"ನಾವು ಕೈಯಲ್ಲಿ ಮೊಟ್ಟೆ ತೆಗೆದುಕೊಂಡರೆ ನೀವು ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲ"

ನಾವು ಕೈಯಲ್ಲಿ ಮೊಟ್ಟೆ ತೆಗೆದುಕೊಂಡರೆ ನೀವು ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲ ಎಂದು ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದರು‌.

Written by - Zee Kannada News Desk | Last Updated : Aug 19, 2022, 06:25 PM IST
  • ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮಗೆ ಶಕ್ತಿ ಇಲ್ಲ ಎಂದು‌ ಇಲ್ಲಿ ಸೇರಿಲ್ಲ,
  • ಗಾಂಧಿ ತತ್ವಕ್ಕೆ ಸೇರಿದವರು. ನಾವು ಅದಕ್ಕೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
"ನಾವು ಕೈಯಲ್ಲಿ ಮೊಟ್ಟೆ ತೆಗೆದುಕೊಂಡರೆ ನೀವು ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲ"  title=
Photo Courtsey: Facebook

ಬೆಂಗಳೂರು: ನಾವು ಕೈಯಲ್ಲಿ ಮೊಟ್ಟೆ ತೆಗೆದುಕೊಂಡರೆ ನೀವು ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲ ಎಂದು ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದರು‌.

ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮಗೆ ಶಕ್ತಿ ಇಲ್ಲ ಎಂದು‌ ಇಲ್ಲಿ ಸೇರಿಲ್ಲ, ಗಾಂಧಿ ತತ್ವಕ್ಕೆ ಸೇರಿದವರು. ನಾವು ಅದಕ್ಕೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: Rajinikanth as Governor: ರಾಜ್ಯಪಾಲರಾಗಿ ನೇಮಕವಾಗಲಿದ್ದಾರಾ ರಜನಿಕಾಂತ್‌?

ಸಾವರ್ಕರ್ ವಿಚಾರವಾಗಿ ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪು ಇದ್ದರೆ ಚರ್ಚೆ ಮಾಡೋಣ. ಒಂದು ವೇಳೆ ತಪ್ಪಾದರೆ ನಾವು ಕ್ಷಮೆ ಕೇಳುತ್ತೇವೆ, ಇಲ್ಲಾಂದ್ರೆ ನೀವು ಕ್ಷಮೆ ಕೇಳಬೇಕು. ಸಾವರ್ಕರ್ ಹೆಸರು ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಕೈಬಿಡಬೇಕಾಗುತ್ತೆ. ಸಾವರ್ಕರ್ ಬ್ರಿಟಿಷರಿಗೆ ಕ್ಷಮೆ ಕೇಳಿದವರು ಅವರು ನಿಮಗೆ ಹೀರೋ, ಬ್ರಿಟಿಷರ ಕಾಲಿಗೆ ಬಿದ್ದು ನೀವು ಹೇಳಿದ ಹಾಗೆ ಜೀವನ ನಡೆಸುತ್ತೇನೆ ಎಂದಿದ್ದರು. ಸಿದ್ದರಾಮಯ್ಯ ಅವರು ಇತಿಹಾಸದಲ್ಲಿ ಏನು ಇದೆ ಅದನ್ನು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.

ನಮ್ಮ ಕೈಯಲ್ಲಿ ಮೊಟ್ಟೆ ತೆಗೆದುಕೊಂಡರೆ ನೀವು ಬೀದಿಯಲ್ಲಿ ಓಡಾಟ ಮಾಡಲು ಸಾಧ್ಯವಿಲ್ಲ. ನಾವು ಮೊಟ್ಟೆ ಎಸೆದರೆ ಸಾಮಾನ್ಯ ಜನರೂ ನಿಮ್ಮ ಮುಖದ ಮೇಲೆ ಮೊಟ್ಟೆ ಎಸೆಯಬಹುದು‌.ಜನರು ತಮ್ಮ ಕಷ್ಟ ಸಹಿಸದೆ ಮೊಟ್ಟೆ ಎಸೆಯಬಹುದು‌.ನಿಮ್ಮ ಸಿಎಂ, ರಾಜ್ಯಾಧ್ಯಕ್ಷರು, ಸಂಘದ ಮುಖಂಡರ ಮನೆಯ ಮೇಲೆ ಮೊಟ್ಟೆ ಎಸೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಸಿದ್ದರಾಮಯ್ಯ, ಡಿಕೆಶಿಗೆ ಕ್ಷಮೆ ಕೇಳುವ ಸೌಜನ್ಯ ಇಲ್ಲ : ಕೆ.ಎಸ್‌.ಈಶ್ವರಪ್ಪ

ನೀವು ನಿನ್ನೆ ಮಾಡಿದ ಕೆಲಸ ದಿನಾ ನಡೆಯುತ್ತೆ ಇದು ಎಚ್ಚರಿಕೆ‌ ನೀಡಿದ ಅವರು, ಸಿಎಂ ಮನೆಯಿಂದ ಆಚೆ ಬರಲು ಸಾಧ್ಯವಿಲ್ಲ ಆ ರೀತಿಯ ಕೆಲಸ ಆಗುತ್ತದೆ. ‌ಆದರೆ ನಾವು ಮಾಡಲು ತಯಾರಿಲ್ಲ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಇದ್ಯಾ? ಜನರ ಸಂಕಷ್ಟ ಆಲಿಸಲು ಹೋಗಿದ್ದಾರೆ ಅಂತಹ ಸಂದರ್ಭದಲ್ಲಿ ಇಂತಹ ಘಟನೆ ಮಾಡಿದ್ದಾರೆ. ಇಂತಹ ಘಟನೆ ಮುಂದುವರಿದರೆ ಅನಾಹುತ ಸಂಭವಿಸಲಿದೆ ಎಂದರು.

ಪರಿಷತ್ ಸದಸ್ಯ ನಜೀರ್ ಅಹ್ಮದ್ ಮಾತನಾಡಿ, ಮೋದಿಗೆ ಸವಾಲು ಹಾಕುವವರು ಕೇವಲ ಸಿದ್ದರಾಮಯ್ಯ. ಸಿದ್ದರಾಮಯ್ಯ ವಿರುದ್ಧ ಕೈ ಮಾಡಿದರೆ ಇಡೀ ರಾಜ್ಯದಲ್ಲಿ ರಾಷ್ಟ್ರದಲ್ಲಿ ಸಂಘರ್ಷ ನಡೆಯುತ್ತೆ‌. ನ್ಯಾಯಾಂಗ ತನಿಖೆ ಆಗಬೇಕು  ಎಂದು ಆಗ್ರಹಿಸಿದರು.

ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ಪ್ರತಿಪಕ್ಷದ ನಾಯಕರಿಗೆ ಭದ್ರತೆ ಕೊಡುವುದು ಸರ್ಕಾರದ ಕೆಲಸ. ಆದರೆ ಸರ್ಕಾರ ಆ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. ಸಿದ್ದರಾಮೋತ್ಸವ, ಸ್ವಾತಂತ್ರ್ಯದ ನಡಿಗೆಯಿಂದ ಬಿಜೆಪಿ ಮುಖಂಡದು ಹತಾಶರಾಗಿದ್ದಾರೆ ಅದಕ್ಕಾಗಿ ಈ ರೀತಿ ಪ್ರತಿಭಟನೆ ಮಾಡುತ್ತಾರೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News