Santro Ravi CID Custody: ಜ.30ರವರೆಗೆ ಸಿಐಡಿ ವಶಕ್ಕೆ ಸ್ಯಾಂಟ್ರೋ ರವಿ!

Santro Ravi Case: ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯಕ್ಕೆ ತೆಲೆನೋವಾಗಿದ್ದ ವಂಚಕ ಕೆ.ಎಸ್.ಮಂಜುನಾಥ್ ಅಲಿಯಾಸ್​ ಸ್ಯಾಂಟ್ರೋ ರವಿಯನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು.

Written by - Puttaraj K Alur | Last Updated : Jan 17, 2023, 03:47 PM IST
  • ಕೆ.ಎಸ್.ಮಂಜುನಾಥ್ ಅಲಿಯಾಸ್​ ಸ್ಯಾಂಟ್ರೋ ರವಿ ಜನವರಿ 30ರವರೆಗೂ ಸಿಐಡಿ ವಶಕ್ಕೆ
  • ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶ
  • ಸ್ಯಾಂಟ್ರೋ ರವಿಯನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದ ಸಿಐಡಿ ಪೊಲೀಸರು
Santro Ravi CID Custody: ಜ.30ರವರೆಗೆ ಸಿಐಡಿ ವಶಕ್ಕೆ ಸ್ಯಾಂಟ್ರೋ ರವಿ!  title=
ಸ್ಯಾಂಟ್ರೋ ರವಿ ಜ.30ರವರೆ ಸಿಐಡಿ ವಶಕ್ಕೆ

ಮೈಸೂರು: ವಂಚಕ ಕೆ.ಎಸ್.ಮಂಜುನಾಥ್ ಅಲಿಯಾಸ್​ ಸ್ಯಾಂಟ್ರೋ ರವಿಯನ್ನು ಜನವರಿ 30ರವರೆಗೂ ಸಿಐಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಂಗಳವಾರ ಆದೇಶ ಹೊರಡಿಸಿದೆ.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ‘ಸ್ಯಾಂಟ್ರೋ ರವಿ'ಯನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ಮನವಿ ಮಾಡಿದ್ದರು. ಸಿಐಡಿ ಅರ್ಜಿ ಪುರಸ್ಕರಿಸಿರುವ ಮೈಸೂರು ಕೋರ್ಟ್ ಸ್ಯಾಂಟ್ರೋ ರವಿಯನ್ನು ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.  

ಇದನ್ನೂ ಓದಿ: ಸಿದ್ದು ಕಂಡ್ರೆ ಮೋದಿಗೆ ಭಯ- ಅದಕ್ಕೇ ರಾಜ್ಯಕ್ಕೆ ಓಡೋಡಿ ಬರ್ತಿದ್ದಾರೆ: ಕೈ ಶಾಸಕ ಪುಟ್ಟರಂಗಶೆಟ್ಟಿ

ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯಕ್ಕೆ ತೆಲೆನೋವಾಗಿದ್ದ ಸ್ಯಾಂಟ್ರೋ ರವಿಯನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು. ಸ್ಯಾಂಟ್ರೋ ರವಿ ಪ್ರಕರಣದ ತನಿಖಾ ಜವಾಬ್ಜಾರಿಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಸೋಮವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು. ವಂಚಕನ ವಿರುದ್ಧ ಹಲವಾರು ದೂರುಗಳ ದಾಖಲಾಗಿರುವ ಹಿನ್ನೆಲೆ ಉನ್ನತಮಟ್ಟದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಐಡಿಗೆ ಆದೇಶಿಸಿದೆ ಎಂದು ಅವರು ಹೇಳಿದ್ದರು.

ಮೈಸೂರಿನ ವಿಜಯನಗರ ಠಾಣೆಯಲ್ಲಿ ಹೆಂಡತಿ ದೂರು ನೀಡುತ್ತಿದ್ದಂತಿಯೇ ಸ್ಯಾಂಟ್ರೊ ರವಿ ಪರಾರಿಯಾಗಿದ್ದ. 11 ದಿನಗಳ ಬಳಿಕ ಶುಕ್ರವಾರ ಗುಜರಾತ್‌ನಲ್ಲಿ ಸ್ಯಾಂಟ್ರೊ ರವಿಯನ್ನು ಬಂಧಿಸಿ, ಬಳಿಕ ಮೈಸೂರಿಗೆ ಕರೆತರಲಾಗಿತ್ತು. ಸ್ಯಾಂಟ್ರೋ ರವಿ ತನ್ನ ಚಹರೆಯನ್ನೇ ಬದಲಾಯಿಸಿಕೊಂಡಿದ್ದ. ಗಡ್ಡ, ಮೀಸೆ ಬೋಳಿಸಿಕೊಂಡು ಯಾರಿಗೂ ಗುರುತು ಸಿಗದಂತೆ ವಿಗ್ ಧರಿಸಿ ಓಡಾಡುತ್ತಿದ್ದ.  

ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಿದ್ದು ಕುಮಾರಸ್ವಾಮಿ ಅಲ್ಲ ನಾನು: ಚಲುವರಾಯಸ್ವಾಮಿ

ಮೈಸೂರು ಮತ್ತು ರಾಮನಗರ ಪೊಲೀಸರ ವಿಶೇಷ ತಂಡ ಸ್ಯಾಂಟ್ರೋ ರವಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿತ್ತು. ಗುಜರಾತ್ ಪೊಲೀಸರ ಸಹಕಾರದಿಂದ ವಂಚಕನನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಎಡಿಜಿಪಿ ಅಲೋಕ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಸ್ಯಾಂಟ್ರೋ ರವಿಯ ಬಂಧನದ ಬಗ್ಗೆ ಖಾಕಿಪಡೆ ನಡೆಸಿದ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದರು.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News