ಚಾಮರಾಜನಗರದಲ್ಲಿ ಶಾಕಿಂಗ್ ನ್ಯೂಸ್.! ಆಕ್ಸಿಜನ್ ಸಿಗದೇ 24 ಕರೋನಾ ರೋಗಿಗಳ ಸಾವು

ಲಭ್ಯ ಮಾಹಿತಿಯ  ಪ್ರಕಾರ, ಇಲ್ಲಿ ದಾಖಲಾದ ಈ 24 ಕರೋನಾ ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಇಲ್ಲಿ 144 ಕರೋನಾ ರೋಗಿಗಳು  ಚಿಕಿತ್ಸೆಗೆ ದಾಖಲಾಗಿದ್ದರು. 

Written by - Ranjitha R K | Last Updated : May 3, 2021, 12:44 PM IST
  • ಮುಂಬಯಿ, ದೆಹಲಿಯಲ್ಲಿ ಉಂಟಾಗುತ್ತಿರುವ ಸನ್ನಿವೇಶ ಕರ್ನಾಟಕದಲ್ಲೂ ಸೃಷ್ಟಿಯಾಗುತ್ತಿದೆಯೋ ಎಂಬ ಅನುಮಾನ ಬರುತ್ತಿದೆ.
  • ಚಾಮರಾಜ ನಗರ ಮೆಡಿಕಲ್ ವಿಜ್ಞಾನ ಸಂಸ್ಥೆಯಲ್ಲಿ ಆಕ್ಸಿಜನ್ ಸಿಗದೇ 24 ಕರೋನಾ ಪೀಡಿತರು ಕೊನೆಯುಸಿರೆಳೆದಿದ್ದಾರೆ.
  • ಮೈಸೂರಿನಿಂದ ಬರಬೇಕಾಗಿದ್ದ ಆಕ್ಸಿಜನ್ ಸಿಲಿಂಡರ್ ಸರಿಯಾದ ಸಮಯಕ್ಕೆ ಬಾರದೇ ಹೋಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಚಾಮರಾಜನಗರದಲ್ಲಿ ಶಾಕಿಂಗ್ ನ್ಯೂಸ್.! ಆಕ್ಸಿಜನ್  ಸಿಗದೇ 24 ಕರೋನಾ ರೋಗಿಗಳ ಸಾವು  title=
ಚಾಮರಾಜ ನಗರ ಮೆಡಿಕಲ್ ವಿಜ್ಞಾನ ಸಂಸ್ಥೆಯಲ್ಲಿ ಆಕ್ಸಿಜನ್ ಸಿಗದೇ 24 ಕರೋನಾ ಪೀಡಿತರು ಕೊನೆಯುಸಿರೆಳೆದಿದ್ದಾರೆ (PHOTO ANI)

ಬೆಂಗಳೂರು:  ಚಾಮರಾಜ ನಗರದಿಂದ ಶಾಕಿಂಗ್ ನ್ಯೂಸ್ ಬಂದಿದೆ. ಮುಂಬಯಿ, ದೆಹಲಿಯಲ್ಲಿ ಉಂಟಾಗುತ್ತಿರುವ ಸನ್ನಿವೇಶ ಕರ್ನಾಟಕದಲ್ಲೂ (Karnataka) ಸೃಷ್ಟಿಯಾಗುತ್ತಿದೆಯೋ ಎಂಬ  ಅನುಮಾನ  ಬರುತ್ತಿದೆ. ಚಾಮರಾಜ ನಗರ ಮೆಡಿಕಲ್ ವಿಜ್ಞಾನ ಸಂಸ್ಥೆಯಲ್ಲಿ  (Chamarajanagara Medical Institute) ಆಕ್ಸಿಜನ್ ಸಿಗದೇ 24 ಕರೋನಾ ಪೀಡಿತರು  ಕೊನೆಯುಸಿರೆಳೆದಿದ್ದಾರೆ (Corona Patient death). ಈ ಘಟನೆ ಬಳಿಕ ಆಸ್ಪತ್ರೆಯಲ್ಲಿ ಕೋಲಾಹಲ ಉಂಟಾಗಿದೆ. 

ಕ್ಲಪ್ತ ಸಮಯಕ್ಕೆ ಬರಲಿಲ್ಲ ಆಮ್ಲಜನಕ.!
ಲಭ್ಯ ಮಾಹಿತಿಯ  ಪ್ರಕಾರ, ಇಲ್ಲಿ ದಾಖಲಾದ ಈ 24 ಕರೋನಾ ರೋಗಿಗಳು ಆಮ್ಲಜನಕದ (Oxygen) ಕೊರತೆಯಿಂದ ಸಾವನ್ನಪ್ಪಿದ್ದಾರೆ. ಇಲ್ಲಿ 144 ಕರೋನಾ ರೋಗಿಗಳು  (Corona patient) ಚಿಕಿತ್ಸೆಗೆ ದಾಖಲಾಗಿದ್ದರು. ಏಕಕಾಲದಲ್ಲಿ 24 ರೋಗಿಗಳು ಸಾವನ್ನಪ್ಪಿರುವ ಘಟನೆ ಬಹಿರಂಗವಾದ ನಂತರ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

 

ಇದನ್ನೂ ಓದಿ : SSLC, ಪಿಯುಸಿ ಪರೀಕ್ಷೆ ನಡೆಸುವ ಬಗ್ಗೆ ಇಂದು ನಿರ್ಧಾರ!

ಕಳೆದ ರಾತ್ರಿ 12 ಗಂಟೆಯಿಂದ ನಸುಕಿನ ವೇಳೆಯ ತನಕ  ಈ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಮೈಸೂರಿನಿಂದ (Mysore) ಬರಬೇಕಾಗಿದ್ದ ಆಕ್ಸಿಜನ್ ಸಿಲಿಂಡರ್ (Oxygen cylinder) ಸರಿಯಾದ ಸಮಯಕ್ಕೆ ಬಾರದೇ ಹೋಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. 

ಜಿಲ್ಲಾಧಿಕಾರಿ ಜೊತೆ ಮಾತಾಡಿದ ಯಡಿಯೂರಪ್ಪ:

ಘಟನೆ ಬಹಿರಂಗವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa), ಚಾಮರಾಜನಗರ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದಾರೆ. ಪರಿಸ್ಥಿತಿಯ  ಅವಲೋಕನ ನಡೆಸಿದ್ದಾರೆ. ಜೊತೆ ಆರೋಗ್ಯ ಸಚಿವ ಡಾ. ಸುಧಾಕರ್ (DR K Sudhakar) ಅವರಿಗೂ ಕರೆ ಮಾಡಿ, ಸ್ಥಳಕ್ಕೆ ತೆರಳಿ ಪರಿಸ್ಥಿತಿ ಪರಾಮರ್ಶಿಸುವಂತೆ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಮೇ 5 ರಿಂದ 3 ದಿನ ಭಾರಿ ಮಳೆ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ಘೋಷಣೆ!

ನಾಳೆ ತುರ್ತು ಸಂಪುಟ ಸಭೆ
ಚಾಮರಾಜನಗರ ಜಿಲ್ಲೆಯ ಘಟನೆ ಸ್ಫೋಟಿಸುತ್ತಿರುವಂತೆ ಯಡಿಯೂರಪ್ಪ ತುರ್ತು ಸಂಪುಟ ಸಭೆ (Cabinet) ಕರೆದಿದ್ದಾರೆ. ನಾಳೆ ಸಂಪುಟ ಸಭೆ ನಡೆಯಲಿದೆ.. ಭವಿಷ್ಯದಲ್ಲಿ ಇಂಥಹ ಘಟನೆ ತಡೆಯುವುದೇ ಈ ಸಭೆಯ ಪ್ರಧಾನ  ಅಜೆಂಡಾ ಆಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News