ವಿಕ್ರಾಂತ್ ರೋಣ ಚಿತ್ರದ ಇಂಗ್ಲಿಷ್ ಟ್ರೈಲರ್‌ಗೆ ಹಾಲಿವುಡ್ ಅಭಿಮಾನಿ ಬಳಗವೂ ಫಿದಾ..!

ವಿಕ್ರಾಂತ್ ರೋಣ’ ಟ್ರೈಲರ್ ರಿಲೀಸ್ ಆಗಿ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಅದರಲ್ಲೂ ಇಂಗ್ಲಿಷ್ ಟ್ರೈಲರ್‌ಗೆ ಹಾಲಿವುಡ್ ಅಭಿಮಾನಿ ಬಳಗವೂ ಫಿದಾ ಆಗಿದ್ದು, ಕನ್ನಡ ಸಿನಿಮಾ ಹಾಲಿವುಡ್ ಅಂಗಳದಲ್ಲಿ ಹವಾ ಎಬ್ಬಿಸಿದೆ. ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ‘ವಿಕ್ರಾಂತ್ ರೋಣ’ ಅಬ್ಬರಕ್ಕೆ ಕೌಂಟ್‌ಡೌನ್  ಶುರುವಾಗಿದೆ.‌

Written by - Malathesha M | Edited by - Manjunath N | Last Updated : Jun 24, 2022, 08:29 PM IST
  • ಇನ್ನು ‘ವಿಕ್ರಾಂತ್ ರೋಣ’ ಟ್ರೈಲರ್‌ ರಿಲೀಸ್‌ ಆದ 24 ಗಂಟೆ ಒಳಗೆ 20 ಮಿಲಿಯನ್‌ ವೀವ್ಸ್‌ ಗಡಿ ದಾಟಿದೆ.
  • ಜೊತೆಗೆ ಬರೋಬ್ಬರಿ 1 ಮಿಲಿಯನ್‌ ಲೈಕ್ಸ್‌ ಕೂಡ ಗಿಟ್ಟಿಸಿದೆ.
  • ಈ ಮೂಲಕ ‘ವಿಕ್ರಾಂತ್ ರೋಣ’ ಜಗತ್ತಿನಾದ್ಯಂತ ಭಾರಿ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.
ವಿಕ್ರಾಂತ್ ರೋಣ ಚಿತ್ರದ ಇಂಗ್ಲಿಷ್ ಟ್ರೈಲರ್‌ಗೆ ಹಾಲಿವುಡ್ ಅಭಿಮಾನಿ ಬಳಗವೂ ಫಿದಾ..! title=
file photo

ಬೆಂಗಳೂರು: ವಿಕ್ರಾಂತ್ ರೋಣ’ ಟ್ರೈಲರ್ ರಿಲೀಸ್ ಆಗಿ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಅದರಲ್ಲೂ ಇಂಗ್ಲಿಷ್ ಟ್ರೈಲರ್‌ಗೆ ಹಾಲಿವುಡ್ ಅಭಿಮಾನಿ ಬಳಗವೂ ಫಿದಾ ಆಗಿದ್ದು, ಕನ್ನಡ ಸಿನಿಮಾ ಹಾಲಿವುಡ್ ಅಂಗಳದಲ್ಲಿ ಹವಾ ಎಬ್ಬಿಸಿದೆ. ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ‘ವಿಕ್ರಾಂತ್ ರೋಣ’ ಅಬ್ಬರಕ್ಕೆ ಕೌಂಟ್‌ಡೌನ್  ಶುರುವಾಗಿದೆ.‌

ಇನ್ನು ‘ವಿಕ್ರಾಂತ್ ರೋಣ’ ಟ್ರೈಲರ್‌ ರಿಲೀಸ್‌ ಆದ 24 ಗಂಟೆ ಒಳಗೆ 20 ಮಿಲಿಯನ್‌ ವೀವ್ಸ್‌ ಗಡಿ ದಾಟಿದೆ. ಜೊತೆಗೆ ಬರೋಬ್ಬರಿ 1 ಮಿಲಿಯನ್‌ ಲೈಕ್ಸ್‌ ಕೂಡ ಗಿಟ್ಟಿಸಿದೆ. ಈ ಮೂಲಕ ‘ವಿಕ್ರಾಂತ್ ರೋಣ’ ಜಗತ್ತಿನಾದ್ಯಂತ ಭಾರಿ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

ಇದನ್ನೂ ಓದಿ: Vikrant Rona: ‘ವಿಕ್ರಾಂತ್ ರೋಣ‘ದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರಾ ಕಿಚ್ಚ? ಸುದೀಪ್‌ ಹೀರೋನಾ? ವಿಲನ್ನಾ!!

ವೀವ್ಸ್‌ ರೆಕಾರ್ಡ್..!
ಕನ್ನಡ ಸಿನಿಮಾಗಳ ಕೆಪಾಸಿಟಿ ಕಂಡು ಹಾಲಿವುಡ್ ಮಂದಿಗೂ ಕುತೂಹಲ ಕೆರಳುತ್ತಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ‘ವಿಕ್ರಾಂತ್ ರೋಣ’ ಟ್ರೈಲರ್ ಭಾರಿ ಹವಾ ಎಬ್ಬಿಸಿದ್ದು, ಗುರುವಾರ ಸಂಜೆ ರಿಲೀಸ್ ಆದ ‘ವಿಕ್ರಾಂತ್ ರೋಣ’ ಟ್ರೈಲರ್ 20 ಮಿಲಿಯನ್‌ಗೂ ಹೆಚ್ಚು ವೀವ್ಸ್ ಗಿಟ್ಟಿಸಿಕೊಂಡಿದೆ. ಈ ಮೂಲಕ ನೂರಾರು ಮಿಲಿಯನ್ ವೀವ್ಸ್ ಗಡಿ ದಾಟಲು ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು..!

ಇದು ಹಾಲಿವುಡ್ ಅಂಗಳದಲ್ಲೂ ಸಂಚಲನ ಸೃಷ್ಟಿಸಿದ್ದು, ಟ್ರೈಲರ್ ನೋಡಿ ಫಿದಾ ಆಗಿರುವ ನಟ ಕಿಚ್ಚ ಸುದೀಪ್ ಫ್ಯಾನ್ಸ್, ಸಿನಿಮಾ ಯಾವಾಗ ಕಣ್ತುಂಬಿಕೊಳ್ತಿವೋ ಅಂತಾ ಕಾಯ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ‘ವಿಕ್ರಾಂತ್ ರೋಣ’ ಅಭಿಮಾನಿಗಳ ಅಬ್ಬರ ಜೋರಾಗಿದೆ.

ಅಷ್ಟಕ್ಕೂ ಕನ್ನಡಿಗರ ಚಿತ್ರವೊಂದು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹಾಲಿವುಡ್ ಬಾಗಿಲು ಬಡಿಯುತ್ತಿದೆ. ‘ಪ್ಯಾನ್ ಇಂಡಿಯಾ’ ಅಲ್ಲ ‘ಪ್ಯಾನ್ ವರ್ಲ್ಡ್’ ಅನ್ನೋದನ್ನ ಅಭಿಮಾನಿಗಳ ಪಾಲಿನ ಪ್ರೀತಿಯ ನಟ ಅಭಿನಯ ಚಕ್ರವರ್ತಿ ಸುದೀಪ್ ಅವರು ತೋರಿಸಿಕೊಟ್ಟಿದ್ದಾರೆ. ಇನ್ನು ಈ ಹೊತ್ತಲ್ಲೇ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್ ಆಗಿದ್ದು ದೇಶಾದ್ಯಂತ ಹವಾ ಕ್ರಿಯೇಟ್ ಮಾಡಿದೆ. ನಟ ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಇದು ‘ಡಬಲ್ ಸರ್ಪ್ರೈಸ್’ ಎನ್ನಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News