Oxygen Shortage : ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಮತ್ತೆ 4 ರೋಗಿಗಳು ಸಾವು!
ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕು ಆಸ್ಪತ್ರೆಯಲ್ಲಿ ಘಟನೆ
ಕಲಬುರಗಿ : ಜಿಲ್ಲೆಯ ಅಫಜಲ್ಪುರ ತಾಲೂಕು ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರಿಗೆ ಸೂಕ್ತ ಸಮಯದಲ್ಲಿ ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ 4 ಗಂಟೆಗೆ ಆಕ್ಸಿಜನ್(Oxygen) ಮುಗಿದು ಹೋಗಿದ್ದು, ಆಸ್ಪತ್ರೆಯಲ್ಲಿರುವ ಇನ್ನೂ 32 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : Coronavirus : ಇದೆಂಥಾ ಕಲಿಗಾಲ..! ಸ್ಮಶಾನದ ಮುಂದೆಯೂ ಹೌಸ್ ಫುಲ್ ಬೋರ್ಡ್ ..!
ನಿನ್ನೆ ಚಾಮರಾಜ ನಗರ ಮೆಡಿಕಲ್ ವಿಜ್ಞಾನ ಸಂಸ್ಥೆಯಲ್ಲಿ (Chamarajanagara Medical Institute) ಆಕ್ಸಿಜನ್ ಸಿಗದೇ 24 ಕರೋನಾ ಪೀಡಿತರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : Cyclone Effect : ಚಂಡಮಾರುತ ಚಲನೆ ಇಂದಿನಿಂದ ಮೇ 6 ರವರೆಗೆ ರಾಜ್ಯದಲ್ಲಿ ಭಾರೀ ಮಳೆ..!
ಇಲ್ಲಿ ದಾಖಲಾದ ಈ 24 ಕರೋನಾ ರೋಗಿಗಳು ಆಮ್ಲಜನಕದ (Oxygen) ಕೊರತೆಯಿಂದ ಸಾವನ್ನಪ್ಪಿದ್ದಾರೆ. ಇಲ್ಲಿ 144 ಕರೋನಾ ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದರು. ಏಕಕಾಲದಲ್ಲಿ 24 ರೋಗಿಗಳು ಸಾವನ್ನಪ್ಪಿರುವ ಘಟನೆ ಬಹಿರಂಗವಾದ ನಂತರ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ : ಚಾಮರಾಜನಗರದಲ್ಲಿ ಶಾಕಿಂಗ್ ನ್ಯೂಸ್.! ಆಕ್ಸಿಜನ್ ಸಿಗದೇ 24 ಕರೋನಾ ರೋಗಿಗಳ ಸಾವು
ಆಕ್ಸಿಜನ್ ಕೊರತೆಯಿಂದ ಕೋಲಾರ ಜಿಲ್ಲೆಯಲ್ಲಿ ಕೂಡ ನಾಲ್ವರು ರೋಗಿಗಳು(Covid-19 Patients) ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : SSLC, ಪಿಯುಸಿ ಪರೀಕ್ಷೆ ನಡೆಸುವ ಬಗ್ಗೆ ಇಂದು ನಿರ್ಧಾರ!
ತಾಲ್ಲೂಕು ಆರೋಗ್ಯ ಅಧಿಕಾರಿ(THO) ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ವಿ ವಿ ಜ್ಯೋಥ್ಸ್ನಾ ಅವರಿಗೆ ಆಸ್ಪತ್ರೆಗೆ ಆಮ್ಲಜನಕ ಪೂರೈಸುವಂತೆ ಕೋರಿದ್ದಾರ.
ಇದನ್ನೂ ಓದಿ : ಮೇ 5 ರಿಂದ 3 ದಿನ ಭಾರಿ ಮಳೆ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ಘೋಷಣೆ!
ಬೆಳಿಗ್ಗೆ 11.30 ರ ಹೊತ್ತಿಗೆ ಆಮ್ಲಜನಕ ಸಿಲಿಂಡರ್‌ಗಳು ಆಸ್ಪತ್ರೆ ತಲುಪಿದ್ದರಿಂದ ಇತರ ರೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.