ಬೆಂಗಳೂರು: ‘ಸಮಾಜದಲ್ಲಿ ಮುಗ್ಧತೆಯನ್ನು ಹೇಗೆ ದುರ್ಬಳಕೆ ಮಾಡಿಕೊಳ್ತಾರೆ ಅನ್ನೋದನ್ನು ‘ಲವ್ 360’ ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಅದ್ಭುತ ಸಿನಿಮಾ ನೋಡಿದ ಅನುಭವ ಸಿಕ್ತು’ ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ್‍ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘40% ಸರ್ಕಾರದ ಸಚಿವರನ್ನು ಬೇರೆಲ್ಲೂ ಹುಡುಕುವುದು ಬೇಡ, ಸಿನೆಮಾ ಥಿಯೇಟರ್‌ನಲ್ಲಿ ಹುಡುಕಿದರೆ ಸಾಕು! ರೈತರು ಅತಿವೃಷ್ಟಿ, ಗೊಬ್ಬರದ ಕೊರತೆಯಂತಹ ಸಮಸ್ಯೆ ಎದುರಿಸುವಾಗ ಕೃಷಿ ಸಚಿವರು ಸಿನೆಮಾ ವೀಕ್ಷಣೆಯ ಮೋಜಿನಲ್ಲಿದ್ದಾರೆ. ಬಿ.ಸಿ.ಪಾಟೀಲ್ ಅವರೇ ರೈತರು ಸಾಯುತ್ತಿದ್ದಾರೆ, ತಾವು ರೀಲ್ ಲೈಫ್‌ನಿಂದ ರಿಯಲ್ ಲೈಫ್‌ಗೆ ಬರುವುದು ಯಾವಾಗ?’ ಎಂದು ಪ್ರಶ್ನಿಸಿದೆ.


"ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವಂತಹ ಆಘಾತಕಾರಿ ಹೇಳಿಕೆಯನ್ನು ಬಿಜೆಪಿ ತನ್ನ ಶಾಸಕರಿಂದಲೇ ಕೊಡಿಸುತ್ತಿದೆ"


40% ಸರ್ಕಾರದಡಿ ಕರ್ನಾಟಕ ಸಾಯುತ್ತಿದೆ!


‘ಪ್ರಧಾನಿ ನರೇಂದ್ರ ಮೋದಿಯವರೇ ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ರಾಜ್ಯ ಸರ್ಕಾರವೆಂದು ಹೈಕೋರ್ಟ್ ಕೂಡ ಒಪ್ಪಿಕೊಂಡಿದೆ. #NaKhaungaNaKhaaneDunga ಅಂಧ ಭಕ್ತರಿಗೆ ಕೇವಲ ಆಕರ್ಷಕ ಘೋಷಣೆಯಾಗಿದೆ. 40% ಸರ್ಕಾರದ ಅಡಿಯಲ್ಲಿ ಕರ್ನಾಟಕ ನಿಧಾನವಾಗಿ ಸಾಯುತ್ತಿದೆ’ ಎಂದು ಕಾಂಗ್ರೆಸ್ ಕುಟುಕಿದೆ.


ಬಸವರಾಜ್ ಬೊಮ್ಮಾಯಿಯವರ ಅಸಲಿ ಮುಖ ಇದು! #PuppetCM ಅಧಿಕಾರಿಗಳಿಗೂ ಕೈಗೊಂಬೆಯಾದ್ರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಇದನ್ನೂ ಓದಿ: "ನಾವು ಕೈಯಲ್ಲಿ ಮೊಟ್ಟೆ ತೆಗೆದುಕೊಂಡರೆ ನೀವು ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲ"


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.