ಮಂಜೂರಾದ ಪೂರ್ತಿ ಸಾಲದ ಹಣ ನೀಡದ ಹಣಕಾಸು ಸಂಸ್ಥೆಗೆ ರೂ.1 ಲಕ್ಷ ದಂಡ
ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಮಹಾಂತೇಶ ಹೂಲಿ ಅನ್ನುವವರು ಸೈಟ್ ಖರೀದಿಸಿ ಮನೆ ಕಟ್ಟಿಕೊಳ್ಳಲು ದಿ:22/09/2022 ರಂದು ಹುಬ್ಬಳ್ಳಿಯ ವಿದ್ಯಾನಗರದ ರೆಪ್ಕೋ ಹೋಮ ಫೈನಾನ್ಸ್‍ರವರಿಂದ ರೂ.12 ಲಕ್ಷ ಸಾಲ ಪಡೆದಿದ್ದರು.
ಹುಬ್ಬಳ್ಳಿ: ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಮಹಾಂತೇಶ ಹೂಲಿ ಅನ್ನುವವರು ಸೈಟ್ ಖರೀದಿಸಿ ಮನೆ ಕಟ್ಟಿಕೊಳ್ಳಲು ದಿ:22/09/2022 ರಂದು ಹುಬ್ಬಳ್ಳಿಯ ವಿದ್ಯಾನಗರದ ರೆಪ್ಕೋ ಹೋಮ ಫೈನಾನ್ಸ್‍ರವರಿಂದ ರೂ.12 ಲಕ್ಷ ಸಾಲ ಪಡೆದಿದ್ದರು.
ಮಂಜೂರಾದ ಒಟ್ಟು ಸಾಲವನ್ನು ಆಯಾ ಆಯಾ ಹಂತಗಳಲ್ಲಿ ಒಟ್ಟು 5 ಕಂತುಗಳಾಗಿಫೈನಾನ್ಸ್ ನವರು ದೂರುದಾರನಿಗೆ ಸಂದಾಯ ಮಾಡಲು ಒಪ್ಪಂದವಾಗಿತ್ತು. ಮೊದಲಿನ 3 ಕಂತುಗಳ ಹಣ ರೂ.9,50,000/-ಗಳನ್ನು ಎದುರುದಾರ ಪೈನಾನ್ಸ್ ನವರು ದೂರುದಾರನಿಗೆ ಕೊಟ್ಟಿದ್ದರು. ಆ ಹಣದಲ್ಲಿ ದೂರುದಾರ ಸೈಟ್ ಖರೀದಿಸಿ ಅದರಲ್ಲಿ ಮನೆ ಕಟ್ಟಿಸುವ ಕೆಲಸ ಪ್ರಾರಂಭಿಸಿದ್ದರು.4 ಮತ್ತು 5ನೇ ಕಂತಿನ ಸಾಲದ ಹಣವನ್ನು ಎದುರುದಾರರು ಪ್ಲಾಸ್ಟರ್ ಮತ್ತು ಪ್ಲೋರಿಂಗಗಾಗಿ ಕೊಡಬೇಕಾಗಿತ್ತು. ಆದರೆ ಪ್ಲಾಸ್ಟರ್ ಮತ್ತು ಪ್ಲೋರಿಂಗ ಮಾಡಿಸಿ ಆ ಬಗ್ಗೆ ಫೋಟೋ ಸಮೇತ ಸಾಕ್ಷಾಧಾರ ಕೊಟ್ಟಲ್ಲಿ ಮಾತ್ರ 4 ಮತ್ತು 5ನೇ ಕಂತಿನ ಹಣ ನೀಡುವುದಾಗಿ ಎದುರುದಾರ ರೆಪ್ಕೋ ಫೈನಾನ್ಸ್ ನವರು ಆಕ್ಷೇಪಣೆ ಎತ್ತಿದ್ದರು. ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೊರಿ ದೂರುದಾರ ತನ್ನ ಫಿರ್ಯಾದನ್ನು ದಿ:19/05/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಸಲ್ಲಿಸಿದ್ದರು.
ಇದನ್ನೂ ಓದಿ-ರಕ್ತದಲ್ಲಿ ಶೇಖರಣೆಗೊಂಡ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಮೂಲದಿಂದ ತೊಡೆದುಹಾಕುತ್ತವೆ ಈ ಬೀಜಗಳು!
ಪ್ಲಾಸ್ಟರ್ ಮತ್ತು ಪ್ಲೋರಿಂಗ ಮುಗಿದ ಮೇಲೆ 4 ಮತ್ತು 5ನೇ ಕಂತಿನ ಹಣ ಕೊಡುತ್ತೇವೆ ಅಂತಾ ಎದುರುದಾರರು ಆಕ್ಷೇಪಣೆ ಎತ್ತಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ. ಹಿರೇಮಠ ಅವರು ಉಭಯತರ ಮಧ್ಯೆ ಆಗಿರುವ ಸಾಲದ ಒಪ್ಪಂದ ಪತ್ರ ಓದಿದಾಗ ಪ್ಲಾಸ್ಟರ್ ಮತ್ತು ಪ್ಲೋರಿಂಗ್ ಮಾಡುವುದಕಾಗಿ 4ನೇ ಕಂತಿನ ಸಾಲದ ಹಣ ನೀಡುವುದು ಅಂತಾ ಕರಾರು ಇದೆ. ಆದರೆ ಆ ಕರಾರನ್ನು ಎದುರುದಾರ ಫೈನಾನ್ಸ್ ನವರು ತಿರುಚಿ ವಿನಾಕಾರಣ 4ನೇ ಕಂತಿನ ಹಣ ತಡೆ ಹಿಡಿದಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಎದುರುದಾರ ಫೈನಾನ್ಸ್ ನವರು ವರ್ಷಗಟ್ಟಲೇ ಕಾನೂನು ಬಾಹಿರವಾಗಿ 4 ಮತ್ತು 5ನೇ ಕಂತಿನ ಹಣ ಬಿಡುಗಡೆ ಮಾಡಲು ತಡೆಹಿಡಿದಿರುವುದರಿಂದ ಬಡವನಾದ ದೂರುದಾರನ ಮನೆ ಕಟ್ಟಿಕೊಳ್ಳುವ ಕನಸಿಗೆ ಮಣ್ಣೆರಚಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ಎದುರುದಾರರ ಅಂತಹ ವರ್ತನೆಯಿಂದ ದೂರುದಾರನಿಗೆ ಅನಾನುಕೂಲ, ಮಾನಸಿಕ ತೊಂದರೆ ಮತ್ತು ಹಣಕಾಸಿನ ನಷ್ಟವಾಗಿದೆ ಅಂತಾ ಅಭಿಪ್ರಾಯಪಟ್ಟು ಬಾಕಿ ಉಳಿದಿರುವ 4ನೇ ಕಂತಿನ ಹಣವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ಬಿಡುಗಡೆಗೊಳಿಸುವಂತೆ ಆದೇಶಿಸಿದೆ. ದೂರುದಾರನಿಗೆ ಮಾಡಿದ ಪ್ರಮಾದಕ್ಕಾಗಿ ರೂ.1 ಲಕ್ಷ ಪರಿಹಾರ ಮತ್ತು ರೂ. 10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡಲು ರೆಪ್ಕೋ ಪೈನಾನ್ಸ್ ನವರಿಗೆ ಆಯೋಗ ನಿರ್ದೇಶಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ