Biker dragged an old man: ಬೆಂಗಳೂರು: ಟಾಟಾ ಸುಮೋಗೆ ಡಿಕ್ಕಿ ಹೊಡೆದ ಬೈಕ್ ಸವಾರನನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಪರಾರಿಯಾಗುವಾಗ ಹಿಡಿಯಲು ಬಂದ ಟಾಟಾ ಸುಮೋ ಚಾಲಕನನ್ನು ವೃದ್ಧನೆಂದು ನೋಡದೆ ಸುಮಾರು ಒಂದು‌‌ ಕಿಲೋಮೀಟರ್ ವರೆಗೂ ಪ್ರಾಣಿಯಂತೆ ಎಳೆದೊಯ್ದಿರುವ ಘಟನೆ ವಿಜಯನಗರ‌ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಅವನ ಕುಟುಂಬ ಒಂದು ವರ್ಷದಲ್ಲಿ ಸಾಯಲಿ..” ಹುಂಡಿಯಲ್ಲಿ ಸಿಕ್ಕಿತು ಬೆಚ್ಚಿ ಬೀಳುವ ಪತ್ರಗಳು..!


ಇಂದು ಬೆಳಗ್ಗೆ ಮಾಗಡಿ ರೋಡ್ ಟೋಲ್ ಗೇಟ್ ಬಳಿ ಒನ್ ವೇ ಮಾರ್ಗದಲ್ಲಿ ವೇಗವಾಗಿ ಬಂದ ಸಾಹೀಲ್ ಎಂಬಾತ ಟಾಟಾ ಸುಮೋ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಚಾಲಕ ಮುತ್ತಪ್ಪನೊಂದಿಗೆ ಮಾತಿನ ಚಕಮಕಿ ನಡೆಸಿ‌ ಬೈಕ್ ಹತ್ತಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.


ಪರಾರಿಯಾಗುವಾಗ ಬೈಕ್ ನ ಹಿಂಬದಿ ಸೀಟ್ ಭಾಗವನ್ನ ಮುತ್ತಪ್ಪ ಹಿಡಿದಿದ್ದಾ‌ರೆ.‌ ಇದಕ್ಕೆ ತಲೆಕೆಡಿಸಿಕೊಳ್ಳದ ಬೈಕ್ ಸವಾರ ಬೈಕ್ ಸ್ಟಾರ್ಟ್ ಮಾಡಿದ್ದಾನೆ. ಮಾಗಡಿ ರಸ್ತೆ ಟೋಲ್ ಗೇಟ್ ನಿಂದ ಹೊಸಹಳ್ಳಿ ಮೆಟ್ರೋ ನಿಲ್ದಾಣದವರೆಗೆ ದರದರನೆ ಎಳೆದೊಯ್ದಿದ್ದಾನೆ. ಅಲ್ಲದೆ‌ ಜಿಗ್ ಜಾಗ್ ಡ್ರೈವಿಂಗ್ ಮಾಡಿದ್ದಾನೆ. ಮಾರ್ಗ ಮಧ್ಯೆ ವಾಹನ ಸವಾರರು ನಿಲ್ಲಿಸುವಂತೆ ಹೇಳಿದರೂ ಬೈಕ್ ಚಾಲನೆ‌ ಮುಂದುವರೆಸಿದ್ದ. ಈತನನ್ನ ಫಾಲೋ ಮಾಡಿದ ಸಾರ್ವಜನಿಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಆತನನ್ನ ಹಿಂಬಲಿಸಿ ಬೈಕ್ ಅಡ್ಡಗಟ್ಟಿದ್ದಾರೆ.


ಈ ವೇಳೆ ಪ್ರಶ್ನೆ ಮಾಡಿದಾಗ ಸಾಹೀಲ್ ಏರು ಧ್ವನಿಯಲ್ಲಿ ಉತ್ತರಿಸಿದ್ದರಿಂದ ಸ್ಥಳೀಯರು ಥಳಿಸಿದ್ದಾರೆ.‌ ಮತ್ತೊಂದೆಡೆ ವೃದ್ಧ ಮುತ್ತಪ್ಪ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಗಾಗಿ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.‌


ಇದನ್ನೂ ಓದಿ: "ಬಿಜೆಪಿಯವರು ಅಧಿಕಾರ ಇದ್ದಾಗ ಏನನ್ನೂ ಮಾಡದೆ, ಅಧಿಕಾರ ಹೋಗುವಾಗ ಮಾಡುತ್ತೇವೆ ಎನ್ನುತ್ತಿದ್ದಾರೆ"


ವಿಜಯನಗರ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸಾಹೀಲ್ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.