ಪ್ಲಾಟು ಕೊಡದ ಸಾಮನ್ ಡೆವಲಪರ್ಸ್ಗೆ 4 ಲಕ್ಷ 60 ಸಾವಿರ ರೂ.ಗಳ ದಂಡ
7-8 ವರ್ಷ ಕಳೆದರೂ ಡೆವಲಪರ್ ಸದರಿ ಜಮೀನಿನನ್ನು ಅಬಿವೃದ್ಧಿ ಪಡಿಸಲಿಲ್ಲ ದೂರುದಾರ ಅಭಿವೃದ್ಧಿಪಡಿಸಿ ಪ್ಲಾಟಕೊಡುವಂತೆ ಹಲವು ಬಾರಿ ವಿನಂತಿಸಿದರೂ ಎದುರುದಾರರು ಅವರಿಗೆ ಪ್ಲಾಟ್ ಕೊಟ್ಟಿರಲಿಲ್ಲ
ಧಾರವಾಡ: ಧಾರವಾಡದ ಸಾಮನ್ ಡೆವಲಪರ್ಸ್ ರವರು ಬಾಗೇವಾಡಿ ಹದ್ದಿನಲ್ಲಿ ಎನ್‍ಎ ಪ್ಲಾಟ ಮಾಡುತ್ತಿರುವುದಾಗಿ ಹೇಳಿ ಗಾಂಧಿನಗರ ವಾಸಿ ರವಿ ಸುರಗೊಂಡರವರಿಗೆ ಪ್ಲಾಟ ನಂ.ಎ-92 ಹಾಗೂ ಎ-93ರನ್ನು ಒಟ್ಟು 9 ಲಕ್ಷರೂಪಾಯಿಗೆ 2012ನೇ ಇಸವಿಯಲ್ಲಿ ಮಾರಾಟ ಮಾಡಿದ್ದರು.ಈ ಬಗ್ಗೆ ದೂರುದಾರ ರವಿ 4 ಲಕ್ಷರೂಪಾಯಿ ಮುಂಗಡಕೊಟ್ಟು ಒಪ್ಪಂದ ಪತ್ರ ಮಾಡಿಕೊಂಡಿದ್ದರು.
ಇದನ್ನೂ ಓದಿ: ಗುರುವಾರದೊಳಗೆ ಜೆಡಿಎಸ್ 2ನೇ ಪಟ್ಟಿ: ಹೆಚ್.ಡಿ.ಕುಮಾರಸ್ವಾಮಿ
7-8 ವರ್ಷ ಕಳೆದರೂ ಡೆವಲಪರ್ ಸದರಿ ಜಮೀನಿನನ್ನು ಅಬಿವೃದ್ಧಿ ಪಡಿಸಲಿಲ್ಲ.ದೂರುದಾರ ಅಭಿವೃದ್ಧಿಪಡಿಸಿ ಪ್ಲಾಟಕೊಡುವಂತೆ ಹಲವು ಬಾರಿ ವಿನಂತಿಸಿದರೂ ಎದುರುದಾರರು ಅವರಿಗೆ ಪ್ಲಾಟ್ ಕೊಟ್ಟಿರಲಿಲ್ಲ. ಹೀಗಾಗಿ ಎದುರುದಾರ ಸಾಮನ್ ಡೆವಲಪರ್ ತನಗೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರನು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಈ ದೂರು ಸಲ್ಲಿಸಿದ್ದರು.ಇದು ಚಿನ್ನ ಕದ್ದು ಗುಜರಿಗೆ ಹಾಕಿದ ಕಳ್ಳನ ಕಥೆ: ಇನ್ಟ್ರಸ್ಟಿಂಗ್ ಇದೆ ಓದಿ..!
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಬು .ಸಿ ಹಿರೇಮಠ 2012ನೇ ಇಸವಿಯಲ್ಲಿ ಪ್ಲಾಟ ಅಭಿವೃದ್ಧಿಗೊಳಿಸಿ ಮಾರಾಟ ಮಾಡುವುದಾಗಿ ಹೇಳಿ ದೂರುದಾರರಿಂದ ಮುಂಗಡವಾಗಿ 4 ಲಕ್ಷ ರೂ. ಪಡೆದು 7-8 ವರ್ಷ ಕಳೆದರೂ ಯಾವುದೇ ಜಮೀನಿನನ್ನು ಅಭಿವೃದ್ಧಿಪಡಿಸದೇ ಅವರ ಹಣವನ್ನು ಸಾಮನ್ ಡೆವಲಪರ್ಸ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ದೂರುದಾರನಿಗೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದಿ:20/10/2012 ರಿಂದ ರೂ.4 ಲಕ್ಷ ರೂಪಾಯಿಗಳ ಮೇಲೆ ಶೇ.8 ರಂತೆ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕಹಾಕಿ ದೂರುದಾರರಿಗೆ ಹಿಂದಿರುಗಿಸಲು ಆಯೋಗ ತಿಳಿಸಿದೆ.
ಅಲ್ಲದೇ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಸಾಮನ್ ಡವಲಪರ್ಸ್‍ನ ಮ್ಯಾನೇಜಿಂಗ್ ಪಾರ್ಟನರ್ ವಿನಯ ಸಾಹುಕಾರನಿಗೆ ಆಯೋಗ ಆದೇಶಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.