ಚಾಮರಾಜನಗರ: ಬದನೆಕಾಯಿಗೆ ಮಾರುಕಟ್ಟೆಯಲ್ಲಿ 30 ರೂ. ತನಕ ಧಾರಣೆ ಇದ್ದು ಕಳಪೆ ಬೀಜ ಬಿತ್ತನೆ ಮಾಡಿದ್ದರಿಂದ ಬೆಳೆ ಬಾರದೇ ರೈತ ಕಂಗಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಹಸಗೂಲಿ ಗ್ರಾಮದ ರೈತ ಲೋಕೇಶ್ ಎಂಬವರು ಕಳಪೆ ಬೀಜ ಬಿತ್ತನೆಯಿಂದ ವಂಚನೆಗೊಳಗಾಗಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಬೆಳೆ ಇಲ್ಲದೇ ರೈತ ಕಂಗಲಾಗಿದ್ದಾನೆ.


ಲಲಿತಾ ಸೀಡ್ಸ್ ಎಂಬ ಕಂಪನಿಯಿಂದ ಗುಂಡುಬದನೆ ಬಿತ್ತನೆ ಬೀಜವನ್ನು ಲೋಕೇಶ್ ಖರೀದಿ ಮಾಡಿದ್ದು ಒಂದೂವರೆ ಲಕ್ಷ ಖರ್ಚು ಮಾಡಿ ಒಂದು ಎಕರೆ ಪ್ರದೇಶದಲ್ಲಿ ಗೊಬ್ಬರ, ಬೀಜೋಪಚಾರ ಮಾಡಿದ್ದರೂ ಬೆಳೆ ಕೈ ಸೇರುವ ಸಮಯದಲ್ಲಿ ಕೇವಲ ರೈತನಿಗೆ ಒಣ ಹೂವು ಸಿಕ್ಕಿದೆ.


ಇದನ್ನೂ ಓದಿ- ಲೋಕಸಭೆ ಚುನಾವಣೆ ತಯಾರಿಗೆ ಪೂರ್ವಭಾವಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್


ಲಕ್ಷಾಂತರ ರೂ. ಹಣ ವ್ಯಯಿಸಿ ಬೇಸಾಯ ಮಾಡಿದ್ದ ರೈತ ಸದ್ಯ ಕಂಗಲಾಗಿದ್ದು ಈಗಿರುವ ಧಾರಣೆಯಲ್ಲಿ 8-10 ಲಕ್ಷ ರೂ. ಆದಾಯ ಬರುತ್ತಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.


ಅವಧಿ ಮೀರಿದ ಬೀಜ ವಿತರಣೆ: 
ಸ್ಥಳೀಯ ನರ್ಸರಿ ಮಾಲೀಕರ ಬಳಿ ಲಲಿತಾ ಸೀಡ್ಸ್ ಎಂಬ ಕಂಪನಿಯ 4400 ಗುಂಡು ಬದನೆ ಬಿತ್ತನೆ ಬೀಜವನ್ನ ಖರೀದಿಸಿದ್ದು  ಬಿತ್ತನೆ ಬೀಜವನ್ನ ವಿತರಿಸುವ ವೇಳೆ ಕಂಪನಿ ಅವರು  2023 ರ ಫೆಬ್ರವರಿ 28 ರಲ್ಲೇ ಅವಧಿ ಮುಗಿದ ಬಿತ್ತನೆ ಬೀಜವನ್ನು ಸೆಪ್ಟೆಂಬರ್ ನಲ್ಲಿ  ನೀಡಿರುವುದು ಈ ಪ್ರಮಾದಕ್ಕೆ ಕಾರಣವಾಗಿದೆ.


ಒಂದೂವರೆ ಎಕರೆ ಜಮೀನಿನಲ್ಲಿ 4400 ಬಿತ್ತನೆ ಬೀಜವನ್ನ ಹಾಕಿದ್ದ ರೈತನಿಗೆ 55 ದಿನಗಳ ಬಳಿಕ ಫಸಲು ಕೈ ಸೇರಬೇಕಿತ್ತು ಆದ್ರೆ 120 ದಿನ ಕಳೆದರು ಸಹ ಸೊಂಪಾಗಿ ಬೆಳೆದ ಗಿಡದಲ್ಲಿ ರೈತ ಲೋಕೇಶ್ ಗೆ ಕಂಡಿದ್ದು ಕೇವಲ ಬಾಡಿದ ಹೂವು ಮತ್ತು ಮೊಗ್ಗು, ಕೈ  ಸೇರಬೇಕಿದ್ದ ಬೆಳೆ ಬಾರದೇ  ರೈತ ಕಂಗಾಲಾಗಿದ್ದಾನೆ. 


ಇದನ್ನೂ ಓದಿ- ಶೌಚಾಲಯವನ್ನು ಮಕ್ಕಳೇ ಸ್ವಚ್ಚಗೊಳಿಸಿದರೆ ತಪ್ಪಿಲ್ಲ, ಇದು ಶಿಕ್ಷಣದ ಒಂದು ಭಾಗ : ಯುಟಿ ಖಾದರ್


ತೋಟಗಾರಿಕೆ ಇಲಾಖೆ ಸಿಬ್ಬಂದಿ ಭೇಟಿ
ಮಂಗಳವಾರದಂದು ತೋಟಗಾರಿಕೆ ಇಲಾಖೆ ಸಿಬ್ಬಂದಿ ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ದೂರು ಕೊಟ್ಟರೇ ಕ್ರಮ ವಹಿಸುವ ಭರವಸೆ ನೀಡಿದ್ದಾರೆ.‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.