೂ ಚೆನ್ನಾಗಿಯೆ ಇತ್ತು.‌ ಆದ್ರೆ, ಅನುಮಾನವೆಂಬ ದೆವ್ವ ಹುಟ್ಟಿತ್ತು.
  • ಡಂಬಲ್ ನಿಂದ ಐದಾರು ಬಾರಿ ಪತ್ನಿಯ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಶೀಲ ಶಂಕೆ.. ಡಂಬಲ್ಸ್ ನಿಂದ ಹೊಡೆದು ಹೆಂಡತಿಯನ್ನು ಕೊಂದ ಗಂಡ title=

ಬೆಂಗಳೂರು : ಒಂದು ಬಾರಿ ಅನುಮಾನ ಶುರುವಾದರೆ ಅದು ಹೋಗೊದೆ ಇಲ್ಲಾ ಎಂಬುದಕ್ಕೆ ಇಲ್ಲಿ ನಡೆದ ಕೊಲೆ ಸಾಕ್ಷಿಯಾಗಿದೆ. ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಡನೆ ರಾಜಧಾನಿಯಲ್ಲಿ ನಡೆದಿದೆ.

ಕೃತ್ಯವೆಸಗಿದ ಬಳಿಕ ತಾನೇ ಕರೆ ಮಾಡಿ ವಿಷಯ ತಿಳಿಸಿ ರಾಮಮೂರ್ತಿನಗರ ಪೊಲೀಸರ ಮುಂದೆ ಶರಣಾಗಿದ್ದಾನೆ. ಪತ್ನಿ‌ ಲೇದಿಯಾಳನ್ನು ಕೊಲೆ ಮಾಡಿದ ಆರೋಪದಡಿ ಪತಿ ಮೋರಿಸ್ ಎಂಬಾತನನ್ನ ಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ರಾಮಮೂರ್ತಿನಗರದ ಹೊಯ್ಸಳ ಸ್ಟ್ರೀಟ್‌ನಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ವಾಸವಾಗಿರುವ ಮೋರಿಸ್, 18 ವರ್ಷಗಳ ಹಿಂದೆ ಲೇದಿಯಾಳನ್ನ ಮದುವೆಯಾಗಿದ್ದ. ದಂಪತಿಗೆ ಶಾಲೆಗೆ ಹೋಗುವ ಮೂವರು ಗಂಡು ಮಕ್ಕಳಿದ್ದಾರೆ.

ಇದನ್ನೂ ಓದಿ: ಕೇವಲ ಗೃಹಿಣಿಯರ ಕಣ್ಣಲ್ಲಿ ಮಾತ್ರವಲ್ಲ ರೈತರ ಕಣ್ಣಲ್ಲೂ ನೀರು ತರಿಸುತ್ತಿದೆ ಈರುಳ್ಳಿ

ಪತ್ನಿ ಗೃಹಿಣಿಯಾದರೆ ಪತಿ ಮೊಬೈಲ್‌ ನೆಟ್ ವರ್ಕ್ ಕಂಪನಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದ.‌ ದಂಪತಿ ನಡುವೆ ಎಲ್ಲವೂ ಚೆನ್ನಾಗಿಯೆ ಇತ್ತು.‌ ಈ‌ ಮಧ್ಯೆ‌ ಆತನಿಗೆ ಹುಟ್ಟಿದ ಅನುಮಾನ ಅನಾಹುತಕ್ಕೆ ಕಾರಣವಾಗಿದೆ. ಪರಪುರುಷನೊಂದಿಗೆ ಸಂಬಂಧವಿದೆ ಎಂದು‌ ಶಂಕಿಸಿ ಹೆಂಡತಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಇಂದು ಬೆಳಗ್ಗೆ ಮಕ್ಕಳು‌ ಶಾಲೆಗೆ ಹೋದ‌‌‌ ಮೇಲೆ ಪತ್ನಿ ಜೊತೆ ಕ್ಯಾತೆ ತೆಗೆದಿದ್ದಾನೆ. ನೋಡು ನೋಡುತ್ತಿದ್ದಂತೆ ಗಲಾಟೆ ತಾರಕ್ಕಕ್ಕೇರಿದೆ. ಮನೆಯಲ್ಲಿದ್ದ ಸುಮಾರು ಎರಡೂವರೆ‌ ಕೆ.ಜಿ ತೂಕದ ಡಂಬಲ್ ನಿಂದ ಐದಾರು ಬಾರಿ ಪತ್ನಿಯ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೃತ್ಯವೆಸಗಿದ ಬಳಿಕ ಪೊಲೀಸ್ ಕಂಟ್ರೋಲ್‌ ರೂಮ್ ಗೆ ಕರೆ ಮಾಡಿ ಮನೆಯಲ್ಲಿ ಕೌಟುಂಬಿಕ ಕಾರಣಕ್ಕಾಗಿ ಜಗಳ ನಡೆದಿದೆ ಎಂದು ಹೇಳಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಲೈದಿಯಾಳ ಶವ ಕ್ರೂರವಾಗಿ ಹತ್ಯೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ‌‌.‌ ಪ್ರಾಥಮಿಕ ವಿಚಾರಣೆ ವೇಳೆ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News