ಬೆಂಗಳೂರು: ನಗರದ ಮೈಸೂರು ರಸ್ತೆ ಕೆಂಗೇರಿಯ ಬಿಡಿಎ ಅಪಾರ್ಟ್ಮೆಂಟ್ ಬಳಿ ವೃಷಭಾವತಿ ರಾಜಕಾಲುವೆಯ ತಡೆಗೋಡೆ ಕೊಚ್ಚಿ ಹೋಗಿದ್ದ  ಸ್ಥಳಕ್ಕೆ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಭೇಟಿ ನೀಡಿ ದರಸ್ತಿ ಕಾಮಗಾರಿಯ ಪರಿಶೀಲನೆ ನಡೆಸಿದರು.ಮುಂದಿನ‌ 45 ದಿನದೊಳಗಾಗಿ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ರಾಜಕಾಲುವೆಯ ದುರಸ್ತಿ ಕಾಮಗಾರಿ ಪರಿಶೀಲನೆಯ ವೇಳೆ ಮಾತನಾಡಿ, ನಗರದ ಮೈಸೂರು ರಸ್ತೆ ಕೆಂಗೇರಿ ಬಳಿಯ ರಾಜಕಾಲುವೆ ದುರಸ್ತಿ ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: PM Narendra Modi : ಪ್ರಧಾನಿ ಮೋದಿಗೆ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ'


ಈ‌ ವೇಳೆ ಅಧಿಕಾರಿ ಪ್ರತಿಕ್ರಿಯಿಸಿ, ರಸ್ತೆ ಅಡ್ಡಲಾಗಿ ಒಂದೇ ಪೈಪ್ ಕನ್ವರ್ಟ್ ಇದ್ದ ಪರಿಣಾಮ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗಿರಲಿಲ್ಲ.ಈ ಸಂಬಂಧ ವೃಷಭಾವತಿ ನದಿಯ ತಡೆಗೋಡೆ, ಸೇತುವೆಯ ಬಾಕ್ಸ್ ಕನ್ವರ್ಟ್, ರಸ್ತೆ ಎತ್ತರಿಸುವ ಕಾಮಗಾರಿ ಸೇರಿದಂತೆ ಸುಮಾರು 9.1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಈ ಪೈಕಿ ವೃಷಭಾವತಿ ರಾಜಕಾಲುವೆಗೆ 240 ಮೀಟರ್ ತಡೆಗೋಡೆ ನಿರ್ಮಾಣ, ರಸ್ತೆಯಲ್ಲಿ ನೀರು ನಿಲ್ಲದಂತೆ ಕೆಂಗೇರಿ ಕಡೆ ಹೋಗುವ 200 ಮೀಟರ್ ರಸ್ತೆ ಎತ್ತರಿಸುವ ಕಾಮಗಾರಿ ಹಾಗೂ ದುಬಾಸಿ ಪಾಳ್ಯದಿಂದ ಬರುವ ನೀರು ಸರಾಗವಾಗಿ ನದಿಗೆ ಸೇರಲು 6 ಮೀಟರ್ ಅಗಲದ ಸೇತುವೆಯ ಬಾಕ್ಸ್ ಕಲ್ವರ್ಟ್ ಕಾಮಗಾರಿಯು ಅರ್ಧ ಪೂರ್ಣಗೊಂಡಿದೆ.


"ಕಂಡಿಡಿ ನೋಡನ"ದಲ್ಲಿದೆಯಂತೆ ವಿಭಿನ್ನ ಕ್ಲೈಮ್ಯಾಕ್ಸ್...ಏನದು..!?


ಅರ್ಧ ಭಾಗ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆ ವಾಹನಗಳ ಸಂಚಾರಕ್ಕೆ ಆ ಭಾಗದಲ್ಲಿ (ಕೆಂಗೇರಿ ಕಡೆ ಹೋಗುವ ರಸ್ತೆ) ಅವಕಾಶ ಕಲ್ಪಿಸಿ ಇನ್ನೊಂದು ಭಾಗದಲ್ಲಿ ಸೇತುವೆ ನರ್ಮಾಣ ಕಾರ್ಯ ಆರಂಭವಾಗಬೇಕಿದೆ.ಈ ಪೈಕಿ ಇನ್ನು ಅರ್ಧ ಭಾಗದ ರಸ್ತೆ(ನಗರದೊಳಗೆ ಬರುವ ರಸ್ತೆ)ಯಲ್ಲಿ ಕಾಮಗಾರಿ ಕೈಗೊಳ್ಳಲು ಸಂಚಾರಿ ಪೊಲೀಸರಿಂದ ಅನುಮತಿ ಪಡೆಯಲಾಗಿದ್ದು, ಮಾರ್ಗ ಬದಲಾವಣೆ ಮಾಡಿ ಮುಂದಿನ ವಾರದಿಂದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.