ಬಾಗಲಕೋಟೆ: ಆ ಚಿಂಕಿ ಅಂದ್ರೆ ಏರಿಯಾ ಜನ್ರಿಗೆಲ್ಲ ಅಚ್ಚುಮಚ್ಚು. ರಂಗಭೂಮಿ ಕಲಾವಿದೆ ಮನೆಯಲ್ಲಿನ ಚಿಂಕಿಯ ಹಾರಾಟ ಚೆಲ್ಲಾಟ ನೋಡಲು ಎರಡು ಕಣ್ಗಳು ಸಾಲದು. ನಿಯತ್ತಿಗೆ ಹೆಸರಾದ ಆ ಚಿಂಕಿ ವಾರದ ಹಿಂದೆ ತುಂಬು ಗರ್ಭಿಯಾಗಿದ್ಲು. ಹೀಗಾಗಿ ಪ್ರೀತಿಯ ಚಿಂಕಿಗೆ ಸೀರೆ, ಬಳೆ, ಅರಶಿನ ಕುಂಕಮ ಹಚ್ಚಿ ಆರತಿ ಬೆಳಗಿ ಏರಿಯಾ ಜನ್ರು ಖುಷಿಪಟ್ಟಿದ್ರು. ಸಿಹಿ ತಿಂಡಿ ತಿನಿಸು ಮಾಡಿ ದಿನವನ್ನ ಸಂತಸದಿಂದ ಕಳೆದ್ರು. ಸದ್ಯ ಆ ಚಿಂಕಿ ಆರು‌ ಪುಟಾಣಿ ಮಕ್ಕಳನ್ನ ಹೆತ್ತು ಕೊಟ್ಟಿದೆ. ಕಲಾವಿದೆಯ ಚಿಂಕಿ ಪ್ರೀತಿ, ಚಾರ್ಲಿ ಸಿನೆಮಾ ನೆನಪಸುತ್ತೆ. ಬನ್ನಿ ಹಾಗಿದ್ರೆ ಆ ಚಿಂಕಿ ಯಾರು? ರಂಗಭೂಮಿ ಕಲಾವಿದೆಯ ಪ್ರಾಣಿ ಪ್ರೀತಿ ಕುರಿತ ಸ್ಟೋರಿ ಇಲ್ಲಿದೆ.


COMMERCIAL BREAK
SCROLL TO CONTINUE READING

ಹಸಿರು ಸೀರೆ, ಹಸಿರು ಬಳೆಗಳಿಂದ ಚಿಂಕಿಗೆ ಸಿಂಗಾರ. ಆರತಿ ಬೆಳಗಿ ಸಿಹಿ ತಿಂಡಿ ತನಿಸು ತಿನ್ನಿಸಿ ಶ್ವಾನಕ್ಕೆ ಸೀಮಂತ ಕಾರ್ಯ ಮಾಡುವುದರ ಮೂಲಕ ಈಗ ಇಲ್ಲಿನ ರಂಗಭೂಮಿ ಕಲಾವಿದೆ ಶ್ವಾನ ಪ್ರೀತಿ ಮೆರೆದಿದ್ದಾರೆ.ನಟ ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರ 777 ಚಾರ್ಲಿ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿರುವ ಬೆನ್ನಲ್ಲೇ ಈಗ ನಿಜ ಜೀವನದಲ್ಲೂ ಕೂಡ ಶ್ವಾನ ಪ್ರೀತಿ ತೋರಿಸುವ ಮೂಲಕ ಚಾರ್ಲಿ ಮತ್ತು ಧರ್ಮರಾಜ್ ಪಾತ್ರವನ್ನು ನೆನಪಿಸಿದ್ದಾರೆ.Vikrant Rona: ‘ವಿಕ್ರಾಂತ್ ರೋಣ‘ದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರಾ ಕಿಚ್ಚ? ಸುದೀಪ್‌ ಹೀರೋನಾ? ವಿಲನ್ನಾ!!


ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಜ್ಯೋತಿ ಗುಳೆದಗುಡ್ಡ ಎಂಬ ರಂಗಭೂಮಿ ಕಲಾವಿದೆ ತಮ್ಮ ಸಾಕು‌ ನಾಯಿಗೆ ಸೀಮಂತ ಮಾಡಿ ಸುದ್ದಿಯಾಗಿದ್ದಾರೆ.ಜ್ಯೋತಿ ಗುಳೆದಗುಡ್ಡ ಮೂಲತಃ ರಂಗಭೂಮಿ ಕಲಾವಿದೆ, ನಾಟಕ ಪಾತ್ರದಾರಿಯೂ ಹೌದು, ಜ್ಯೋತಿ ಅವರಿಗೆ (ನಾಯಿ) ಶ್ವಾನದ ಮೇಲೆ ಎಲ್ಲಿಲ್ಲದ ಪ್ರೀತಿ, ಅದ್ರಲ್ಲೂ ಜ್ಯೂಲಿ ತಳಿಯ ಶ್ವಾನ ಅವ್ರಿಗೆ ಅಚ್ಚು ಮೆಚ್ಚು. ಹೀಗಾಗಿ ೩ ವರ್ಷದ ಹಿಂದೆ ಜ್ಯೋತಿ ಅವ್ರು, ಎರಡು ಪುಟಾಣಿ ಜ್ಯೂಲಿ ನಾಯಿಮರಿಗಳನ್ನ ಕೊಂಡು ಸಾಕ್ತಿದ್ದಾರೆ. ಒಂದಕ್ಕೆ ಚಿಂಕಿ, ಇನ್ನೊಂದಕ್ಕೆ ಮಿಂಕಿ ಎಂಬ ಹೆಸರಿಟ್ಟಿದ್ರು. ಸದ್ಯ ಚಿಂಕಿ ಎಂಬ ಹೆಸರಿನ ಹೆಣ್ಣುನಾಯಿ ಕಳೆದ ಒಂದು ವಾರದ ಹಿಂದೆ ಗರ್ಭಧರಿಸಿತ್ತು, ಹೀಗಾಗಿ ಮನೆಯ ಮಗಳಂತೆ ಆ ಗರ್ಭಿಣಿ ಚಿಂಕಿಗೆ ಸೀಮಂತ ಕಾರ್ಯಕ್ರಮ ಏರ್ಪಡಿಸಿದ್ರು. ಮನೆಯ ಮಗಳಂತೆ, ಚಿಂಕಿಗೆ ಹಸಿರು ಸೀರೆ, ಹಸಿರು ಬಳೆ, ಅರಿಶಿನ ಕುಂಕುಮ ಹಚ್ಚಿ, ಅಕ್ಕಪಕ್ಕದ ಮನೆಯವ್ರ ಸಹಾಯದಿಂದ ಆರತಿ ಬೆಳಗಿಸಿ ಸಂಭ್ರಮದಿಂದ ಸೀಮಂತ ಕಾರ್ಯ ಮಾಡಿ ಮುಗಿಸಿದ್ದಾರೆ.ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು..!


ಈ ಸಂತೋಷದ ಕ್ಷಣಗಳನ್ನ ಜ್ಯೋತಿಯವ್ರು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು, ಸದ್ಯ ಜ್ಯೋತಿ ಅವ್ರ ಶ್ವಾನ ಪ್ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ‌ ಮೆಚ್ಚುಗೆ ವ್ಯಕ್ತವಾಗಿದೆ. ಶ್ವಾನದ ಮೇಲಿರುವ ಪ್ರೀತಿ ಕಂಡು, ಚಾರ್ಲಿ ಸಿನೆಮಾವನ್ನು ನೆನಪಿಸಿದ್ದಾರೆ. ಇತ್ತ ಗರ್ಭಧರಿಸಿದ್ದ ಚಿಂಕಿ ಎರಡು ದಿನಗಳ‌ ಹಿಂದೆ, ೬ ಪುಟಾಣಿ ಶ್ವಾನಮರಿಗಳಿಗೆ ಜನ್ಮ ನೀಡಿದೆ. ಅದ್ರಲ್ಲಿ ಮೂರು, ಗಂಡು, ಮೂರು ಹೆಣ್ಣು ಶ್ವಾನಗಳಿವೆ. ಇತ್ತ  ಚಿಂಕಿಯ ಬಾಣಂತಿ ಕಾರ್ಯವನ್ನ ಜ್ಯೋತಿ ಅಚ್ಚುಕಟ್ಟಾಗಿ ನಿರ್ವಹಿಸ್ತಿದ್ದಾರೆ. ಅಲ್ಲದೇ ಈ ಆರು ಪುಟಾಣಿ ಶ್ವಾನ ಮರಿಗಳನ್ನ ಮಾರಾಟ ಮಾಡದೇ, ತಾವೇ ಸಾಕಲು ನಿರ್ಧರಿಸಿದ್ದಾರೆ. ಕಲಾವಿದೆ ಜ್ಯೋತಿ ಅವ್ರ ಶ್ವಾನ ಪ್ರೀತಿಗೆ ಅಕ್ಕಪಕ್ಕದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ ಜ್ಯೋತಿಯವ್ರ ಶ್ವಾನ ಪ್ರೀತಿ, ನಟ ರಕ್ಷಿತ್ ಶೆಟ್ಟಿಯವ್ರ ಚಾರ್ಲಿ ಸಿನೆಮಾವನ್ನ ನೆನಪಿಸೋದಂತೂ ಸತ್ಯ...ಜ್ಯೋತಿ ಅವ್ರ ಶ್ವಾನ‌ಪ್ರೀತಿಗೆ ನಮ್ಮದೂ ಒಂದು ಸಲಾಂ.


 https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.